ಮಂಗಳವಾರ, ಜೂನ್ 15, 2021
26 °C

ಮೂಲ ಸಂಸ್ಕೃತಿ, ಪರಂಪರೆ ಮರೆ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಆಧುನಿಕ ಬದುಕಿನಿಂದ ಜನ ನೆಮ್ಮದಿ ಕಳೆದುಕೊಳ್ಳುವ ಅನಿವಾರ್ಯತೆ ಎದುರಿಸುತ್ತಿದ್ದು, ಈ ಮೂಲಕ ತಮ್ಮ ಮೂಲ ಸಂಸ್ಕೃತಿ ಹಾಗೂ ಪರಂಪರೆ ಮರೆಯುತ್ತಿದ್ದಾರೆ ಪ್ರಗತಿಪರ ರೈತ ಸಿದ್ದಲಿಂಗಪ್ಪ ಆತಂಕ ವ್ಯಕ್ತಪಡಿಸಿದರು.  ವಾರ್ತಾ ಇಲಾಖೆ ಹಾಗೂ ನೆಹರು ಯುವಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಶಿಕಾರಿಪುರ ತಾಲ್ಲೂಕು ನಿಂಬೆಗೊಂದಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬುಡಕಟ್ಟು ಕಲಾವಿದರ ಸಾಂಸ್ಕೃತಿಕ ಕಲಾಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮನುಷ್ಯ ತನ್ನ ಮೂಲವನ್ನು ಮರೆತರೆ ನೆಮ್ಮದಿ ಕಳೆಕೊಳ್ಳುವುದು ನಿಶ್ಚಿತ ಎಂದ ಅವರು, ಸಂಸ್ಕೃತಿ, ತಾಯಿಗೆ ಸಮಾನ. ಎಂದಿಗೂ ಅದನ್ನು ಮರೆಯಬಾರದು ಎಂದರು.ಮೂಲ ಸಂಸ್ಕೃತಿಯ ಬೇರುಗಳಂತಿರುವ ಆದಿವಾಸಿ ಬುಡಕಟ್ಟು ಜನಾಂಗಗಳ ಕಲೆ ಮತ್ತು ಸಂಸ್ಕೃತಿಯನ್ನು ನೆಮ್ಮದಿ ಕಳೆದುಕೊಂಡಿರುವವರಿಗೆ ಪರಿಚಯಿಸುವ ಮೂಲಕ ಅವರನ್ನೂ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿರುವ ವಾರ್ತಾ ಇಲಾಖೆ ಪ್ರಯತ್ನ ಶ್ಲಾಘನೀಯ ಎಂದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಅಬ್ದುಲ್ ಗಫರ್ ಸಾಬ್, ರವಿಕುಮಾರ್, ದೇವಸ್ಥಾನ ಸಮಿತಿಯ ನಾಗರಾಜಪ್ಪ, ಪುಟ್ಟಪ್ಪ, ಪ್ರಗತಿಪರ ರೈತರಾದ ಕೆ. ಬಸವರಾಜಪ್ಪ, ಗಂಗಾಧರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.