ಚಿಕ್ಕಬಳ್ಳಾಪುರ: ಕ್ಷೇತ್ರದ ಸಂಸದ ಮತ್ತು ಕೇಂದ್ರ ಸಚಿವರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದ್ದ ವೀರಪ್ಪ ಮೊಯಿಲಿ ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದು, ರಿಲಯನ್ಸ್ ಸಂಸ್ಥೆಯ ಮುಕೇಶ್ ಅಂಬಾನಿ ಅಂಥವರೊಂದಿಗೆ ಸೇರಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ್ ಕೇಜ್ರಿವಾಲ್ ಆರೋಪಿಸಿದರು.

ಪಕ್ಷದ ಅಭ್ಯರ್ಥಿ ಕೆ.ಅರ್ಕೇಶ್ ಪರ ಮತ ಯಾಚಿಸಲು ಮತ್ತು ರೋಡ್ ಷೋ ನಡೆಸಲು ಭಾನುವಾರ ನಗರಕ್ಕೆ ಭೇಟಿ ನೀಡಿದ ಅವರು, ಕೇಂದ್ರ ಸಚಿವರಾಗಿ ವೀರಪ್ಪ ಮೊಯಿಲಿ ಅಡುಗೆ ಅನಿಲ, ಇಂಧನ ಮುಂತಾದವುಗಳ ಬೆಲೆ ಏರಿಕೆ ಮಾಡಿದ್ದಾರೆ. ಅವರಿಗೆ ಜನರ ಸಮಸ್ಯೆ ಪರಿಹರಿಸುವುದಕ್ಕಿಂತ ಉದ್ಯಮಿಗಳ ಪರ ಹೆಚ್ಚು ಕಾಳಜಿಯಿದೆ ಎಂದರು.

ಕಾಂಗ್ರೆಸ್ನಲ್ಲಿ ಪ್ರಭಾವಿ ಮುಖಂಡರಾದ ಕಾರಣ ಕೇಂದ್ರ ಸಚಿವರಾದ ನಂತರ ವೀರಪ್ಪ ಮೊಯಿಲಿ ನಿಮ್ಮೆಲ್ಲ ನಿರೀಕ್ಷೆಗಳನ್ನು ಈಡೇರಿಸುತ್ತಾರೆ ಎಂದು ನೀವು ಭಾವಿಸಿದ್ದಿರಿ. ಆದರೆ ನಿಮ್ಮ ನಿರೀಕ್ಷೆಗಳನ್ನು ಈಡೇರಿಸುವುದು ಒಂದೆಡೆಯಿರಲಿ, ಜನರ ಸಮಸ್ಯೆಗಳನ್ನು ಅರಿತು ಅವುಗಳನ್ನು ಪರಿಹರಿಸುವ ಸೌಜನ್ಯವನ್ನೂ ತೋರಲಿಲ್ಲ ಎಂದು ಅವರು ಹೇಳಿದರು.

ಸಚಿವರಾಗಿ ಅಧಿಕಾರದಲ್ಲಿ ಇದ್ದಷ್ಟು ದಿನ ಮೊಯಿಲಿ ಅವರು ಅಂಬಾನಿಯವರಂಥ ಉದ್ಯಮಿಗಳ ಜೊತೆ ನಿಕಟ ಸಂಬಂಧ ಹೊಂದಿದ್ದರೇ ಹೊರತು ಜನಸಾಮಾನ್ಯರತ್ತ ಕಾಳಜಿ, ಕಳಕಳಿ ತೋರಲಿಲ್ಲ. ಇಂಥ ಭ್ರಷ್ಟರನ್ನು ಆಯ್ಕೆ ಮಾಡುವ ಬದಲು ಸಮರ್ಥ ಮತ್ತು ಭ್ರಷ್ಟಾಚಾರಮುಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಿ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಎಎಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಸಮರ್ಥ ಆಡಳಿತ ನೀಡುವಲ್ಲಿ ವಿಫಲವಾಗಿವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದರೆ, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಕೂಡ ಭ್ರಷ್ಟಾಚಾರದ ಆರೋಪ ಎದುರಿಸಿದೆ. ಎರಡೂ ಮೈತ್ರಿಕೂಟಗಳು ದೇಶ, ಜನರ ಏಳ್ಗೆಗಾಗಿ ಏನನ್ನೂ ಮಾಡಿಲ್ಲ ಎಂದು ಟೀಕಿಸಿದರು.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಒಂದು ವೇಳೆ ದೇಶದ ಪ್ರಧಾನಿಯಾದರೆ, ಜನಸಾಮಾನ್ಯರ ಜೀವನ ಇನ್ನಷ್ಟು ದುರ್ಭರವಾಗಲಿದೆ. ಅವರ ಆಡಳಿತದಿಂದ ಜನಸಾಮಾನ್ಯರು, ಬಡವರು ನಲುಗಲಿದ್ದು, ರೈತರು ನಿಶ್ಚಿತವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದರು.

