ಚಿಕ್ಕೋಡಿ: ತಾಲ್ಲೂಕಿನಲ್ಲಿ ತುಂಬಿ ಹರಿಯುತ್ತಿರುವ ಹಿರಿಹೊಳೆ ಕೃಷ್ಣಾ ಮತ್ತು ಉಪನದಿಗಳ ನೀರಿನಲ್ಲಿ ಮುಳುಗಡೆಯಾಗಿದ್ದ ಒಟ್ಟು ಐದು ಕೆಳಮಟ್ಟದ ಸೇತುವೆಗಳ ಪೈಕಿ ಶುಕ್ರವಾರ ಸಂಜೆವರೆಗೆ ಮೂರು ಸೇತುವೆಗಳು ಸಂಚಾರಕ್ಕೆ ಮುಕ್ತಗೊಂಡಿವೆ. ಆದರೆ, ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗುರುವಾರಕ್ಕಿಂತ 348 ಕ್ಯೂಸೆಕ್ ಇಳಿಕೆ ದಾಖಲಾಗಿದೆ.

ಕೃಷ್ಣೆಯ ಉಗಮಸ್ಥಾನ ಮಹಾಬಳೇಶ್ವರ ಸೇರಿದಂತೆ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಬಿಡದೇ ಸುರಿಯುತ್ತಿದ್ದ ಮಳೆ ಪ್ರಮಾಣವೂ ಕಳೆದ 24 ಗಂಟೆಗಳಲ್ಲಿ ಕೊಂಚ ತಗ್ಗಿದೆ. ಶುಕ್ರವಾರ ತಾಲ್ಲೂಕಿ ನಲ್ಲಿ ಕೃಷ್ಣಾ ನದಿ ಒಳಹರಿವಿನಲ್ಲಿ ಯಥಾಸ್ಥಿತಿ ಕಂಡುಬಂದಿದೆ.

ಆದರೆ, ದೂಧಗಂಗಾ ಮತ್ತು ವೇದಗಂಗಾ ನದಿಗಳು ಇಳುಮುಖವಾಗಿವೆ. ಪರಿಣಾಮವಾಗಿ ಜಲಾವೃತ್ತಗೊಂಡಿದ್ದ ಸದ ಲಗಾ- ಬೋರಗಾಂವ, ಸಿದ್ನಾಳ- ಅಕ್ಕೋಳ ಮತ್ತು ಮಲಿ ಕವಾಡ-ದತ್ತವಾಡ ಗ್ರಾಮಗಳ ಮಧ್ಯೆ ಇರುವ ಕೆಳಮಟ್ಟದ ಸೇತುವೆಗಳು ಸಂಚಾರಕ್ಕೆ ತೆರೆದುಕೊಂಡಿವೆ. ಇನ್ನುಳಿದಂತೆ ಕಲ್ಲೋಳ-ಯಡೂರ ಮತ್ತು ಜತ್ರಾಟ-ಭೀವಶಿ ಸೇತುವೆಗಳು ಇನ್ನೂ ಮುಳುಗಡೆ ಸ್ಥಿತಿಯಲ್ಲಿವೆ.

ದೂಧಗಂಗಾ ಮತ್ತು ರಾರಾಪೂರ ಬ್ಯಾರೇಜ್ನಿಂದ ಗುರುವಾರ ರಾಜ್ಯಕ್ಕೆ ಹರಿದುಬರುತ್ತಿದ್ದ ಒಟ್ಟು 1,00,210 ಕ್ಯೂಸೆಕ್ ನೀರಿನ ಪ್ರಮಾಣ ಶುಕ್ರವಾರ 99,862 ಕ್ಯೂಸೆಕ್ಗೆ ಇಳಿದಿದೆ. ತಾಲ್ಲೂಕಿನ ಸದಲಗಾ ಬಳಿ ದೂಧಗಂಗಾ ನದಿಯಲ್ಲಿ 50 ವರ್ಷ ವಯಸ್ಸಿನ ಅಪರಿಚಿತ ಪುರುಷನ ಶವ ದೊರೆತಿದೆ.

ಮಳೆ ವಿವರ: ಚಿಕ್ಕೋಡಿ - 2.8 ಮಿಮಿ, ಅಂಕಲಿ -4.8ಮಿಮಿ, ನಾಗರ ಮುನ್ನೋಳಿ-5.6ಮಿಮಿ, ಸದಲಗಾ- 7.9ಮಿಮಿ, ಗಳ ತಗಾ- 3.0ಮಿಮಿ, ಜೋಡಟ್ಟಿ 12.8,ಮಿಮಿ, ನಿಪ್ಪಾಣಿ- 11.4ಮಿಮಿ, ಸೌಂದಲಗಾ- 10.1 ಮಿಮಿ ಹಾಗೂ ಮಹಾರಾಷ್ಟ್ರದ ಕೊಯ್ನಾ- 80ಮಿಮಿ, ನವಜಾ- 80ಮಿಮಿ, ಮಹಾ ಬಳೇಶ್ವರ- 130ಮಿಮಿ, ವಾರಣಾ- 91ಮಿಮಿ, ಸಾಂಗ್ಲಿ-20ಮಿಮಿ ಹಾಗೂ ಕೊಲ್ಲಾ ಪೂರದಲ್ಲಿ 10.5ಮಿಮಿ ಮಳೆ ದಾಖಲಾಗಿದೆ.

ಖಾನಾಪುರ ಮಳೆ ವಿವರ: ಅ.2ರಂದು ದಾಖಲಾದಂತೆ ಕಣಕುಂಬಿ 110.4ಮೀ.ಮೀ, ಜಾಂಬೋಟಿ 26, ನಾಗರಗಾಳಿ 37.3, ಲೋಂಡಾ ಪಿಡಬ್ಲ್ಯೂಡಿ 63.2, ಲೋಂಡಾ ರೈಲ್ವೆ ಸ್ಟೇಶನ್ 69, ಗುಂಜಿ 43.4, ಕಕ್ಕೇರಿ 12.6, ಬೀಡಿ 7.8, ಅಸೋಗಾ 23 ಹಾಗೂ ಖಾನಾಪುರ 18.4 ಮೀ.ಮೀ ಮಳೆಯಾದ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.