ಗೋಣಿಕೊಪ್ಪಲು:  ಪೊನ್ನಂಪೇಟೆ ಗೋಲ್ಡನ್ ಜೇಸಿ ಮೇ 6ರಂದು ರಾಷ್ಟಮಟ್ಟದ ಆಟೋ ಕ್ರಾಸ್ ಸ್ಪರ್ಧೆ ಆಯೋಜಿಸಿದೆ.

ಪೊನ್ನಂಪೇಟೆ- ಹುದುಕೇರಿ ಮುಖ್ಯ ರಸ್ತೆಯ ಬೇಗೂರು ಕೊಲ್ಲಿ ಗದ್ದೆಯ ಬಯಲಿನಲ್ಲಿ ಈ ಸ್ಪರ್ಧೆ ನಡೆಯಲಿದೆ ಎಂದು ಗೋಲ್ಡನ್ ಜೇಸಿ ಅಧ್ಯಕ್ಷ ಕೇಚಮಾಡ ಶಿವಾ ನಾಚಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸ್ಪರ್ಧೆಯನ್ನು ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು ಎಂದು ವಿಭಾಗಿಸಲಾಗಿದೆ. ದ್ವಿಚಕ್ರ ವಾಹನ ಸ್ಪರ್ಧೆಯಲ್ಲಿ ಕೂರ್ಗ್ ಲೋಕಲ್ ಓಪನ್, 2 ಸ್ಟ್ರೋಕ್ ಓಪನ್, 4 ಸ್ಟ್ರೋಕ್ ಓಪನ್ ಮತ್ತು ಇಂಡಿಯನ್ ಓಪನ್ ಎಂದು 4 ಹಂತದಲ್ಲಿ ಸ್ಪರ್ಧೆ ನಡೆಸಲಾಗುವುದು. 4 ಚಕ್ರವಾಹನ ವಿಭಾಗದಲ್ಲಿ ಕೂರ್ಗ್ ಲೋಕಲ್ ಓಪನ್, 800 ಸಿಸಿ, 1001 ಸಿಸಿ ಯಿಂದ 1400 ಸಿಸಿ, 1401 ಸಿಸಿ ಯಿಂದ ಮೇಲ್ಪಟ್ಟ ವಿಭಾಗ ಸ್ಪರ್ಧೆ, ಇಂಡಿಯನ್ ಓಪನ್ ಹಾಗೂ ಲೇಡಿಸ್ ಕ್ಲಾಸ್ ಎಂಬ 6 ಹಂತದಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪ್ರತಿ ವಿಭಾಗಕ್ಕೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುತ್ತದೆ. ವಿಜೇತರಿಗೆ ಟ್ರೋಫಿ, ನಗದು ನೀಡಲಾಗುವುದು. ಕಳೆದ 6 ವರ್ಷದಿಂದ ಜೇಸಿ ಸಂಸ್ಥೆ ಈ ಸ್ಪರ್ಧೆ ಆಯೋಜಿಸುತ್ತಿದೆ. ಪ್ರತಿ ವರ್ಷ 200ರಿಂದ 300 ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ಸಹ ಹೆಚ್ಚಿನ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೇಸಿ ಉಪಾಧ್ಯಕ್ಷ ದಿನೇಶ್ ಚಿಟ್ಟಿಯಪ್ಪ, ಕೋಶಾಧಿಕಾರಿ ರಘು ತಿಮ್ಮಯ್ಯ, ಯೋಜನಾ ನಿರ್ದೇಶಕ ಸಜನ್ ಸೋಮಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.