ಮುಷರಫ್ ಹೇಳಿಕೆ: ಕ್ಷಿಪ್ರ ಕ್ರಾಂತಿ ಅಲ್ಲಗಳೆಯಲಾಗದು

ಬುಧವಾರ, ಜೂಲೈ 17, 2019
29 °C

ಮುಷರಫ್ ಹೇಳಿಕೆ: ಕ್ಷಿಪ್ರ ಕ್ರಾಂತಿ ಅಲ್ಲಗಳೆಯಲಾಗದು

Published:
Updated:

ಲಂಡನ್ (ಪಿಟಿಐ): `ದೇಶವನ್ನು ರಕ್ಷಿಸಬೇಕೆಂದು ಪಾಕಿಸ್ತಾನದ ಜನರು ಮತ್ತೆ ಸೇನೆಯ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ಅಲ್ಲಿ ಸೇನಾ ಕ್ಷಿಪ್ರ ಕ್ರಾಂತಿಯ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ~ ಎಂದು ಪಾಕ್‌ನ ಮಾಜಿ ಸೇನಾ ಆಡಳಿತಗಾರ ಪರ್ವೇಜ್ ಮುಷರಫ್ ಭವಿಷ್ಯ ನುಡಿದಿದ್ದಾರೆ.ಪಾಕಿಸ್ತಾನದ ಸಂವಿಧಾನವು ಪರಮ ಪವಿತ್ರ ಎಂದು ಹೇಳಿರುವ ಅವರು, `ನಾವು ದೇಶದ ಸಂವಿಧಾನವನ್ನು ಎತ್ತಿ ಹಿಡಿಯಬೇಕೋ ಅಥವಾ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಬೇಕೋ?~ ಎಂದು ಪ್ರಶ್ನಿಸಿದ್ದಾರೆ.

ಮುಷರಫ್ ಬಂಧನಕ್ಕೆ ಪಾಕ್‌ನ ಬೇಹುಗಾರಿಕಾ ಸಂಸ್ಥೆ (ಎಫ್‌ಐಎ) ಇಂಟರ್‌ಪೋಲ್‌ಗೆ ಎರಡನೇ ಬಾರಿ ಜ್ಞಾಪಿಸಿರುವ ಬೆನ್ನಲ್ಲಿಯೇ ಮಾಜಿ ಸೇನಾಡಳಿತಗಾರ ಅಮೆರಿಕದಲ್ಲಿ ಕಾಣಿಸಿಕೊಂಡಿದ್ದಾರೆ.2007ರಲ್ಲಿ ನಡೆದ ಬೆನಜಿರ್ ಭುಟ್ಟೊ ಹತ್ಯೆ ಪ್ರಕರಣದಲ್ಲಿ ಮುಷರಫ್ ಅವರನ್ನು `ಘೋಷಿತ ಅಪರಾಧಿ~ ಎಂದು  ಅದು ಹಣೆಪಟ್ಟಿ ನೀಡಿದೆ.`ನಾನು ಪ್ರಾಣಾಪಾಯವನ್ನು ಲೆಕ್ಕಿಸದೇ ಪಾಕಿಸ್ತಾನಕ್ಕೆ ಮರಳುತ್ತೇನೆ~ ಎಂದು ಪುನರುಚ್ಚರಿಸಿರುವ ಮುಷರಫ್ ಅವರು ಸ್ವದೇಶಕ್ಕೆ ಮರಳುವ ನಿರ್ದಿಷ್ಟ  ದಿನವನ್ನು ಸ್ಪಷ್ಟಪಡಿಸಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry