ಯಡಿಯೂರಪ್ಪ ಪದಚ್ಯುತಿಗೆ ಅಶೋಕ್ ಮತ್ತಿತರರ ಕ್ರಿಮಿನಲ್ ಸಂಚು: ಹೈಕೋರ್ಟ್ ಗೆ ದೂರು

7

ಯಡಿಯೂರಪ್ಪ ಪದಚ್ಯುತಿಗೆ ಅಶೋಕ್ ಮತ್ತಿತರರ ಕ್ರಿಮಿನಲ್ ಸಂಚು: ಹೈಕೋರ್ಟ್ ಗೆ ದೂರು

Published:
Updated:

ಬೆಂಗಳೂರು (ಪಿಟಿಐ): ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ರಾಜ್ಯ ಗೃಹ ಸಚಿವ ಆರ್. ಅಶೋಕ, ಬಿಜೆಪಿ ಸಂಸತ್ ಸದಸ್ಯ ಅನಂತ ಕುಮಾರ್ ಮತ್ತು ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸಂಚು ಹೂಡಿದ್ದಾರೆ ಎಂದು ಆಪಾದಿಸಿ ನಗರದ ವಕೀಲರೊಬ್ಬರು ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.~ಈ ಎಲ್ಲ ವ್ಯಕ್ತಿಗಳು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪದಚ್ಯುತಿಗಾಗಿ ಕ್ರಿಮಿನಲ್ ಒಳಸಂಚು ಹೂಡಿದ್ದರು~ ಎಂದು ವಕೀಲ ಎಚ್.ಆರ್. ವಿಶ್ವನಾಥ್ ತಮ್ಮ ಅರ್ಜಿಯಲ್ಲಿ ಆಪಾದಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ವಿರುದ್ಧದ ಕ್ರಿಮಿನಲ್ ಒಳಸಂಚು ವಿರುದ್ಧ ತನಿಖೆಗಾಗಿ ಸಮಿತಿ ರಚನೆಗೆ ಆಜ್ಞಾಪಿಸುವಂತೆ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮೀ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಅಕ್ಟೋಬರ್ 20ರಂದು ಬರುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry