ಮುಹೂರ್ತ ವಹಿವಾಟು: ಸೂಚ್ಯಂಕ ಏರಿಕೆ

7

ಮುಹೂರ್ತ ವಹಿವಾಟು: ಸೂಚ್ಯಂಕ ಏರಿಕೆ

Published:
Updated:

ಮುಂಬೈ (ಪಿಟಿಐ): ಬುಧವಾರ ಸಂಜೆ ನಡೆದ 90 ನಿಮಿಷಗಳ  ದೀಪಾವಳಿ ವಿಶೇಷ ಮುಹೂರ್ತ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 34 ಅಂಶಗಳ ಏರಿಕೆ ದಾಖಲಿಸಿದೆ.



ಸೂಚ್ಯಂಕ ಏರಿಕೆಯ ಮೂಲಕ ಸಂವತ್ಸ ವರ್ಷ 2068 ವಹಿವಾಟಿಗೆ ಶುಭ ಮುನ್ನುಡಿ ಬರೆಯಿತು.17,288ಅಂಶಗಳಿಗೆ ದೀಪಾವಳಿ ವಹಿವಾಟು ಕೊನೆಗೊಂಡಿತು. ವಿಶೇಷ ವಹಿವಾಟಿನಲ್ಲಿ ಸರ್ಕಾರಿ ಸ್ವಾಮ್ಯದ ಮತ್ತು ಬ್ಲೂಚಿಪ್ ಕಂಪೆನಿಗಳು ಹೆಚ್ಚಿನ ಲಾಭ ಮಾಡಿಕೊಂಡವು.



ಜಾಗತಿಕ ಷೇರು ಪೇಟೆಗಳು ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ, ಕಳೆದ ಎರಡು ವಹಿವಾಟು ದಿನಗಳಲ್ಲಿ ಸೂಚ್ಯಂಕ ಒಟ್ಟು 470 ಅಂಶಗಳಷ್ಟು ಚೇತರಿಕೆ ಕಂಡಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry