ಗುರುವಾರ , ಮೇ 19, 2022
21 °C

ಮೂವರು ಭಾರತೀಯರಿಗೆ ಅಮೆರಿಕ ರಾಷ್ಟ್ರೀಯ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮೂವರು ಭಾರತೀಯ ಮೂಲದ ವಿಜ್ಞಾನಿಗಳು ಮತ್ತು ಇತರ ಒಂಬತ್ತು ಜನರನ್ನು ದೇಶದ ಅತ್ಯುನ್ನತ ಪದಕಗಳೊಂದಿಗೆ ಗೌರವಿಸಿದ್ದಾರೆ.



ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಸಂಶೋಧನೆಗಾಗಿ ಈ ಗೌರವ ಸಲ್ಲಿಸಲಾಗಿದೆ. ಅಮೆರಿಕ ಸರ್ಕಾರವು ವಿಜ್ಞಾನಿಗಳು, ಎಂಜಿನಿಯರ್‌ಗಳು ಹಾಗೂ ಸಂಶೋಧಕರ ಅಸಾಧಾರಣ ಸೇವೆಯನ್ನು ಗುರುತಿಸಿ ಈ ರಾಷ್ಟ್ರೀಯ ಪದಕಗಳನ್ನು ನೀಡುತ್ತಿದೆ.



ಶ್ವೇತಭವನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ರಾಷ್ಟ್ರೀಯ ವಿಜ್ಞಾನ ಪದಕವನ್ನು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಡಾ. ಶ್ರೀನಿವಾಸ ಎಸ್.ಆರ್. ವರದನ್ ಅವರಿಗೆ ಮತ್ತು ರಾಷ್ಟ್ರೀಯ ತಂತ್ರಜ್ಞಾನ ಪದಕವನ್ನು ಇಂಡಿಯಾನಾದ ಪರ್ದ್ಯು ವಿಶ್ವವಿದ್ಯಾಲಯದ ಡಾ. ರಾಕೇಶ್ ಅಗರವಾಲ್ ಹಾಗೂ ಉತ್ತರ ಕೆರೊಲಿನಾ ರಾಜ್ಯ ವಿಶ್ವವಿದ್ಯಾಲಯದ ಡಾ. ಜಯಂತ್ ಬಾಳಿಗಾ ಅವರಿಗೆ ಒಮಾಮ ಪ್ರದಾನ ಮಾಡಿದರು.



ಒಬಾಮ ಈ ತಿಂಗಳ ಆರಂಭದಲ್ಲಿ ಪ್ರಪ್ರಥಮ ಗೂಗಲ್ ವಿಜ್ಞಾನ ಮೇಳದಲ್ಲಿ ವಿಶೇಷ ಬಹುಮಾನ ವಿಜೇತರಾದ ಮೂವರನ್ನು ತಮ್ಮ ಓವಲ್ ಕಚೇರಿಗೆ ಬರಮಾಡಿಕೊಂಡು ಗೌರವಿಸಿದ್ದು, ಇವರಲ್ಲಿ ಇಬ್ಬರು ಭಾರತೀಯ ಸಂಜಾತರು. ಭಾರತೀಯ ಮೂಲದ 17 ವಯಸ್ಸಿನ ಶ್ರೀ ಬೋಸ್ ಮತ್ತು 16 ವಯಸ್ಸಿನ ನವೋಮಿ ಷಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.