ಸೋಮವಾರ, ಮೇ 23, 2022
21 °C

ಮೂರು ನಿಮಿಷ ಗಡಗಡ ನಡುಗಿದ ಟೋಕಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಐಎಎನ್‌ಎಸ್): ಎಂತಹ ಭೂಕಂಪವನ್ನೂ ತಡೆದುಕೊಳ್ಳಬಲ್ಲಂತಹ ಕಟ್ಟಡಗಳನ್ನು ನಿರ್ಮಿಸುವುದರಲ್ಲಿ ಪಳಗಿರುವ ಜಪಾನೀಯರಿಗೆ ಶುಕ್ರವಾರ ನಿಜವಾದ ಪರೀಕ್ಷೆ ಎದುರಾಗಿತ್ತು. ಭಯಂಕರ ಭೂಕಂಪದಿಂದ ಇಡೀ ಟೋಕಿಯೊ ನಗರ ಮೂರು ನಿಮಿಷ ಗಡ ಗಡ ನಡುಗಿದರೂ ಅಲ್ಲಿನ ಹಲವು ಕಟ್ಟಡಗಳು ಮಾತ್ರ ತರಗೆಲೆಗಳಂತೆ ಕುಸಿಯಲಿಲ್ಲ!ಟೋಕಿಯೊದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಎಸ್. ಅಜಯ್ ಕುಮಾರ್ ತಮ್ಮ ಅನುಭವವನ್ನು ದೂರವಾಣಿ ಮೂಲಕ ವಾರ್ತಾಸಂಸ್ಥೆಗೆ ತಿಳಿಸಿದ್ದಾರೆ.

ಅಜಯ್ ಕುಮಾರ್ ಅವರು ಒಂಬತ್ತು ಮಹಡಿಗಳ ಕಟ್ಟಡದಲ್ಲಿನ ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ ಅವರು ಎತ್ತಿ ಎಸೆಯಲ್ಪಟ್ಟಾಗ ಗೋಡೆಗೆ ಅಪ್ಪಳಿಸಿದರು ಮತ್ತು ನೆಲಕ್ಕೆ ಬಿದ್ದರು. ಇತರರು ಓಲಾಡುತ್ತಿದ್ದರು ಮತ್ತು ಚೀರಾಡುತ್ತಿದ್ದರು. ಇಡೀ ಕಟ್ಟಡ ಜೋಲಾಡುತ್ತಿತ್ತು. ಮೂರು ನಿಮಿಷ ಕಾಲ ಅವರಿಗೆ ಏನು ನಡೆಯುತ್ತಿದೆ ಎಂಬುದೇ ಗ್ತೊಗಲಿಲ್ಲವಂತೆ.‘ಇಷ್ಟು ಪ್ರಬಲ ಭೂಕಂಪ ಸಂಭಸಿದರೂ ನಾನಿದ್ದ ಕಟ್ಟಡ ಕುಸಿದು ಬೀಳಲಿಲ್ಲ. ಹಾಗೇನಾದರೂ ಆಗಿದಿದ್ದರೆ ನಾನಿಂದು ಮಾತನಾಡಲು ಇರುತ್ತಿರಲಿಲ್ಲ’ ಎಂದು ಮೂರು ತಿಂಗಳ ಹಿಂದೆಯಷ್ಟೇ ಟೋಕಿಯೊಗೆ ತೆರಳಿದ್ದ ಅವರು ಹೇಳುತ್ತಾರೆ. ದೊಡ್ಡ ಕಂಪನ ಕೊನೆಗೊಂಡಾಗ ಕಟ್ಟಡದೊಳಗಿದ್ದ ಭಾರತದ ಸಾಫ್ಟ್‌ವೇರ್ ಎಂಜಿನಿಯರ್‌ಗಳೆಲ್ಲ ಹೊರಗೆ ಬಂದರು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.