ಮುಂಬೈ (ಪಿಟಿಐ): ಬಾಲಿವುಡ್ ನಟ ವಿಂದು ರಾಂಧವ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ `ಸಿಇಒ' ಗುರುನಾಥ್ ಮೇಯಪ್ಪನ್ಗೆ ಇಲ್ಲಿನ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಇವರಿಬ್ಬರಲ್ಲದೆ, ಐಪಿಎಲ್ ಬೆಟ್ಟಿಂಗ್ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಇತರ ಆರು ಬುಕ್ಕಿಗಳಿಗೂ ಜಾಮೀನು ದೊರೆತಿದೆ.

ತಲಾ ರೂ. 25 ಸಾವಿರ ವೈಯಕ್ತಿಕ ಬಾಂಡ್ ಆಧಾರದಲ್ಲಿ ಜಾಮೀನು ನೀಡಲಾಗಿದೆ. ದೇಶ ಬಿಟ್ಟು ಹೋಗಬಾರದೆಂದು ನ್ಯಾಯಾಲಯ ಇವರಿಗೆ ಸೂಚಿಸಿದ್ದು, ಎರಡು ದಿನಗಳಿಗೊಮ್ಮೆ ಕ್ರೈಂ ಬ್ರಾಂಚ್ ಅಧಿಕಾರಿಗಳ ಮುಂದೆ ಹಾಜರಾಗುವಂತೆಯೂ ತಿಳಿಸಿದೆ.

ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಅಳಿಯ ಮೇಯಪ್ಪನ್ ಹಾಗೂ ವಿಂದು ಅವರನ್ನು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಜೂನ್ 14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ಇಬ್ಬರೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಮೇಯಪ್ಪನ್ ಮತ್ತು ವಿಂದು ಇನ್ನೂ ಕಸ್ಟಡಿಯಲ್ಲಿದ್ದುಕೊಂಡು ವಿಚಾರಣೆ ಎದುರಿಸುವ ಅಗತ್ಯವಿಲ್ಲ ಎಂದು ಹೇಳಿ ಇವರ ವಕೀಲರು ಜಾಮೀನು ಕೋರಿದ್ದರು. ವಿಂದು ಮೇ 22 ರಿಂದ, ಮೇಯಪ್ಪನ್ ಮೇ 25 ರಿಂದಲೂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಕಳ್ಳಾಟದಲ್ಲಿ ಎಂದಿಗೂ ಭಾಗಿಯಾಗಿಲ್ಲ: ವಿಂದೂ
ನವದೆಹಲಿ: ಐಪಿಎಲ್ ವೇಳೆ ಕಳ್ಳಾಟದಲ್ಲಿ ಪಾಲ್ಗೊಂಡಿದ್ದನ್ನು ಬಾಲಿವುಡ ನಟ ವಿಂದು ದಾರಾ ಸಿಂಗ್ ಅಲ್ಲಗಳೆದಿದ್ದಾರೆ. `ನಾನು ಪೊಲೀಸ್ ವಶ ದಲ್ಲಿದ್ದೆ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ' ಎಂದು ಸುದ್ದಿ ವಾಹಿನಿಗಳಿಗೆ ತಿಳಿಸಿದ್ದಾರೆ.

`ನಾನು ಎಂದಿಗೂ ಸುಳ್ಳು ಹೇಳಿಲ್ಲ. ಪೊಲೀಸರಿಗೆ ಸಹಕರಿಸಿದ್ದೇನೆ. ಪೊಲೀಸ್ ವಶದಲ್ಲಿ ಯಾಕಿದ್ದೆ ಎಂಬುದು ನನಗೆ ಗೊತ್ತಿಲ್ಲ' ಎಂದು ವಿಂದೂ ನುಡಿದಿದ್ದಾರೆ.

ಪ್ರಕರಣದ ಮತ್ತೊಬ್ಬ ಶಂಕಿತ ಹಾಗೂ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರ ಅಳಿಯನೂ ಆಗಿರುವ ಗುರುನಾಥ್ ಮೇಯಪ್ಪನ್ ಅವರು ತಮ್ಮ ಗೆಳೆಯರಾಗಿದ್ದರು ಎಂದು ಅವರು ಹೇಳಿದ್ದಾರೆ.

`ಅವರು ನನ್ನ ಸ್ನೇಹಿತರು. ಸಂಜಯ್ ಜೈಪುರ ಹಾಗೂ ಪವನ್ ಜೈಪುರ ಅವರು ಜೈಪುರದ ಆಭರಣ ವ್ಯಾಪಾರಿಗಳು' ಎಂದು ತಿಳಿಸಿರುವ ವಿಂದೂ, `ನಾವು ಎಂದಿಗೂ ಯಾವುದೇ ಕಳ್ಳಾಟದ ಬಗ್ಗೆ ಮಾತನಾಡಿಲ್ಲ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.