ಇಂದು ನಡೆಯುವ, ಮಾತಾಡುವ, ಅಳುವ, ಮಲಗುವ, ಕುಡಿಯುವ, ತಿನ್ನುವ, ಓಡುವ ಗೊಂಬೆಗಳನ್ನು ನೋಡಿದ್ದೇವೆ. ಹಾಗೆಯೇ ಕೆಲವು ಗೊಂಬೆಗಳು ಜೀವಂತ ಮನುಷ್ಯರಂತಯೇ ಕಂಡು ಅಚ್ಚರಿ ಮೂಡಿಸುವುದೂ ಇದೆ. ಅದಕ್ಕೆ ತದ್ವಿರುದ್ಧವಾಗಿ ಬಡ ಮಕ್ಕಳು ಒಂದು ಮರದ ತುಂಡನ್ನು ಗೊಂಬೆಯಂತೆ ಬಳಸುವುದನ್ನು ಕಾಣಬಹುದು. ಅದರಿಂದ ಮಕ್ಕಳ ಭಾವಕ್ಕೆ ತಕ್ಕಂತೆ ಗೊಂಬೆಗಳು ಆಕಾರ ಪಡೆದುಕೊಳ್ಳುತ್ತವೆ ಎನ್ನಬಹುದೇನೋ?

ಆದರೆ ಗೊಂಬೆಗಳ ಬಳಕೆ ಆರಂಭವಾಗಿದ್ದು ಹೇಗೆ? ಗೊಂಬೆಗಳ ಇತಿಹಾಸ ತಿಳಿಯುವುದು ಕಠಿಣವಾದ ಕೆಲಸ. ಆದರೆ ಸದ್ಯಕ್ಕೆ ಒದಗಿರುವ ದಾಖಲಿತ ಇತಿಹಾಸ ನೋಡಿದಾಗ ಪ್ರತಿಯೊಂದು ದೇಶದ ಮಕ್ಕಳಿಗೂ ಅವರದೇ ಆದ ನಿರ್ದಿಷ್ಟ ಗೊಂಬೆಗಳು ದಕ್ಕಿವೆ.

ಭಾರತೀಯ ಮಕ್ಕಳು ತಮ್ಮ ಮರದ ಗೊಂಬೆಗೆ ಗರಿಗಳನ್ನು ಸಿಕ್ಕಿಸಿ ಖುಷಿಪಡುತ್ತಿದ್ದರೆ, ಪರ್ಶಿಯನ್ ಮಕ್ಕಳು ಬಟ್ಟೆಯಿಂದಲೇ ಗೊಂಬೆ ತಯಾರಿಸಿ ಕಣ್ಣು ಅರಳಿಸುತ್ತಿದ್ದರು.

ಹಳೆಯ ಪುಟಗಳನ್ನು ತಿರುವಿದಾಗ ಜೇಡಿಮಣ್ಣಿನಿಂದ ಮಾಡುತ್ತಿದ್ದ ಗೊಂಬೆಗಳ ಇತಿಹಾಸ ಮೊದಲು ಕಣ್ತೆರೆಯುತ್ತದೆ. ಅದು ಸುಲಭವಾಗಿ ಹೊಡೆದು ಹೋಗುತ್ತಿದ್ದರೂ ಅವುಗಳೊಂದಿಗೆ ಆಟವಾಡುತ್ತಾ ಅಂದಿನ ಮಕ್ಕಳು ಮೈಮರೆಯುತ್ತಿದ್ದುದು ಸುಳ್ಳಲ್ಲ.

ಮೊದಮೊದಲು ಧಾರ್ಮಿಕ ಆಚರಣೆಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಗೊಂಬೆಗಳು ಮಕ್ಕಳ ಮನ ಸೆಳೆದವು. ಅವು ತಮ್ಮವಾಗಬೇಕೆಂದು ಮಕ್ಕಳು ಬಯಸಿದರು. ಅವುಗಳನ್ನೇ ಹೋಲುವ ಪ್ರತಿಕೃತಿಗಳನ್ನು ಮಣ್ಣಿನಲ್ಲಿ ಅಥವಾ ಮರದಲ್ಲಿ ಮಾಡಿಸಿಕೊಂಡು ಆಟವಾಡಲು ನಿಂತರು.

ಇದುವರೆಗೆ ಸಿಕ್ಕಿರುವ ಕುರುಹುಗಳ ಪ್ರಕಾರ ಪ್ರಾಚೀನ ಈಜಿಪ್ಟ್ನ ಗೊಂಬೆಗಳು ತುಂಬಾ ಹಳೆಯವು ಎನ್ನಲಾಗಿದೆ. ಮರದಿಂದ ತಯಾರಾಗಿರುವ ಮೂರು ಸಾವಿರ ವರ್ಷ ಹಳೆಯದಾದ ಈಜಿಪ್ಟ್ ಗೊಂಬೆ ಸಿಕ್ಕಿದೆ. ಪ್ರಾಚೀನ ಗ್ರೀಕ್ನಲ್ಲಂತೂ ಆಸಕ್ತಿಕರ ಮಾದರಿಯ ಗೊಂಬೆಗಳು ಸಿಕ್ಕಿವೆ. ಅವುಗಳ ತಲೆ, ಮತ್ತು ಕೈ ಕಾಲುಗಳನ್ನು ಸೂಕ್ತ ವಿನ್ಯಾಸದಲ್ಲಿ ಕೆತ್ತಲಾಗಿದೆ. ಕೆಲವು ಗೊಂಬೆಗಳಿಗೆ ಸೂತ್ರ ಅಳವಡಿಸಿರುವುದೂ ಇದೆ.

ಆಧುನಿಕ ಕಾಲದ ಗೊಂಬೆಗಳನ್ನು ಮೇಣ, ಬಟ್ಟೆ, ಹಗ್ಗ, ಪ್ಲಾಸ್ಟರ್ ಆಫ್ ಪ್ಯಾರೀಸ್, ಪ್ಲಾಸ್ಟಿಕ್ ಹೀಗೆ ವಿವಿಧ ವಸ್ತುಗಳಿಂದ ಮಾಡಲಾಗುತ್ತದೆ. ಶ್ರೇಷ್ಠ ಕಲಾವಿದರಿಂದ ಮಾಡಲ್ಪಟ್ಟ ಕಲಾತ್ಮಕ ಗೊಂಬೆಗಳೂ ಮಾರುಕಟ್ಟೆಯಲ್ಲಿವೆ.

ಸದ್ಯಕ್ಕೆ ಬಾರ್ಬಿ ಗೊಂಬೆ ಜನಪ್ರಿಯವಾಗಿದೆ. ಇದಿಷ್ಟೇ ಅಲ್ಲ ಇಂದು ಗೊಂಬೆಗಳು ಮಕ್ಕಳಿಗೆ ಆಟಿಕೆಯಾಗಿ ಮಾತ್ರ ಉಳಿದಿಲ್ಲ, ಮನೆಯ ಒಳಾಂಗಣ ಸೌಂದರ್ಯ ಹೆಚ್ಚಿಸಲು ಕೂಡ ಬಳಕೆಯಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.