ಭಾನುವಾರ, ಏಪ್ರಿಲ್ 18, 2021
24 °C

ಯಾದಗಿರಿ: ಮುಗಿಲು ಮುಟ್ಟಿದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಸಂವಿಧಾನದ 371 ನೇ ಕಲಂ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟದ ರಾಜಕೀಯ ವ್ಯವಹಾರಗಳ ಸಮಿತಿಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂಭ್ರಮ ಮುಗಿಲು ಮುಟ್ಟಿತ್ತು. ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಕೇಂದ್ರದ ನಿಲುವನ್ನು ಸ್ವಾಗತಿಸಿ, ವಿಜಯೋತ್ಸವ ಆಚರಿಸಿದವು.ಕೆಲವೆಡೆ ಬೈಕ್ ರ‌್ಯಾಲಿ ನಡೆಸಿದರೆ, ಇನ್ನೂ ಕೆಲವರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕೇಂದ್ರ ಸರ್ಕಾರಕ್ಕೆ ಜಯಘೋಷ ಹಾಕಿದರು. ಬಹುದಿನಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ ಕೇಂದ್ರ ಸರ್ಕಾರವನ್ನು ಅಭಿನಂದಿಸಿದರು.ಹೈ.ಕ. ಹೋರಾಟ ಸಮಿತಿ: ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಘಟಕದ ವತಿಯಿಂದ ಕಾರ್ಯಾಧ್ಯಕ್ಷ ವೆಂಕಟರಡ್ಡಿ ಮುದ್ನಾಳ ನೇತೃತ್ವದಲ್ಲಿ ಶನಿವಾರ ಇಲ್ಲಿಯ ಗಾಂಧಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.ಪಕ್ಷಾತೀತವಾಗಿ ನಾಯಕರು ಹಾಗೂ ಕಾರ್ಯಕರ್ತರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟರಡ್ಡಿ ಮುದ್ನಾಳ, ಮೂರು ದಶಕಗಳ ಕಾಲ ಸಮಿತಿಯ ಹಿರಿಯ ಹೋರಾಟಗಾರರಾದ ವೈಜನಾಥ ಪಾಟೀಲ್, ಲಿಂ. ವಿಶ್ವನಾಥರಡ್ಡಿ ಮುದ್ನಾಳ, ವಿದ್ಯಾಧರ ಗುರುಜಿ, ಲಿಂ. ಹಣಮಂತರಾವ ದೇಸಾಯಿ ಹಾಗೂ ವಿವಿಧ ಜನಪರ ಸಂಘಟನೆಗಳ ಪದಾಧಿಕಾರಿಗಳ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ 371ನೇ ಕಲಂಗೆ ತಿದ್ದುಪಡಿ ತರಲು ಮುಂದಾಗಿರುವುದು ಸ್ವಾಗತಾರ್ಹ ಎಂದರು.

ಸಂವಿಧಾನ ತಿದ್ದುಪಡಿಯಿಂದ ಹಿಂದುಳಿದ ಈ ಭಾಗದ 6 ಜಿಲ್ಲೆಗಳಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ ಸಿಗುವುದರ ಜೊತೆಗೆ ಸರ್ವಾಂಗೀಣ ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.ಅಯ್ಯಣ್ಣ ಹುಂಡೇಕಾರ, ಸಮಿತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿದರು. ವಿಜಯೋತ್ಸವದಲ್ಲಿ ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ, ಜೆಡಿಎಸ್ ಮುಖಂಡ ಶ್ರೀನಿವಾಸರಡ್ಡಿ ಪಾಟೀಲ್ ಚೆನ್ನೂರು, ಆರ್. ಮಹಾದೇವಪ್ಪಗೌಡ ಅಬ್ಬೆತುಮಕೂರ, ಮೋಹನಬಾಬು, ಸಿದ್ಧರಾಜ ಪಾಟೀಲ್, ಶರಣಗೌಡ ಬಾಡಿಯಾಳ, ಮಲ್ಲಿಕಾರ್ಜುನ ಅನಸೂಗುರು, ಗೋಪಾಲ ದಾಸನಕೇರಿ, ಬಸವರಾಜ ಮೋಟನಳ್ಳಿ, ನಿಂಗಪ್ಪ ಹತ್ತಿಮನಿ, ಬಸವಂತರಾಯಗೌಡ ಪಾಟೀಲ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಕರ್ಲಿ, ನಿಂಗು ಜಡಿ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ, ಚಂದ್ರಶೇಖರ ದಾಸನಕೇರಿ, ವಿ.