ಮೂಡಿಗೆರೆ: ವಾಹನ ಚಾಲನೆ ಸರ್ಕಸ್

ಮೂಡಿಗೆರೆ: ರಾಜ್ಯದ ಕರಾವಳಿ ಪ್ರದೇಶ ಹಾಗು ಪ್ರಸಿದ್ಧ ಯಾತ್ರಾಸ್ಥಳ ಧರ್ಮಸ್ಥಳಕ್ಕೆ ಸಂಪರ್ಕಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಗಳಲ್ಲಿ ಕಡೂರು-ಮಂಗಳೂರು ರಸ್ತೆಯು ಒಂದು. ಆದರೆ ಈ ರಸ್ತೆಯಲ್ಲಿ ಬಿದ್ದಿರುವ ಹೊಂಡ-ಗುಂಡಿಗಳನ್ನು ತಪ್ಪಿಸಲು ಚಾಲಕರು ಹರಸಾಹಸ ಪಡಬೇಕಾದ ಸ್ಥಿತಿ ಇದೆ.
ಪಟ್ಟಣದ ಲಯನ್ಸ್ ವೃತ್ತದಿಂದ ಹ್ಯಾಂಡ್ಪೋಸ್ಟ್ವರೆಗೆ ಸಾಗುವುದೇ ಸಾಹಸ. ಪಟ್ಟಣದ ಗಂಗನಮಕ್ಕಿ, ರೈತಭವನ, ಮಟನ್ ಮಾರ್ಕೆಟ್ ಬಳಿ ರಸ್ತೆ ಗುಂಡಿ ಬಿದ್ದಿದ್ದು, ಈ ಜಾಗದಲ್ಲಿ ನಿತ್ಯ ಅಪಘಾತವಾಗುತ್ತಿದೆ. ಎರಡು ಕಿ.ಮಿ ವ್ಯಾಪ್ತಿಯ ಈ ರಸ್ತೆಯಲ್ಲಿ ಒಂದು ವರ್ಷದಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ನಾಲ್ಕು ದಾಟಿದೆ.
ಆದರೆ ಇದುವರೆಗೂ ಈ ಜಾಗದಲ್ಲಿ ಅಪಘಾತ ವಲಯ ಎಂಬ ಮಾಹಿತಿ ನಾಮಫಲಕಗಳಿಲ್ಲ. ರಸ್ತೆ ಗುಂಡಿಗಳ ಬಗ್ಗೆ ಜನಪ್ರತಿನಿಧಿಗಳಿಗೆ ಪ್ರಶ್ನಿಸಿದರೆ `ರಸ್ತೆ ದುರಸ್ತಿಗೆ ಯೊಜನೆ ಸಿದ್ಧವಾಗುತ್ತಿದೆ~ ಎಂಬ ಸಿದ್ಧ ಉತ್ತರ ನೀಡಿ ನುಣಿಚಿ ಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಲೋಕಸಭಾ ಉಪ ಚುಣಾವಣೆ ನಡೆದಿದ್ದು, ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಪಕ್ಷಗಳ ಹಿರಿಯ ನಾಯಕರು ಈ ಗುಂಡಿ ರಸ್ತೆಯಲ್ಲೇ ಸಂಚರಿಸಿದರೂ ಜಾಣ ಕುರುಡನ್ನು ಪ್ರದರ್ಶಿಸ್ದ್ದಿದಾರೆ ಎನ್ನುತ್ತಾರೆ ಸಾರ್ವಜನಿಕರು.
ಗ್ರಾಮೀಣ ಪ್ರದೇಶ ಗಳಾದ ಕನ್ನೆಹಳ್ಳಿ- ಕೈಮರ, ಮಣ್ಣಿಕೆರೆ-ಜನ್ನಾಪುರ, ಮತ್ತಿ ಕಟ್ಟೆ- ಹೆಗ್ಗುಡ್ಲು, ಮೂಡಸಸಿ- ಕಾರ ಬೈಲು, ಕೆಂಜಿಗೆ-ಬಾನಳ್ಳಿ ರಸ್ತೆಗಳು ಡಾಂಬರು ಕಾಣದೆ ಹತ್ತಾರು ವರ್ಷ ಕಳೆದಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.