ಪ್ರತಿ ತಿಂಗಳು ‘ಆ ದಿನಗಳು’ ಬಂದರೆ ಸಾಕು ಈ ಬಾಲೆಗೆ ಎಲ್ಲಿಲ್ಲದ ತಳಮಳ ಆರಂಭವಾಗಿ ಬಿಡುತ್ತದೆ.
ಆ ಹೊಟ್ಟೆ ನೋವಿಗಿಂತಲೂ ಹೆತ್ತವರು, ತನ್ನವರು, ತನ್ನೂರಿನವರು ನಡೆಸಿಕೊಳ್ಳುವ ರೀತಿ ಅವಳ ಮನಸ್ಸಿನ ಮೇಲೆ ಎಂದಿಗೂ ವಾಸಿಯಾಗದ ಗಾಯ ಮಾಡಿದೆ. ಮೊನ್ನೆ ತಾನೆ ಮೈನೆರೆದಿರುವ 13ರ ಆ ಬಾಲೆ ಹೆತ್ತಮ್ಮನ ಮಡಿಲಲ್ಲಿ ಮಲಗಿ, ‘ಅಮ್ಮಾ ನಮಗೆ ಯಾಕೆ ಇಂಥ ಕಷ್ಟ? ನಾವ್ಯಾಕೆ ಆ ದಿನಗಳಲ್ಲಿ ಮನೆಯಲ್ಲಿ ಮಲಗಬಾರದು? ನೀನ್ಯಾಕೆ ನನಗೆ ತಟ್ಟೆ–ಲೋಟ ಬ್ಯಾರೆ ಇಡ್ತೀಯಾ? ಹೇಳಮ್ಮಾ ಯಾಕೆ ಹೀಗೆ ಮಾಡ್ತೀಯಾ?’ ಹೀಗೆ ಮಗಳು ಮಳೆಯಂತೆ ಸುರಿಸುವ ಪ್ರಶ್ನೆಗಳಿಗೆ ಆ ತಾಯಿಯದು ಒಂದೇ ಉತ್ತರ. ‘ಇದು ನಮ್ಮ ಸಂಪ್ರದಾಯ ಮಗಳೇ’.

‘ಶತಮಾನಗಳಿಂದಲೂ ಹೆಣ್ಣು ಮಕ್ಕಳು ಇದನ್ನು ಪ್ರಶ್ನಿಸದೇ ಒಪ್ಪಿಕೊಂಡು ಬಂದಿದ್ದೇವೆ. ನೀನೂ ಪ್ರಶ್ನೆ ಮಾಡಬೇಡ. ಇದನ್ನು ಧಿಕ್ಕರಿಸಬೇಡ. ಹಾಗೇನಾದ್ರೂ ಆದ್ರೆ, ಆ ಜುಂಜಪ್ಪ ದ್ಯಾವ್ರ ಶಾಪ ತಟ್ಟುತ್ತೆ...!’

–ಇದು ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಸತ್ತೂರಿನಿಂದ ಕೇವಲ ಎರಡು ಕಿ.ಮೀ. ದೂರವಿರುವ ಜುಂಜಪ್ಪನ ಗೊಲ್ಲರ ಹಟ್ಟಿಯ ನೈಜ ಕಥೆ.

ಸುಮಾರು 130 ಮನೆಗಳಿರುವ ಆ ಹಳ್ಳಿಯಲ್ಲಿ 100 ಮನೆಗಳು ಗೊಲ್ಲ ಸಮುದಾಯಕ್ಕೆ ಸೇರಿದ್ದರೆ, 28 ಮನೆಗಳು ನಾಯಕ, 1 ಮಡಿವಾಳ ಮತ್ತೊಂದು ಲಿಂಗಾಯತ ಸಮುದಾಯಕ್ಕೆ ಸೇರಿದವು.

ಗೊಲ್ಲರ ಆರಾಧ್ಯ ದೈವ ಜುಂಜಪ್ಪನಿಗೆ ಹೆದರಿ ಈ ಹಟ್ಟಿಯಲ್ಲಿ ಗೊಲ್ಲರೂ ಸೇರಿದಂತೆ ನಾಯಕ ಜನಾಂಗದ ಹೆಣ್ಣುಮಕ್ಕಳೂ ಮುಟ್ಟಾದಾಗ ಹೊರಗೆ ಕೂರುತ್ತಾರೆ. ಅದೇ ತಾನೇ ಹೆರಿಗೆಯಾದವರೂ ತಮ್ಮ ಎಳೇ ಕಂದಮ್ಮನ ಜತೆ ಹೊರಗೆ ಕೂರಬೇಕಾದ ಅನಿವಾರ್ಯ.