ಸಿ.ರಡ್ಡಿ, ನಾಗಪ್ಪ ಬೆನಕಲ್, ಚನ್ನಪಗೌಡ ಮೋಸಂಬಿ, ರವಿ ಬಾಪುರೆ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವಯ್ಯ ಸ್ವಾಮಿ, ಕೃಷ್ಣಮೂರ್ತಿ ಕುಲಕರ್ಣಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.ಕರವೇ:  ಕರ್ನಾಟಕ ರಕ್ಷಣಾ ವೇದಿಕೆ (ಶೆಟ್ಟಿ ಬಣ) ಕಾರ್ಯಕರ್ತರು ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ ನೇತೃತ್ವದಲ್ಲಿ ಇಲ್ಲಿಯ ಕೇಂದ್ರ ಬಸ್ ನಿಲ್ದಾಣ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ದೇವು ಪಾಟೀಲ, ಸಿದ್ದುರಡ್ಡಿ ತಂಗಡಗಿ, ರವಿಕುಮಾರ ತಡಿಬಿಡಿ, ಕುಮಾರ, ಸುಪ್ರೀತ್, ಸದ್ದಾಂ, ಬಾಪುಗೌಡ, ಲಕ್ಷ್ಮಿರಡ್ಡಿ, ಶಾಂತಕುಮಾರ, ರಮೇಶ ಎಂ, ನಿಂಗಣ್ಣ, ಅಯ್ಯಪ್ಪ, ಆನಂದ, ನಾಗರಾಜ ಸೈದಾಪುರ ಮುಂತಾದವರು ಹಾಜರಿದ್ದರು.ವೀರ ಕನ್ನಡಿಗ ಪ್ರತಿಷ್ಠಾನ: ವೀರ ಕನ್ನಡಿಗ ಪ್ರತಿಷ್ಠಾನ ಹಾಗೂ ಜಯಕರ್ನಾಟಕ ಸಂಘಟನೆಗಳ ವತಿಯಿಂದ ಇಲ್ಲಿಯ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ, ಚಂದ್ರಖೇಖರ ದಾಸನಕೇರಿ, ಮಹಾದೇವಪ್ಪ ಗಣಪೂರ, ಸುಭಾಷ ಮಾಳಿಕೇರಿ, ಕಸ್ತೂರಿ ಕನ್ನಡ ಜನಪರ ವೇದಿಕೆ ಮಹಾದೇವಯ್ಯ ಸ್ವಾಮಿ, ಅನಿಲ, ಜಗದೀಶ ದಾಸನಕೇರಿ, ಚಂದು ಮುಂಡ್ರಿಕೇರಿ, ಶಿವು ದಾಸನಕೇರಿ, ಚಂದ್ರಶೇಖರ ದಾಸಕೇರಿ, ಶಾಂತರಾಜ ಮ್ಯೋಗೇರಿ, ತಥಾಗತ ಗೌತಮಬುಧ್ಧ ಟ್ರಸ್ಟ್ ಅಧ್ಯಕ್ಷ ಮಲ್ಲಿನಾಥ ಸುಂಗಲಕರ್, ಶಿವುಕುಮಾರ, ಕಲ್ಯಾಣ ಕರ್ನಾಟಕ ಯುವ ಸೇನೆಯ ಅಧ್ಯಕ್ಷ ರವಿ ರಾಠೋಡ, ಅನಿಲ ಮ್ಯೋಗೇರಿ, ಭೀಮಣ್ಣ ಹೊಸಮನಿ, ಶರಣು ಮುಂಡ್ರಿಕೇರಿ, ಮಲ್ಲು ಗಾಜರಕೋಟಿ ಪಾಲ್ಗೊಂಡಿದ್ದರು.ಬೈಕ್ ರ‌್ಯಾಲಿ: ಕೇಂದ್ರ ಸಚಿವ ಸಂಪುಟದ ರಾಜಕೀಯ ವ್ಯವಹಾರಗಳ ಸಮಿತಿ ನಿರ್ಧಾರದ ಹಿನ್ನೆಲೆಯಲ್ಲಿ ನಾನಾ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ರಾತ್ರಿ ವಿಜಯೋತ್ಸವ ಆಚರಿಸಿದರು.ಶಾಸ್ತ್ರಿ ವೃತ್ತದ ಬಳಿ ಪ್ರೊ. ನಂಜುಂಡಪ್ಪ ಅವರಿಗೆ ಜಯಘೋಷ ಹಾಕಿ, ಪಟಾಕಿ ಸಿಡಿಸಿದರು. ನಂತರ ನಗರದಲ್ಲಿ ಬೈಕ್ ರ‌್ಯಾಲಿ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜೈಕರವೇ ಸಂಘಟನೆಯ ಕಾರ್ಯಾಧ್ಯಕ್ಷ ಶ್ರೀಕಾಂಯ ಭೀಮನಳ್ಳಿ, ಈ ಭಾಗದ ದಶಕಗಳ ಕನಸನ್ನು ಕೆಂದ್ರ ಸರ್ಕಾರ ಸಾಕಾರ ಮಾಡಲು ನಿರ್ಧರಿಸಿರುವ ಸ್ವಾಗತಾರ್ಹ ಎಂದರು.