ನಿವೃತ್ತ ಪೊಲೀಸ್ ಅಧಿಕಾರಿ ಕೆ.ಅರ್ಕೇಶ್ ಉತ್ತಮ ವ್ಯಕ್ತಿಯಾಗಿದ್ದು, ವೀರಪ್ಪನ್ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ಪರ ಮತ ಚಲಾಯಿಸಿ, ಭ್ರಷ್ಟಾಚಾರಕ್ಕೆ ತಕ್ಕ ಉತ್ತರ ನೀಡಿ ಎಂದು ಮನವಿ ಮಾಡಿದರು.

ವಾಹನ, ಸಂಚಾಲಕರ ದಂಡು!
ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ರೋಡ್ ಷೋ ನಾಲ್ಕು ಅಥವಾ ಐದು ವಾಹನಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅವರು ನಗರ ಹೊರವಲಯದ ಹೋಟೆಲ್ ಬಳಿ ಬಂದಾಗ, ಕೆಲವೇ ವಾಹನಗಳು ಕಂಡು ಬಂದವು. ಆದರೆ ಯಾವಾಗ ರೋಡ್ ಷೋ ಆರಂಭವಾಯಿತೋ ದಿಢೀರ್ 30ಕ್ಕೂ ಹೆಚ್ಚು ವಾಹನಗಳು ಕಾಣಿಸಿಕೊಂಡವು.

ಅರವಿಂದ್ ಕೇಜ್ರಿವಾಲ್ ತೆರೆದ ವಾಹನದಲ್ಲಿ ಕೈ ಬೀಸುತ್ತ ಮುಂದೆ ಸಾಗುತ್ತಿದ್ದರೆ, ಹಿಂಬದಿಯಲ್ಲಿ ವಾಹನಗಳು ಸಾಲುಸಾಲಾಗಿ ಬರುತ್ತಿದ್ದವು. ಕಾರು, ಬೈಕ್, ಆಟೊರಿಕ್ಷಾ ಮುಂತಾದವು ಅವರನ್ನು ಹಿಂಬಾಲಿಸುತ್ತಲೇ ಇದ್ದವು. ಕೇಜ್ರಿವಾಲ್ ಆಗಮನದ ಕುರಿತು ಆಟೊರಿಕ್ಷಾದಲ್ಲಿ ಒಬ್ಬರು ಪ್ರಚಾರ ಮಾಡುತ್ತಿದ್ದರೆ, ಇನ್ನೂ ಕೆಲವರು ಕಾರುಗಳಲ್ಲಿ ಪ್ರಚಾರ ಮುಂದುವರಿಸಿದ್ದರು. ಇನ್ನು ಪಕ್ಷದ ಕಾರ್ಯಕರ್ತರು ಮತ್ತು ಸಂಚಾಲಕರ ದಂಡು ಕೂಡ ಹೆಚ್ಚಿತ್ತು.

ಮಾಧ್ಯಮ, ಪೊಲೀಸ್ ವಾಹನಗಳ ಸ್ಪರ್ಧೆ
ಎಎಪಿ ಮುಖಂಡರು ಮತ್ತು ಕಾರ್ಯಕರ್ತರ ವಾಹನಗಳು ಒಂದೆಡೆಯಿದ್ದರೆ, ಮತ್ತೊಂದೆಡೆ ವಿವಿಧ ಟಿವಿ ಚಾನೆಲ್ಗಳ ವಾಹನಗಳು ಮತ್ತು ಪೊಲೀಸರ ವಾಹನಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಭದ್ರತೆ ನಿರಾಕರಿಸಿದರೂ ರೋಡ್ ಷೋ ಉದ್ದಕ್ಕೂ ಪೊಲೀಸರ ಭದ್ರತೆಯಿತ್ತು. ಪೊಲೀಸರು ಮತ್ತು ಕಾರ್ಯಕರ್ತರ ಬಂದೋಬಸ್ತ್ ದಾಟಿಕೊಂಡು ಕೇಜ್ರಿವಾಲ್ ಅವರನ್ನು ಮಾತನಾಡಿಸಲು ಜನರು ಪ್ರಯಾಸಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.