ಹೆಣ್ಣಾಗಿ ಹುಟ್ಟಬಾರದಿತ್ತು...
‘ರಾತ್ರಿ ಮುಟ್ಟಾದ್ರೂ ಹೊರಗೆ ಬಂದು ಬಿಡಬೇಕು. ಮುಟ್ಟಿನ ಕೊನೇ ದಿನದ ತನಕ ಮನೆಯಿಂದ ಹೊರಗೇ ಕಾಲ ಕಳೆಯಬೇಕು. ಆದ್ರೆ ಏನ್ಮಾಡೋದು ಚಳಿಯಲ್ಲೇ ನಡುಗ್ತಾ ಇಲ್ಲೇ ಮಲಗಿವ್ನಿ’ ಎಂದು ಹೆಸರು ಹೇಳಲಿಚ್ಛಿಸದ ಮಹಿಳೆಯೊಬ್ಬರು ತಮ್ಮ ಸಂಕಟ ಹಂಚಿಕೊಂಡರು.

‘ಈ ಸಲ ಮಗಳು ದೊಡ್ಡವಳಾಗಿದ್ದಾಳೆ. ಸ್ಕೂಲಿಗೆ ಹೋಗೋ ಆ ಮಗ, ಅವ್ವಾ ನಾ ಹೊರಗೆ ಮಲಕ್ಕಳಿಕ್ಕಿಲ್ಲ ಅಂತ ಹಟ ಮಾಡ್ತದೆ. ಹೇಗೋ ಸಮಾಧಾನ ಪಡಿಸಿ, ಅವರಪ್ಪನನ್ನೂ ಹೊರಗೆ ಮಲಗಿಸಿ ಸಂಪ್ರದಾಯ ಪಾಲನೆ ಮಾಡ್ತಾ ಇವ್ನಿ. ಹೆಣ್ಣಾಗಿ ಹುಟ್ಟಬಾರದಿತ್ತು ಅನ್ನಿಸುತ್ತೆ’ ಎಂದು ಕಣ್ಣಾಲಿ ತುಂಬಿಕೊಳ್ಳುತ್ತಾಳೆ ಆಕೆ.

‘ಇಲ್ಲಿವೆ ಮುಟ್ಟಿನ ಮನೆಗಳು...!’
ಈ ಹಟ್ಟಿಯ ಜನರಲ್ಲಿ ಅನಿಷ್ಟ ಪದ್ಧತಿ ಬಗ್ಗೆ ತಿಳಿವಳಿಕೆ ಮೂಡಿಸಬೇಕಾಗಿದ್ದ ಗ್ರಾಮ ಪಂಚಾಯ್ತಿಯೇ ಖುದ್ದಾಗಿ ‘ಮುಟ್ಟಿನ ಮನೆಗಳನ್ನು’ ನಿರ್ಮಿಸಿಕೊಟ್ಟಿದೆ! ಮಣ್ಣಿನ ನೆಲ, ಕಿಟಕಿ, ಬಾಗಿಲು ಇಲ್ಲದ ನಾಲ್ಕು ಗೋಡೆಗಳ ಕೊಠಡಿಯಲ್ಲಿ ಮುಟ್ಟಾದವರು, ಬಾಣಂತಿಯರು ಇರಬೇಕಾದ ಸ್ಥಿತಿ ಇದೆ.

‘ರಾತ್ರಿ ಹೊತ್ತು ಒಬ್ಬಳೇ ಮಲಗಲು ತುಂಬಾ ಹೆದರಿಕೆ ಆಗುತ್ತೆ. ಬಾಗಿಲು ಮುರಿದು ಹೋಗಿದೆ. ಮಳೆ ಬಂದರೆ ನೀರು ನುಗ್ಗುತ್ತೆ. ಸೊಳ್ಳೆಕಾಟ, ಕರೆಂಟೂ ಇಲ್ಲ. ನಾವು ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ?’ ಎಂಬ ಪ್ರಶ್ನೆ ಈ ಹೆಣ್ಣುಮಕ್ಕಳದು.

