ಭಾನುವಾರ, ಮೇ 16, 2021
29 °C

ಮೋಜಿನ ಕಾಮಿಕ್ ಕಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಮಿಕ್ ಕಾನ್ ಇಂಡಿಯಾ ನೇತೃತ್ವದಲ್ಲಿ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಎರಡು ದಿನಗಳ `ಕಾಮಿಕ್ ಕಾನ್ 2013' ನಡೆಯಿತು. ವಿವಿಧ ನಮೂನೆಯ ಉಡುಗೆ ತೊಡುಗೆ ಧರಿಸುವುದು, ಅಂತರರಾಷ್ಟ್ರೀಯ ಪಾಲ್ಗೊಳ್ಳುವಿಕೆ, ಕಾರ್ಯಾಗಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪುಸ್ತಕ ಪ್ರದರ್ಶನ, ಹಾಸ್ಯ, ಮನರಂಜನೆ, ಅನಿಮೇಶನ್, ವಿಜ್ಞಾನ, ಗೇಮಿಂಗ್ ಮತ್ತಿತರ ಕಾರ್ಯಕ್ರಮಗಳು ಮಕ್ಕಳನ್ನು ರಂಜಿಸಿದವು.ಬಾಲಿವುಡ್ ನಟ ಕುನಾಲ್ ಕಪೂರ್ (ಕೆಳಗಡೆ ಕೊನೆಯ ಚಿತ್ರ) ಮಿಂಟ್ರಾ ಡಾಟ್‌ಕಾಮ್‌ನ ಮಾರಾಟ ಮಳಿಗೆಗೆ ಭೇಟಿ ನೀಡಿದ್ದು ಕಾರ್ಯಕ್ರಮದ ಹೈಲೈಟ್. ಮಕ್ಕಳು ತಮ್ಮ ನೆಚ್ಚಿನ ಕಾರ್ಟೂನ್ ಮತ್ತು ಕಾಮಿಕ್ಸ್ ಪಾತ್ರಧಾರಿಗಳಂತೆ ವೇಷ ಧರಿಸಿ ಎಲ್ಲರನ್ನೂ ರಂಜಿಸಿದರು.`ಪ್ರತಿಯೊಂದು ವಿಭಾಗದ ಆಟಗಳಲ್ಲಿ ಗೆದ್ದವರಿಗೆ ಗೋವಾ ಪ್ರವಾಸದ ಅವಕಾಶ ಸಿಗಲಿದೆ. ಅಲ್ಲದೇ ವಿವಿಧ ಶಿಬಿರಗಳಲ್ಲಿ ಅನ್ವೇಷಣೆಗಳ ಬಗ್ಗೆ ಹೆಚ್ಚಿನ  ಮಾರ್ಗದರ್ಶನ ನೀಡಲಾಗುವುದು' ಎಂದು ಕಾಮಿಕ್ ಕಾನ್ ಇಂಡಿಯಾದ ಸಂಸ್ಥಾಪಕ ಜತಿನ್ ವರ್ಮಾ ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.