ಬೆಂಗಳೂರು: `ನಮ್ಮ ಮೆಟ್ರೊ' ಯೋಜನೆಯ ಮೊದಲನೇ ಹಂತದ ರೀಚ್ 3ರ ಪೀಣ್ಯ- ಯಶವಂತಪುರ (5.3 ಕಿ.ಮೀ) ನಡುವೆ ಪರೀಕ್ಷಾರ್ಥ ಸಂಚಾರ ಸೋಮವಾರ ಆರಂಭಗೊಂಡಿತು.

ಟ್ರಾಕ್, ವೇಗದ ಮಿತಿ, ಹಳಿ ಜೋಡಣೆ, ಸಿಗ್ನಲ್ ಜಂಪ್, ಕ್ರಾಸಿಂಗ್ ಮೊದಲಾದ ವ್ಯವಸ್ಥೆಗಳು ಸಮರ್ಪಕವಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಇರಬಹುದಾದ ತಾಂತ್ರಿಕ ಲೋಪದೋಷಗಳನ್ನು ಕಂಡುಕೊಂಡು ಸರಿಪಡಿಸಲು ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ. ಕನಿಷ್ಠ ಎರಡು ತಿಂಗಳ ಕಾಲ ಸತತವಾಗಿ ಪರೀಕ್ಷಾರ್ಥ ಸಂಚಾರ ನಡೆಯಲಿದೆ.

ನಿಗಮದ ವ್ಯವಸ್ಥಾಪಕ ಎನ್.ಶಿವಶೈಲಂ, ಹಿರಿಯ ಅಧಿಕಾರಿಗಳು ಹಾಗೂ ತಂತ್ರಜ್ಞರು ಹಾಜರಿದ್ದರು.

`ಪೀಣ್ಯದಿಂದ ಮಲ್ಲೇಶ್ವರದ ಸಂಪಿಗೆ ರಸ್ತೆ (10.4 ಕಿ.ಮೀ) ವರೆಗಿನ ರೀಚ್3 ಹಾಗೂ 3 ಎ ಯಲ್ಲಿ ಪರೀಕ್ಷಾರ್ಥ ಸಂಚಾರ ಜುಲೈ ಮಧ್ಯಭಾಗದಲ್ಲಿ ಆರಂಭವಾಗಲಿದೆ. ಈ ಮಾರ್ಗದಲ್ಲಿ 10 ನಿಲ್ದಾಣಗಳಿವೆ. ಪರೀಕ್ಷಾರ್ಥ ಸಂಚಾರಕ್ಕೆ ಮುಖ್ಯಮಂತ್ರಿ ಅವರು ಚಾಲನೆ ನೀಡುವರು' ಎಂದು ಮೆಟ್ರೊ ಪ್ರಕಟಣೆಯಲ್ಲಿ ತಿಳಿಸಿದೆ. ಸೋಮವಾರ (ಜೂ. 10) ಪೂರ್ಣ ಪ್ರಮಾಣದ ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ ಎಂದು ನಿಗಮವು ಇತ್ತೀಚೆಗೆ ತಿಳಿಸಿತ್ತು. ಈಗ ಮತ್ತೆ ದಿನಾಂಕ ಬದಲಾವಣೆ ಆಗಿದೆ. `ಪೂರ್ಣ ಪ್ರಮಾಣದ ಪರೀಕ್ಷಾರ್ಥ ಸಂಚಾರ ಆರಂಭವಾಗುವ ದಿನಾಂಕದ ಬಗ್ಗೆ ಮುಂದೆ ಮಾಹಿತಿ ನೀಡುತ್ತೇವೆ' ಎಂದು ಎನ್.ಶಿವಶೈಲಂ ತಿಳಿಸಿದರು. ಪೀಣ್ಯ ಡಿಪೋದಲ್ಲಿ 1.2 ಕಿ.ಮೀ. ಉದ್ದದ ಹಳಿಗಳ ಮೇಲೆ `ಹಸಿರು ಬಣ್ಣ'ದ ಮೆಟ್ರೊ ರೈಲು ಗಾಡಿಯು ಪರೀಕ್ಷಾರ್ಥ ಸಂಚಾರವನ್ನು ಜನವರಿ ತಿಂಗಳಲ್ಲೇ ಯಶಸ್ವಿಯಾಗಿ ನಡೆಸಿತ್ತು.

ಹಸಿರು ಮಾರ್ಗ: ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗಿನ ಪೂರ್ವ- ಪಶ್ಚಿಮ ಕಾರಿಡಾರ್ನಲ್ಲಿ ನೇರಳೆ ಬಣ್ಣದ ರೈಲು ಗಾಡಿಗಳು ಓಡಾಡುವುದರಿಂದ ಅದನ್ನು `ನೇರಳೆ ಮಾರ್ಗ' ಹಾಗೂ ಹೆಸರಘಟ್ಟ ಕ್ರಾಸ್ನಿಂದ ಪುಟ್ಟೇನಹಳ್ಳಿ ಕ್ರಾಸ್ವರೆಗಿನ ಉತ್ತರ- ದಕ್ಷಿಣ ಕಾರಿಡಾರ್ನಲ್ಲಿ ಹಸಿರು ಬಣ್ಣದ ರೈಲು ಗಾಡಿಗಳು ಸಂಚರಿಸುವುದರಿಂದ ಅದನ್ನು `ಹಸಿರು ಮಾರ್ಗ' ಎಂದು ಕರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.