ಮಂಗಳವಾರ, ಜೂನ್ 15, 2021
22 °C

ಯಕ್ಷಗಾನ ಮೂಲಕ ಆಧುನಿಕ ಶಿಕ್ಷಣ: ಕೆ.ಇ.ರಾಧಾಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪೌರಾಣಿಕ ಕತೆಗಳ ಮೂಲಕ ಆಧುನಿಕ ಶಿಕ್ಷಣ ನೀಡುವ ಸಾಮರ್ಥ್ಯ ಯಕ್ಷಗಾನಕ್ಕಿದೆ’ ಎಂದು ಶಿಕ್ಷಣತಜ್ಞ ಕೆ.ಇ.ರಾಧಾ­ಕೃಷ್ಣ ತಿಳಿಸಿದರು.ಕರ್ನಾಟಕ ಕಲಾದರ್ಶಿನಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಶಿವರಾಮ ಕಾರಂತ ಉತ್ಸವ ಕಾರ್ಯ­ಕ್ರಮದಲ್ಲಿ ಮಾತ­ನಾಡಿದರು.

‘ಸಾಂಸ್ಕೃತಿಕ ಪ್ರಕಾರಗಳಲ್ಲಿ ಒಂದಾದ ಯಕ್ಷಗಾನ ಕಲೆಯು ಮನರಂಜನೆಯಷ್ಟೆ ಅಲ್ಲದೇ ನೈತಿಕ ಶಿಕ್ಷಣ­ವನ್ನು ನೀಡುತ್ತದೆ. ದೇವಿ ಮಹಾತ್ಮೆಯ ಪ್ರಸಂಗಗಳು ಜನರಲ್ಲಿ ಭಕ್ತಿ ಭಾವವನ್ನು ಹುಟ್ಟಿಸುತ್ತದೆ’ ಎಂದು ಶ್ಲಾಘನೆ ವ್ಯಕ್ತಪಡಿಸಿದರು.‘ಯಕ್ಷಗಾನ ರಂಗದಲ್ಲಿರುವ ಹಲವು ಸವಾ­ಲು­ಗಳ ಬಗ್ಗೆಯೂ ಗಂಭೀರ ಚಿಂತನೆ ನಡೆಸಿ, ಪರಿಹಾರ ಕಂಡು­ಕೊಳ್ಳಬೇಕು’ ಎಂದರು.

ಬಲಿಪ ನಾರಾಯಣ ಭಾಗ­ವತರು, ಹಳ್ಳಾಡಿ ಜಯರಾಮಶೆಟ್ಟಿ ಅವರಿಗೆ  ಡಾ.ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.