ಮೊಬೈಲ್‌ನಲ್ಲಿ ತೆರಿಗೆ ಲೆಕ್ಕಾಚಾರ

7

ಮೊಬೈಲ್‌ನಲ್ಲಿ ತೆರಿಗೆ ಲೆಕ್ಕಾಚಾರ

Published:
Updated:

ಖಾಸಗಿ ವಿಮಾ ಕಂಪೆನಿ ಬಜಾಜ್ ಅಲಯನ್ಸ್ ತೆರಿಗೆ ಲೆಕ್ಕಾಚಾರಕ್ಕೆ ಅನುಕೂಲವಾಗುವಂತಹ ಮೊಬೈಲ್ ತಂತ್ರಾಂಶವೊಂದನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.  ಈ ತಂತ್ರಾಂಶದ ಸಹಾಯದಿಂದ ಬಳಕೆದಾರ ತೆರಿಗೆ ಲೆಕ್ಕಾಚಾರಗಳನ್ನು ಮೊಬೈಲ್‌ನಲ್ಲೇ ಸುಲಭವಾಗಿ ಮಾಡಬಹುದಾಗಿದೆ.‘ಮೊಬೈಲ್ ಈಗ ಜೀವನದ ಅನಿವಾರ್ಯ ಅಂಗವಾಗಿದೆ. ಬಳೆದಾರರು ತಮ್ಮ ಪ್ರಯಾಣದ ನಡುವೆಯೂ ತೆರಿಗೆ ಲೆಕ್ಕಾಚಾರವನ್ನು ಸುಲಭವಾಗಿ ಮಾಡಬಹುದಾದಂತ  ತಂತ್ರಾಂಶವನ್ನು ಕಂಪೆನಿ ಒದಗಿಸಿದ್ದು, ‘ಜಿಪಿಆರ್‌ಎಸ್’ ಸೌಲಭ್ಯ ಇಲ್ಲದ ಮೊಬೈಲ್‌ಗಳಲ್ಲೂ ಇದನ್ನು ಬಳಸಬಹುದು’ ಎಂದು ಬಜಾಜ್ ಅಲಯನ್ಸ್‌ನ ಮಾರುಕಟ್ಟೆ ಮುಖ್ಯಸ್ಥ ಅಕ್ಷಯ್ ಮೆಹೋತ್ರ ತಿಳಿಸಿದ್ದಾರೆ.ನೋಕಿಯಾ, ಸ್ಯಾಮ್‌ಸಂಗ್, ಬ್ಲ್ಯಾಕ್ ಬೆರಿ ಸೇರಿದಂತೆ ಆಂಡ್ರಾಯ್ಡಾ ಕಾರ್ಯನಿರ್ವಹಣಾ ತಂತ್ರಾಂಶವಿರುವ ಇತರೆ ಸ್ಮಾರ್ಟ್‌ಫೋನ್‌ಗಳಲ್ಲೂ ಸದ್ಯ ಈ ತಂತ್ರಾಂಶ ಲಭ್ಯವಿದೆ.                       

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry