ಮೈಸೂರು ದಸರಾದಲ್ಲಿ ಕಂಬಾರರಿಗೆ ಪೌರ ಸನ್ಮಾನ

7

ಮೈಸೂರು ದಸರಾದಲ್ಲಿ ಕಂಬಾರರಿಗೆ ಪೌರ ಸನ್ಮಾನ

Published:
Updated:
ಮೈಸೂರು ದಸರಾದಲ್ಲಿ ಕಂಬಾರರಿಗೆ ಪೌರ ಸನ್ಮಾನ

ಮೈಸೂರು: ಕೈದಿಗಳಿಗೆ ಪರಿವರ್ತನಾ ದಸರಾ, ಗಾಂಧಿ ಜಯಂತಿ ಪ್ರಯುಕ್ತ ಸೌಹಾರ್ದ ದಸರಾ, ಮನೆ ಬಾಗಿಲಿಗೆ ದಸರಾ ಚಲನಚಿತ್ರ, ಜಂಬೂ ಸವಾರಿ ಮಾರ್ಗದಲ್ಲಿ ವಿಂಟೇಜ್ ಕಾರುಗಳ ರ‌್ಯಾಲಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಡಾ.ಚಂದ್ರಶೇಖರ ಕಂಬಾರರಿಗೆ ಪೌರ ಸನ್ಮಾನ..

-ಇವು ಈ ಬಾರಿಯ ದಸರಾ ವಿಶೇಷಗಳು.ಮೈಸೂರಿನಲ್ಲಿ ಈ ವಿವರಗಳನ್ನು ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್, `ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕವಿ ಡಾ. ಚಂದ್ರಶೇಖರ್ ಕಂಬಾರರಿಗೆ ಆಹ್ವಾನ ನೀಡಲಾಗಿತ್ತು. ಪ್ರಸ್ತುತ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಅ.1ರಂದು ನಗರದ ಜಗನ್ಮೋಹನ ಅರಮನೆ ಸಭಾಂಗ ಣದಲ್ಲಿ  ಪೌರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry