ಶನಿವಾರ, ಜನವರಿ 18, 2020
25 °C

ಮುರುಘಾಮಠ ಜಾತ್ರಾ ಮಹೋತ್ಸವ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಇಲ್ಲಿನ ಮುರುಘಾಮಠದಲ್ಲಿ ಅಥಣಿ ಮುರುಘೇಂದ್ರ ಮಹಾ ಶಿವಯೋಗಿಗಳ ಜಾತ್ರಾ ಮಹೋತ್ಸವ ಜ. 24 ರಿಂದ 31ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.`ಗುತ್ತಲದ ಸಂಗನಬಸವ ಸ್ವಾಮೀಜಿ 24 ರಂದು ಬೆಳಿಗ್ಗೆ 9ಕ್ಕೆ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡುತ್ತಾರೆ. ಸಂಜೆ 5.30ಕ್ಕೆ ಮಠದ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆಯಿಂದ ಪ್ರಕಟಿಸಿರುವ 9 ಪುಸ್ತಕಗಳ ಬಿಡುಗಡೆ ಹಾಗೂ ಮಧುರಚೆನ್ನರ ಜನ್ಮಶತಮಾನೋತ್ಸವ ಆಚರಣೆ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ~ ಎಂದು ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.25 ರಂದು ಸಂಜೆ 5.30ಕ್ಕೆ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶರಣ ಸಾಹಿತ್ಯ ಹಾಗೂ ಡಾ. ಶಿ.ಚ.ನಂದಿಮಠ ಅವರ ಜನ್ಮಶತಮಾನೋತ್ಸವ ನಡೆಯಲಿದೆ. 26 ರಂದು ಸಂಜೆ 5.30ಕ್ಕೆ ಮಹಿಳಾ ಸಾಹಿತ್ಯ ಕಾರ್ಯಕ್ರಮ ಹಾಗೂ ಪ್ರೊ. ಸಂ.ಶಿ.ಭೂಸನೂರಮಠ ಅವರ ಜನ್ಮಶತಮಾನೋತ್ಸವ ನಡೆಯಲಿದೆ ಎಂದರು.27 ರಂದು ಬೆಳಿಗ್ಗೆ 7ಕ್ಕೆ ಡಾ. ಶಿವಮೂರ್ತಿ ಮುರಘಾ ಶರಣರ ಸಾನ್ನಿಧ್ಯದಲ್ಲಿ ಸಹಜ ಶಿವಯೋಗ ನಡೆಯುವುದು. ಸಂಜೆ 5.30ಕ್ಕೆ ಮೃತ್ಯುಂಜಯ ಮಹಾಂತ ಪ್ರಶಸ್ತಿ ಪ್ರದಾನ ಹಾಗೂ ಪ್ರೊ. ಶಿ.ಶಿ.ಬಸವನಾಳರ ಜನ್ಮಶತಮಾನೋತ್ಸವ ನಡೆಯಲಿದೆ. ಡಾ. ಚೆನ್ನವೀರ ಕಣವಿ, ಶಶಿಕಲಾ ಮಡಕಿ, ಬಸವರಾಜ ಪಾಟೀಲ ಸೇಡಂ, ಪೊಲೀಸ್ ಮಹಾ ನಿರೀಕ್ಷಕ ಶಂಕರ ಬಿದರಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 5 ಗ್ರಾಂ ಚಿನ್ನದ ಪದಕ, 10,000 ರೂ. ನಗದು ಒಳಗೊಂಡಿದೆ ಎಂದು ಹೇಳಿದರು.28 ರಂದು ಬೆಳಿಗ್ಗೆ 7ಕ್ಕೆ ಬಸವಪ್ರಭು ಸ್ವಾಮೀಜಿ ಹಾಗೂ ಶಿವಬಸವ ಸ್ವಾಮೀಜಿ ಸಮ್ಮುಖದಲ್ಲಿ ಸಹಜ ಶಿವಯೋಗ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಮಹಾಂತಪ್ಪಗಳವರ ಅಮೃತಶಿಲಾ ಪುತ್ಥಳಿ ಅನಾವರಣ ಹಾಗೂ 1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಹಾಂತ ಪ್ರಸಾದ ನಿಯಲದ ಉದ್ಘಾಟನೆ ನಡೆಯಲಿದೆ. ಸಂಜೆ 4ಕ್ಕೆ ಮುರುಘೇಂದ್ರ ಶಿವಯೋಗಿಗಳ ರಥೋತ್ಸವ ನಡೆಯಲಿದೆ ಎಂದರು.29 ರಂದು ಸಂಜೆ 5.30ಕ್ಕೆ ಮಕ್ಕಳ ಕಾರ್ಯಕ್ರಮ ಹಾಗೂ ಪ್ರೊ. ಸ.ಸ.ಮಾಳವಾಡರ ಜನ್ಮಶತಮಾನೋತ್ಸವ ಆಚರಣೆ ನಡೆಯಲಿದೆ. 30 ರಂದು ಸಂಜೆ 5.30ಕ್ಕೆ ಯುವಜನ ಕಾರ್ಯಕ್ರಮ ಹಾಗೂ ಈಶ್ವರ ಸಣಕಲ್ಲ ಅವರ ಜನ್ಮಶತಮಾನೋತ್ಸವ ಮತ್ತು 31 ರಂದು ಸಂಜೆ 5.30ಕ್ಕೆ ಜನಪದ ಕಾರ್ಯಕ್ರಮ ಹಾಗೂ ಡಾ. ಡಿ.ಎಸ್.ಕರ್ಕಿ ಜನ್ಮಶತಮಾನೋತ್ಸವ ಆಚರಣೆ ನಡೆಯಲಿದೆ ಎಂದು ವಿವರಿಸಿದರು.

ಪ್ರತಿಯೊಂದು ಸಮಾರಂಭದಲ್ಲಿ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ಸಚಿವರು, ಶಾಸಕರು, ಚುನಾಯಿತ ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದರು.`ಪ್ರತಿ ವರ್ಷದಂತೆ ಈ ಬಾರಿಯೂ ಚಕ್ಕಡಿ ಓಟದ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ~ ಎಂದು ಮಠದ ಟ್ರಸ್ಟ್ ಅಧ್ಯಕ್ಷ ವಿನಯ ಕುಲಕರ್ಣಿ ತಿಳಿಸಿದರು.

ಜಿ.ಜಿ.ದೊಡವಾಡ, ವಿ.ಎಸ್.ಪಾಟೀಲ, ನಾಗರಾಜ ಪಟ್ಟಣಶೆಟ್ಟಿ, ಎಂ.ವಿ.ವಡ್ಡಿನ, ಬಿ.ಎಸ್.ತೋಟದ, ಸಿ.ಎಸ್.ಪಾಟೀಲ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)