ಶನಿವಾರ, ಮೇ 21, 2022
23 °C

ಮ್ಯೂಚುವಲ್ ಫಂಡ್: ವಿಶೇಷ ಸಾಲ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಮಾರುಕಟ್ಟೆಯಲ್ಲಿ ನಗದು ಲಭ್ಯತೆ ಕೊರತೆಯಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಮ್ಯೂಚುವಲ್ ಫಂಡ್ ಸಂಸ್ಥೆಗಳ ನೆರವಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ವಿಶೇಷ ಸಾಲ ಯೋಜನೆ ಪ್ರಕಟಿಸಿದೆ.ವಿಶೇಷ ಸಾಲ ಯೋಜನೆಯಡಿ ಶೇ 10.25ರ ಬಡ್ಡಿ ದರದಲ್ಲಿ ಮ್ಯೂಚುವಲ್ ಫಂಡ್ ಸಂಸ್ಥೆಗಳಿಗೆ ರೂ.25 ಸಾವಿರ ಕೋಟಿ ಬಿಡುಗಡೆ ಮಾಡುವಂತೆ `ಆರ್‌ಬಿಐ' ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಹೆಚ್ಚುವರಿ ಬಂಡವಾಳ ಸಂಗ್ರಹಿಸಲು ಬ್ಯಾಂಕುಗಳಿಗೆ ಮೂರು ದಿನಗಳ ವಿಶೇಷ ರೆಪೊ ದರವನ್ನೂ ಕೂಡ ನಿಗದಿಪಡಿಸಿದೆ.`ಈ ಸೌಲಭ್ಯ ಸೀಮಿತ ಅವಧಿಗೆ ಮಾತ್ರ' ಎಂದು `ಆರ್‌ಬಿಐ' ಪ್ರಕಟಣೆಯಲ್ಲಿ ತಿಳಿಸಿದೆ. ನಗದು ಲಭ್ಯತೆ ಕೊರತೆಯಿಂದ ಮ್ಯೂಚುವಲ್ ಫಂಡ್ ಉದ್ಯಮ 20   12-13ನೇ ಸಾಲಿನಲ್ಲಿ 36 ಲಕ್ಷ ಹೂಡಿಕೆದಾರರನ್ನು ಕಳೆದುಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.