ಗುರುವಾರ , ಜೂನ್ 17, 2021
21 °C

ಮೈಕ್ರೊಸಾಫ್ಟ್ ವಿರುದ್ಧದ ದೂರು ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ವೆಬ್‌ಸೈಟ್‌ನಲ್ಲಿ ಆಕ್ಷೇಪಾರ್ಹ ಸಂಗತಿಗಳನ್ನು ಪ್ರಕಟಿಸಿದೆ ಎಂಬ ಕಾರಣಕ್ಕಾಗಿ ಮೈಕ್ರೊಸಾಫ್ಟ್ ವಿರುದ್ಧ ಸಲ್ಲಿಸಲಾಗಿದ್ದ ದೂರನ್ನು ದೆಹಲಿ ಸಿವಿಲ್ ಕೋರ್ಟ್ ವಜಾಗೊಳಿಸಿದೆ.ಇಸ್ಲಾಂ ಕುರಿತು ಸಂಶೋಧನೆ ನಡೆಸುತ್ತಿದ್ದ ಮುಫ್ತಿ ಐಜಾಜ್ ಅರ್ಷಾದ್ ಕಾಸ್ಮಿ ಎಂಬುವವರು ಈ ದೂರು ಸಲ್ಲಿಸಿದ್ದರು. ಸಾಮಾಜಿಕ ಜಾಲತಾಣಗಳು ತಮ್ಮ ವೈಬ್‌ಸೈಟ್‌ನಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ವಿಚಾರ ಪ್ರಕಟಿಸಬಾರದು ಎಂದು ಅವರು ವಾದಿಸಿದ್ದರು.ಇಟಲಿ ನಾವಿಕರ ಪೊಲೀಸ್ ಕಸ್ಟಡಿ ವಿಸ್ತರಣೆ

ಕೊಲ್ಲಂ/ಕೊಚ್ಚಿ (ಐಎಎನ್‌ಎಸ್):
  ಕಡಲ್ಗಳ್ಳರೆಂದು ಭಾವಿಸಿ ಭಾರತೀಯ ಮೀನುಗಾರರನ್ನು ಹತ್ಯೆ ಮಾಡಿದ್ದಕ್ಕಾಗಿ ಬಂಧಿಸಲಾದ ಇಬ್ಬರು ಇಟಲಿ ನಾವಿಕರ ಪೊಲೀಸ್ ಕಸ್ಟಡಿಯ ಅವಧಿಯನ್ನು ಮಾರ್ಚ್ 5ರವರೆಗೆ ವಿಸ್ತರಿಸಲಾಗಿದೆ.ವಿಚಾರಣೆ ನಡೆಸಲು ಮತ್ತಷ್ಟು ಕಾಲಾವಕಾಶ ಬೇಕು ಎಂದು ಪೊಲೀಸರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕೊಲ್ಲಂ ನ್ಯಾಯಾಲಯ ಪೊಲೀಸ್ ಕಸ್ಟಡಿ ಅವಧಿ ವಿಸ್ತರಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.