ಭಾನುವಾರ, ಮೇ 16, 2021
28 °C

ಯಡಿಯೂರಪ್ಪನವರೇ ಸಂತರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣಿಕಪ್ಪ ಪಡೆದವರೆನ್ನಲಾದ ಸಂಬಂಧ `ಪ್ರಜಾವಾಣಿ~ ಕೆಲ ದಿನಗಳ ಹಿಂದೆ ಪ್ರಕಟಿಸಿದ ವರದಿಗಳನ್ನು ನೋಡಿ ಸಖೇದಾಶ್ಚರ್ಯವಾಯಿತು.`ಗಣಿ ಕಪ್ಪ~ ಸಂದದ್ದು ಯಾರು ಯಾರಿಗೆ? ಎಂಬ ತಲೆಬರಹದ ಆ ಸುದ್ದಿಯಲ್ಲಿರುವ ಹಲವು `ಗಣ್ಯರ~ ಹೆಸರುಗಳನ್ನು ಓದಿ ಯಡಿಯೂರಪ್ಪನವರು ಸಂತರಂತೆ ಗೋಚರಿಸಿದ್ದು ಅಚ್ಚರಿ.ಈ ಪಟ್ಟಿಯಲ್ಲಿರುವ ಹೆಸರುಗಳನ್ನು ಗಮನಿಸಿದರೆ ಯಡಿಯೂರಪ್ಪನವರು ಸಂತರಲ್ಲದೆ ಇನ್ನೇನು ಎನಿಸುತ್ತದೆ! ಇದನ್ನು ಓದಿ, ಹನ್ನೆರಡನೇ ಶತಮಾನದ ಬಸವಣ್ಣನವರು ಬರೆದ ಒಂದು ವಚನ ನೆನಪಾಯಿತು.“ಏರಿ ನೀರುಂಬೊಡೆ

ತಾಯ ಹಾಲು ವಿಷವಾದೊಡೆ

ಬೇಲಿ ಎದ್ದು ಹೊಲ ಮೆಯ್ದ್‌ಡೆ

ಇನ್ನಾರಿಗೆ ದೂರುವದು

ಕೂಡಲ ಸಂಗಮದೇವಾ”ಈ ವರದಿಯಲ್ಲಿ ಕಾಣಿಸಿಕೊಂಡವರ ಮೇಲೆಯೂ ತನಿಖಾ ಸಂಸ್ಥೆಯು ಕ್ರಮ ಕೈಕೊಳ್ಳಬೇಕು. ಇದನ್ನು ಉದಾಸೀನ ಮಾಡಬಾರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.