ಜೈಕರವೇಯ ಬಾಪುಗೌಡ, ಧರ್ಮಣ್ಣ, ಡಾ.ಅಜಯಸಿಂಗ್ ಅಭಿಮಾನಿಗಳ ಬಳಗದ ಸೋಹನ್ ಪ್ರಸಾದ್, ಕಲ್ಯಾಣ ಕರ್ನಾಟಕ ಯುವ ಸೇನೆಯ ರವಿ ಮುದ್ನಾಳ, ಸಾಯಿಶ್ರೀ ಸೇವಾ ಸಂಸ್ಥೆಯ ಸೈದಪ್ಪ ಗುತ್ತೇದಾರ, ಜಯಕರ್ನಾಟಕದ ಭೀಮಾಶಂಕರ ಆಲ್ದಾಳ, ಭೀಮಣ್ಣ ಹೊಸಮನಿ, ಶ್ರೀ ರಾಮುಲು ಅಭಿಮಾನಿಗಳ ಸಂಘದ ಅಶೋಕ ಮುದ್ನಾಳ, ಅರುಣಕುಮಾರ ಮಾಸನ್, ಚಂದ್ರು ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.ವಡಗೇರಾ
: ಸಮೀಪದ ವಡಗೇರಾದ ಬಸವೇಶ್ವರ ವೃತ್ತದ ಬಳಿ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ವಿಜಯೋತ್ಸವ ಆಚರಿಸಿದರು.ತಮಸ ಜಿಲ್ಲಾ ಘಟಕದ ಅಧ್ಯಕ್ಷ ಬಾಷುಮಿಯಾ ನಾಯ್ಕೋಡಿ ಮಾತನಾಡಿ, ಈ ಭಾಗದ ಅನೇಕ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಇದು ಸ್ವಾಗತಾರ್ಹ ಎಂದರು.ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ತಾಲ್ಲೂಕು ಯುವ ಘಟಕದ ಅಧ್ಯಕ್ಷ ನಿಂಗಣ್ಣ ಜಡಿ, ಕರವೇ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಇಟಗಿ, ರೈತರಾದ ಮಲ್ಲಯ್ಯ ಮುಸ್ತಾಜೀರ, ಶಂಕ್ರಣ್ಣ ಸಾಹು ಕರಣಗಿ, ಬಸವರಾಜ ಕಾಡಂನೋರ, ಮರೆಪ್ಪ ಚಿನ್ನಿ, ಅಶೋಕ ಮುಸ್ತಾಜೀರ, ದೇವಿಂದ್ರಪ್ಪ ಕಡೇಚೂರ, ಕನ್ನಡ ಸೇನೆಯ ಶಿವರಾಜ ನಾಡಗೌಡ, ನಾರಾಯಣ ಅಂಗಡಿ, ಎಸ್‌ಡಿಎಂಸಿ ಅಧ್ಯಕ್ಷ ಉಸ್ಮಾನ್ ಬಾಷಾ ತಡಬಿಡಿ, ಬಸವರಾಜ ನೀಲಹಳ್ಳಿ, ಸುಗಪ್ಪಗೌಡ ತೆಗ್ಗಿನಮನಿ, ಇಮಾಮ ಕುಲಕರ್ಣಿ, ಕೆ.ಎಂ.ಸಿ ಅಧ್ಯಕ್ಷ ಮಹ್ಮದ್ ಖುರೇಸಿ, ಸೈಯ್ಯದ್ ಕಾರ್ಪೆಂಟರ್, ವಿಶ್ವನಾಥ, ಮಲ್ಲಿಕಾರ್ಜುನ, ಶರಣು, ಶಿವು ಕೊಂಕಲ್, ವಿಜಯ ಹಡಪದ, ದೇವಿಂದ್ರ ಗೊರವರ, ಲಕ್ಷ್ಮಣ ಟೇಲರ್, ಗ್ರಾಮಸ್ಥರು ಹಾಜರಿದ್ದರು.ಕೆಂಭಾವಿ ವರದಿ: ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ಕಲ್ಪಿಸಲು ಸಂವಿಧಾನದ 371 ನೇ ಕಲಂ ತಿದ್ದುಪಡಿಗೆ ಕೇಂದ್ರ ಸಂಪುಟದ ರಾಜಕೀಯ ವ್ಯವಹಾರಗಳ ಸಮಿತಿ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಶನಿವಾರ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ  ವಿಜಯೋತ್ಸವ ಆಚರಿಸಿದರು.