‘ಯಾಕೆ ಹೀಗೆ ಮಾಡ್ತೀರಿ? ಇದು ತಪ್ಪಲ್ವಾ? ಮೈಕೊರೆಯುವ ಈ ಚಳಿಯಲ್ಲಿ ಹಸಿ ಬಾಣಂತಿ ಎಳೆಮಗುವಿನೊಂದಿಗೆ ಹೇಗಿರಬೇಕು?’ ಅಂತ ಅಲ್ಲಿನ ಹಿರಿಯರನ್ನು ಪ್ರಶ್ನಿಸಿದರೆ, ‘ಇದು ಶತಮಾನಗಳಿಂದ ನಡ್ಕೊಂಡು ಬಂದೈತೆ. ಏನಾದ್ರೂ ತಪ್ಪಾದ್ರೆ ಆ ಜುಂಜಪ್ಪನ ಶಾಪ ತಟ್ಟುತ್ತೆ’ ಎಂದು ಉತ್ತರಿಸುತ್ತಾರೆ. ಈ ಅನಿಷ್ಟ ಸಂಪ್ರದಾಯ ವಿರೋಧಿಸಿದ ಮಹಿಳೆಯೊಬ್ಬಳು ಸ್ಟೌ ಸ್ಫೋಟದಿಂದಸಾವನ್ನಪ್ಪಿದ್ದು ದೇವರ ಶಾಪ ಎಂದೇ ನಂಬುತ್ತಾರೆ ಇವರು.

ಈ ಬುಡಕಟ್ಟಿನ ನಗರವಾಸಿಗಳು ಈ ಪದ್ಧತಿಯಿಂದ ಹೊರಗಿದ್ದಾರೆ. ಆದರೆ, ಈ ಸಂಪದ್ರಾಯ ಅನುಸರಿಸುತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಅವರನ್ನು ಹಟ್ಟಿಗಳಿಂದ ದೂರವಿಟ್ಟಿರುವ ನಿದರ್ಶನಗಳು ಇವೆ. ಅತ್ತ ಹಟ್ಟಿ ತೊರೆದು ಸಂಬಂಧಿಕರಿಂದ ದೂರವಾಗುವ ಬದಲು ಅನಿಷ್ಟ ಪದ್ಧತಿ ಅನುಸರಿಸಿ, ತಮ್ಮವರ ಸಂಬಂಧ ಉಳಿಸಿಕೊಳ್ಳಲು ಹೆಣಗುತ್ತಾರೆ ಮಹಿಳೆಯರು.

‘ಮುಡಿಚೆಟ್ಟಿನೊಳು ಹುಟ್ಟಿಬಂದು ಮುಟ್ಟಿತಟ್ಟೀ ಅನ್ತೀರಿ, ಮುಟ್ಟಾದ ಮೂರು ದಿನಕ ಹುಟ್ಟಿ ಬಂದಿರಿ ನೀವು, ಮುಡುಚೆಟ್ಟು ಎಲ್ಯಾದ ಹೇಳಣ್ಣಾ’ ಎಂದು 17ನೇ ಶತಮಾನದಲ್ಲೇ ಖ್ಯಾತ ತತ್ವಪದಕಾರ ಕಡಕೋಳ ಮಡಿವಾಳಪ್ಪ ಹೇಳಿದ್ದರು. 21ನೇ ಶತಮಾನದಲ್ಲಿ ಈ ಮೂಢರಿಗೆ ಅರ್ಥವಾಗುವುದಾದರೂ ಯಾವಾಗ?

ರಾಮನಗರದಲ್ಲೂ ತಪ್ಪಿಲ್ಲ ವನವಾಸ...
ರಾಜ್ಯದಲ್ಲಿ ಸುಮಾರು ೧೩ ಲಕ್ಷಕ್ಕೂ ಅಧಿಕ ಜನಸಂಖ್ಯೆಯಲ್ಲಿರುವ ಈ ಸಮುದಾಯ, ಸುಮಾರು ೧೧ ಜಿಲ್ಲೆಗಳಲ್ಲಿ ಹರಿದು ಹಂಚಿಹೋಗಿದೆ. ಇವರ ಸಾಕ್ಷರತೆಯ ಪ್ರಮಾಣ ಶೇ.೦.೫ ಮಾತ್ರ. ರಾಮನಗರ ಜಿಲ್ಲೆಯಲ್ಲಿ ಸುಮಾರು ೧೩೫ ಗ್ರಾಮಗಳಲ್ಲಿ ವಾಸಿಸುತ್ತಿರುವ ಗೊಲ್ಲ ಸಮುದಾಯ, ಸುಮಾರು ೨೨ ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿದೆ. ಬೆಂಗಳೂರಿನ ಕಿಬ್ಬರಿಯಲ್ಲಿರುವ ರಾಮನಗರ ಜಿಲ್ಲೆಯಲ್ಲೂ ಗೊಲ್ಲರ ಸ್ಥಿತಿಗತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ.

ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ದೇವರದೊಡ್ಡಿ ಗ್ರಾಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಗೊಲ್ಲ ಸಮುದಾಯದ ಕುಟುಂಬಗಳಿವೆ. ಇತ್ತೀಚೆಗೆ ಮಗುವಿಗೆ ಜನ್ಮ ನೀಡಿರುವ ಹಸಿ ಬಾಣಂತಿ ಗಿರಿಜಾ, ಊರು ಹೊರಗಿನ ಜೋಪಡಿಯಲ್ಲಿ ಕಾಲ ಕಳೆಯುತ್ತಿದ್ದಾಳೆ. ಕಾರಣ, ದೇವರು, ದಿಂಡಿರು ಎಂಬ ಮೌಢ್ಯತೆ. ಮತ್ತು ರೂಢಿ, ಸಂಪ್ರದಾಯ ಆಚಾರಗಳು.

ಗೊಲ್ಲರ ಸಮುದಾಯದಲ್ಲಿ ಜನನ ಸಂಬಂಧಿ ಆಚರಣೆಗಳು ಕಠಿಣವಾಗಿರುತ್ತವೆ. ಗರ್ಭಿಣಿಗೆ ಹೆರಿಗೆ ನೋವು ಪ್ರಾರಂಭವಾದ ಕೂಡಲೇ ಊರ ಹೊರಗೆ ಚಿಕ್ಕಗುಡಿಸಲನ್ನು ನಿರ್ಮಿಸಿ ಅಲ್ಲಿ ಬಿಡುತ್ತಾರೆ. ಹೆರಿಗೆ ಸಂದರ್ಭದಲ್ಲಿ ಆಕೆಗೆ ಸಹಾಯಕ್ಕಾಗಿ ಬೇಡರ ಸೂಲಗಿತ್ತಿಯನ್ನು ನೇಮಿಸುತ್ತಾರೆ. ಹೆರಿಗೆಯಾಗಿ ಎರಡು ತಿಂಗಳು ಕಳೆಯುವ ವರೆಗೆ ಹಸಿ ಬಾಣಂತಿ ಮಳೆ, ಗಾಳಿ, ಬಿಸಿಲೆನ್ನದೆ ಊರ ಹೊರಗೆ ಕಾಲ ಕಳೆಯಬೇಕು. ಆಕೆಗೆ ಅಗತ್ಯವಿರುವ ಆಹಾರ ಪದಾರ್ಥಗಳನ್ನು ಒಂದು ಮೊರದಲ್ಲಿಟ್ಟು, ನೂಕಿ ಹೋಗುತ್ತಾರೆ. ಈ ಎಲ್ಲಾ ಘಟನೆಗಳಿಗೂ ಸೂತಕವೇ ಕಾರಣ.

ಬಾಣಂತಿಯ ಬಟ್ಟೆ, ಬರೆ ಶುಚಿಗೊಳಿಸಲು ಮಡಿವಾಳಗಿತ್ತಿಯನ್ನು ನೇಮಿಸುತ್ತಾರೆ. ಮೂರು ತಿಂಗಳು ಕಳೆದ ನಂತರ ಗುಡಿಸಲನ್ನು ಸಂಪೂರ್ಣವಾಗಿ ನಾಶ ಮಾಡಿ ಮಡಿಕೆ ಕುಡಿಕೆಗಳನ್ನು ಒಡೆದು ಬಾಣಂತಿಯನ್ನು ಮನೆಗೆ ಸೇರಿಸಿಕೊಳ್ಳುತ್ತಾರೆ.

ಈ ಪದ್ಧತಿ ತಪ್ಪು ಎಂದು ಸಮುದಾಯದ ಹಿರಿಯರಿಗೆ ಗೊತ್ತಿದ್ದರೂ ಸಂಪ್ರದಾಯ ಬಿಡಲು ಒಪ್ಪರು. ಆದ್ದರಿಂದ ಬಾಣಂತಿಯರು ಹಾಗೂ ಋತುಮತಿಯಾದ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಕೃಷ್ಣ ಕುಟೀರಗಳನ್ನು ನಿರ್ಮಿಸಿಕೊಡುವಂತೆ ಕೇಳುತ್ತಿದ್ದಾರೆ. ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿರುವ ಸರಕಾರದ ಕ್ರಮ ಗೊಲ್ಲರ ಸಮುದಾಯದ ಹೆಣ್ಣು ಮಕ್ಕಳ ಪಾಲಿಗೆ ಆಶಾಕಿರಣವಾಗಬಹುದೆ?
- ಮಾಹಿತಿ: ಎಸ್. ರುದ್ರೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.