ಮಂಗಳವಾರ, ಜನವರಿ 28, 2020
19 °C

ಮೇವು ಹಗರಣ: 41 ಆರೋಪಿಗಳಿಗೆ ಜೈಲು, ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಚಿ (ಐಎಎನ್‌ಎಸ್): ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಬುಧವಾರ ಮೇವು ಹಗರಣದ 41 ಆರೋಪಿಗಳಿಗೆ ನಾಲ್ಕರಿಂದ ಏಳು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ರೂ 2 ಲಕ್ಷದಿಂದ 30 ಲಕ್ಷಗಳವರೆಗೆ ದಂಡ ವಿಧಿಸಿ ತೀರ್ಪು ನೀಡಿದೆ.ಈ ಆರೋಪಿಗಳಿಗೆ ವಿಶೇಷ ಸಿಬಿಐ ನ್ಯಾಯಾಧೀಶ ಪಿ.ಕೆ. ಸಿಂಗ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ಹಗರಣದ ಒಟ್ಟು 73 ಆರೋಪಿಗಳಲ್ಲಿ ಒಂಬತ್ತು ಮಂದಿ ಮೃತಪಟ್ಟ್ದ್ದಿದಾರೆ.ಮೂವರು ಸಿಬಿಐಯ ಮಾಫಿ ಸಾಕ್ಷಿಗಳಾಗಿ ಪರಿವರ್ತನೆಯಾಗಿದ್ದಾರೆ. ಉಳಿದ 61 ಆರೋಪಿಗಳಲ್ಲಿ 20 ಮಂದಿಗೆ ಸೋಮವಾರವೇ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ಪಾವತಿಯ ಶಿಕ್ಷೆಯ ಪ್ರಮಾಣನ್ನು ಪ್ರಕಟಿಸಲಾಗಿತ್ತು.

 

ಪ್ರತಿಕ್ರಿಯಿಸಿ (+)