ಗುರುವಾರ , ಜನವರಿ 23, 2020
28 °C

ಮೂತ್ರಾಲಯ ಬೇಕು

– ಜಿ. ಎಸ್‌. ಪ್ರಭಾಕರ್‌ Updated:

ಅಕ್ಷರ ಗಾತ್ರ : | |

ಕೆ. ಆರ್. ಮಾರುಕಟ್ಟೆ, ಕಲಾಸಿಪಾಳ್ಯ ಬಸ್ ನಿಲ್ದಾಣ ಸುತ್ತಲೂ ಪ್ರತಿ ದಿನ ಲಕ್ಷಾಂತರ ಜನರು ವ್ಯಾಪಾರ ವಹಿವಾಟಿಗೋಸ್ಕರ ಬರುತ್ತಾರೆ. ತರಕಾರಿ, ಹಣ್ಣುಹಂಪಲು, ಮೀನು, ಮಾಂಸ, ಹೂವುಗಳ ವ್ಯಾಪಾರ ಭರದಿಂದ ಸಾಗುತ್ತದೆ. ಇಲ್ಲಿ ಶುಚಿತ್ವ ಬಹಳ ಕಡಿಮೆ. ಸದಾ ಕೆಟ್ಟ ವಾಸನೆ.ಸಾರ್ವಜನಿಕ ಮೂತ್ರಾಲಯಗಳು ದೂರದಲ್ಲಿ ಇದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೂತ್ರಾಲಯಗಳು ಬೇಕಾಗಿವೆ. ಪ್ರತಿದಿನ ಇಲ್ಲಿಗೆ ರೈತರು ಬಹಳ ಜನ ಬರುತ್ತಾರೆ. ಆದ್ದರಿಂದ ಇಲ್ಲಿ ಮೂತ್ರಾಲಯಗಳ ಅಗತ್ಯವಿದೆ. ಸಂಬಂಧಿಸಿದವರು ಮೂತ್ರಾಲಯ ನಿರ್ಮಾಣ ಹಾಗೂ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

 

ಪ್ರತಿಕ್ರಿಯಿಸಿ (+)