ಬೆಳಿಗ್ಗೆ ಪಟ್ಟಣದ ಬಜಾರ್ ಹನುಮಾನ ದೇವಸ್ಥಾನದಿಂದ ಕಾಲ್ನಡಿಗೆಯಲ್ಲಿ ಬಸವೇಶ್ವರ ವೃತ್ತದವರೆಗೆ ಜೈಕಾರ ಹಾಕುತ್ತ ಮೆರವಣಿಗೆ ನಡೆಸಿದ ಸದಸ್ಯರು, ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಹೋರಾಟ ಸಮಿತಿ ವಲಯ ಘಟಕದ ಅಧ್ಯಕ್ಷ ಪವನ ಕುಲಕರ್ಣಿ ಮಾತನಾಡಿ, ಸತತ ಮೂರು ದಶಕಗಳಿಂದ ನಡೆಸುತ್ತ ಬಂದ ಹೋರಾಟಕ್ಕೆ ಜಯ ಸಿಕ್ಕಂತಾಗಿದ್ದು, ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗರ ಸಹಕಾರ ಮತ್ತು ಒತ್ತಡದಿಂದ ಈ ಕೆಲಸವಾಗಿದೆ. ವಲಯದ ಎಲ್ಲ ಜನರ ಪರವಾಗಿ ಆಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ತೆಲಂಗಾಣ ಮತ್ತು ವಿದರ್ಭ ಮಾದರಿಗಿಂತ ಹೈದರಾಬಾದ್ ಕರ್ನಾಟಕಕ್ಕೆ ಕಲ್ಪಿಸಿರುವ ವಿಶೇಷ ಸ್ಥಾನಮಾನದಿಂದ ಸರ್ವಾಂಗೀಣ ಅಭಿವೃದ್ಧಿ ಆಗಲಿದೆ ಜನತೆಗೆ ಉತ್ತಮ ಶಿಕ್ಷಣ ಜೊತೆಗೆ ಉದ್ಯೋಗವು ಸಿಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಹೋರಾಟ ಸಮಿತಿ ಉಪಾಧ್ಯಕ್ಷ ತಿಪ್ಪಣ ಪುಜಾರಿ, ಕರವೇ ಅಧ್ಯಕ್ಷ ಭೀಮನಗೌಡ ಕಾಚಾಪುರ, ರಫೀಕ ವಡಕೇರಿ, ಗುಂಡಭಟ್ಟ ಜೋಶಿ, ಶಂಕರಗೌಡ ಪಾಟೀಲ ಶಿವನಂದಿ, ಶಿವಶಂಕರ ಖಾನಾಪುರ, ಗ್ರಾಮ ಪಂಚಾಯಿತಿ ಸದಸ್ಯರಾದ ಮಲಕಗೌಡ ಪೊಲೀಸ್‌ಪಾಟೀಲ, ಶ್ರೀಶೈಲ ಆಲ್ದಾಳ, ರಂಗಪ್ಪ ವಡ್ಡರ, ಮಹಿಪಾಲರಡ್ಡಿ ಡಿಗ್ಗಾವಿ, ರಮೇಶಗೌಡ ಪೊಲೀಸ್‌ಪಾಟೀಲ, ದೇವಿಂದ್ರಪ್ಪ ಜಾಲಿಬೆಂಚಿ, ಪ್ರಕಾಶ ಬೈಚಬಾಳ, ರಾಜು ಚಿಕ್ಕಮಠ, ರಾಜಶೇಖರಗೌಡ ಯಡಿಯಾಪುರ, ಅಯ್ಯನಗೌಡ ಪಾಟೀಲ ಮಾಳಳ್ಳಿ, ಅಯ್ಯಪ್ಪ ಹೊಸಮನಿ, ಶಿವು ತುಂಬಗಿ, ಸುನೀಲ, ಆನಂದ ಆಸಿಂಗಾಳ, ಬಾಬು ದೇವರಮನಿ, ಬಸವರಾಜ ಬಸರಿಗಿಡ, ಅಲ್ಲಿಸಾ ವಡಕೇರಿ, ಉದಯರಾವ ಕುಲಕರ್ಣಿ, ಅಲ್ಲಾಭಕ್ಷ ಹುಳಬುತ್ತಿ ಸೇರಿದಂತೆ ಸುತ್ತಲಿನ ಗ್ರಾಮದ ನೂರಾರು ಜನ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.