ದೇಶದಲ್ಲಿ ಸದ್ಯ 885 ದಶಲಕ್ಷ ಮೊಬೈಲ್ ಚಂದಾದಾರಾರರಿದ್ದು, ಈ ಸಂಖ್ಯೆ ದ್ವಿಗುಣ ವೇಗದಲ್ಲಿ ಬೆಳೆಯುತ್ತಿದೆ ಎನ್ನುತ್ತದೆ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ವರದಿ. ಆದರೆ, 37 ಸಾವಿರ ಹಳ್ಳಿಗಳಿಗೆ ಇನ್ನೂ ಮೊಬೈಲ್ ಸಂಪರ್ಕ ಇಲ್ಲ ಎನ್ನುವುದು ನಂಬಲೇಬೇಕಾದ ಸಂಗತಿ.

ಮಾರ್ಚ್ ಅಂತ್ಯದ ವೇಳೆಗೆ ಈ ಹಳ್ಳಿಗಳಲ್ಲಿ ಅರ್ಧದಷ್ಟು ಭಾಗಗಳಿಗೆ ಮೊಬೈಲ್ ಸಂಪರ್ಕ ಬರುವ ನಿರೀಕ್ಷೆ ಇದೆ. ಕಳೆದ ಜುಲೈ ಅಂತ್ಯದ ವರೆಗಿನ ವರದಿ ಪ್ರಕಾರ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತನ್ನ ಸಂಪರ್ಕ ಜಾಲ ವಿಸ್ತರಿಸಿದೆ.

ದೇಶದ ಸುಮಾರು 33,620 ನಗರಗಳು ಬಿಎಸ್ಎನ್ಎಲ್ ಸೇವಾ ವ್ಯಾಪ್ತಿಗೆ ಬಂದಿವೆ. ಆದರೆ, 2001ರ ರಾಷ್ಟ್ರೀಯ ಸಮೀಕ್ಷೆ ಪ್ರಕಾರ ದೇಶದಲ್ಲಿ 5,93,731 ಜನವಸತಿ ಹಳ್ಳಿಗಳಿವೆ.

ಸದ್ಯ ದೇಶದ ಒಟ್ಟು ಮೊಬೈಲ್ ದೂರವಾಣಿ ಮಾರುಕಟ್ಟೆಗೆ ಗ್ರಾಮೀಣ ಭಾಗದ ಕೊಡುಗೆ ಶೇ 66ರಷ್ಟಿದೆ. ಚಂದಾದಾರರ ದೃಷ್ಟಿಯಿಂದ ಶೇ 33ರಷ್ಟು ಪಾಲು ಇದೆ.

ಗ್ರಾಮೀಣ ಭಾರತದಲ್ಲಿ ಮೊಬೈಲ್ ಮೂಲಸೌಕರ್ಯವನ್ನು ವಿಸ್ತರಿಸಲು ಯೂನಿವರ್ಸಲ್ ಸರ್ವೀಸ್ ಓಬ್ಲಿಗೇಷನ್ ಫಂಡ್(ಯುಎಸ್ಒ) ಸಬ್ಸಿಡಿ ನೆರವು ನೀಡುತ್ತದೆ.

2000 ಜನಸಂಖ್ಯೆಗಿಂತ ಹೆಚ್ಚಿನ ಜನಸಂಖ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಅವುಗಳನ್ನು ಮೊಬೈಲ್ ಸೇವಾ ವ್ಯಾಪ್ತಿಗೆ ತರಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಮಿಲಿಂದ್ ದೇವುರಾ ಹೇಳಿದ್ದಾರೆ.

ದೂರ ಸಂಪರ್ಕ ಇಲಾಖೆಗೆ ಗ್ರಾಮೀಣ ಭಾಗಗಳಲ್ಲಿ ಅಂತರ್ಜಾಲ ಸಂಪರ್ಕ ವಿಸ್ತರಿಸಲು 20 ಕೋಟಿ ಮೊತ್ತದಲ್ಲಿ ಯೋಜನೆ ರೂಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.