ಶುಕ್ರವಾರ, ಜೂನ್ 25, 2021
27 °C

ಮೈಸೂರು: ಡಿಸೆಂಬರ್‌ನಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಡಿಸೆಂಬರ್‌ನಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ

 ಮೈಸೂರು: ನಗರದ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ 45 ಅಡಿ ಎತ್ತರದ ಏಕಶಿಲಾ ಆಂಜನೇಯಸ್ವಾಮಿ ಮೂರ್ತಿಯ ಕೆತ್ತನೆಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಾನುವಾರ ಚಾಲನೆ ನೀಡಿದರು.ರಾಜ್ಯದಲ್ಲೇ ಪ್ರಥಮ ಬಾರಿಗೆ 45 ಅಡಿ ಎತ್ತರದ ಏಕಶಿಲಾ ಅಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ. ಇದಕ್ಕಾಗಿ ಆಶ್ರಮದ ಬಲಭಾಗದಲ್ಲಿ 25 ಅಡಿ ಎತ್ತರದ ಪೀಠವನ್ನು ನಿರ್ಮಿಸಲಾಗುತ್ತಿದ್ದು, ಒಟ್ಟು 75 ಅಡಿ ಎತ್ತರದ ಮೂರ್ತಿ ನಿರ್ಮಾಣಗೊಳ್ಳಲಿದೆ.ಆಂಧ್ರಪದೇಶದ ಕಡಪ ಜಿಲ್ಲೆಯ ಪುಲಿವೆಂದಲ ಸಮೀಪದ ಮಲ್ಲೆಲ ಗ್ರಾಮದಿಂದ ಮಾ.11 ರಂದು ಏಕಶಿಲೆಯನ್ನು ತರಲಾಗಿದೆ. ಸುಮಾರು 200 ಟನ್ ತೂಕದ ಶಿಲೆಯನ್ನು 98 ಚಕ್ರಗಳಿರುವ ವಾಹನದಲ್ಲಿ 12 ದಿನಗಳ ಕಾಲ ಸಂಚರ ಮಾಡಿ ನಗರಕ್ಕೆ ತರಲಾಗಿದೆ.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, `ರೂ.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಆಂಜನೇಯಸ್ವಾಮಿ ಮೂರ್ತಿಯನ್ನು ಡಿ.26 ರಂದು ಪ್ರತಿಷ್ಠಾಪಿಸಲಾಗುವುದು. ಆಂಧ್ರಪ್ರದೇಶದಿಂದ ಶಿಲೆಯನ್ನು ಮೈಸೂರಿಗೆ ತರಲು ಎರಡು ರಾಜ್ಯ ಸರ್ಕಾರಗಳು ಸಹಕರಿಸಿವೆ. ಎಲ್ಲ ಜಾತಿಯವರು ಆಂಜನೇಯಸ್ವಾಮಿಯನ್ನು ಆರಾಧಿಸುವುದರಿಂದ ಈ ಮೂರ್ತಿಯನ್ನು ನಿರ್ಮಿಸಲಾಗುತ್ತಿದೆ~ ಎಂದರು.ಶಿಲ್ಪಿ ಸುಬ್ರಹ್ಮಣ್ಯ ಆಚಾರ್ ಮಾತನಾಡಿ, `ಏಕಶಿಲೆಯನ್ನು ಮೈಸೂರಿಗೆ ತರುವ ದೃಷ್ಟಿಯಿಂದ 300 ಟನ್‌ಗಳಷ್ಟಿದ್ದ ಶಿಲೆಯ ತೂಕವನ್ನು 200  ಟನ್‌ಗಳಿಗೆ ಇಳಿಸಲಾಗಿದೆ. ಸೋಮವಾರದಿಂದ 15 ಶಿಲ್ಪಿಗಳು ಕೆತ್ತನೆ ಕಾರ್ಯ ಆರಂಭಿಸಲಿದ್ದಾರೆ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.