ಶಹಾಪುರ: ಕೃಷ್ಣಾ ಭಾಗ್ಯ ಜಲ ನಿಗಮದ ಭೀಮರಾಯನಗುಡಿ ಕಚೇರಿಯ ಮುಖ್ಯ ಎಂಜಿನಿಯರ್ ಆಗಿ ಯಾರನ್ನು ನೇಮಿಸಬೇಕು? ಎಂದು ಕೆಬಿಜೆಎನ್ಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಪಿಲ್ ಮೋಹನ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ
ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದು ಕೋರಿದ್ದಾರೆ.

ಪ್ರಭಾರವನ್ನು ಮುಖ್ಯ ಎಂಜಿನಿಯರ್ ಪ್ರಮೋದರಡ್ಡಿ ಪಾಟೀಲ್ ‘ಸ್ವಯಂ ಗ್ರಹಣ’ ಮಾಡಿರುವುದು. ಸುಪ್ರೀಂ ಕೋರ್ಟ್ ಆದೇಶದಂತೆ ಬಿ.ವೈ.ಜುಮ್ಮನಾಳ ಅವರನ್ನು ಯಥಾಸ್ಥಿತಿ ಮುಂದುವರೆಸುವ ತೀರ್ಪಿನ ಕುರಿತು ನಿರ್ದೇಶನ ಹಾಗೂ ಭೀಮರಾಯನಗುಡಿಯಲ್ಲಿ ಮುಖ್ಯ ಎಂಜಿನಿಯರ್ ಆಗಿ ಯಾರನ್ನು ಮುಂದುವರೆಸಬೇಕು ಕುರಿತು ತುರ್ತಾಗಿ ಸೂಕ್ತ ಆದೇಶ ಹೊರಡಿಸುವಂತೆ ಕೋರಿ ಸರ್ಕಾರದ ಆದೇಶ ಹಾಗೂ ನಿರ್ದೇಶನಕ್ಕಾಗಿ ಎಲ್ಲರ ಕಣ್ಣು ವಿಧಾನಸೌಧದತ್ತ ನೆಟ್ಟಿದೆ.

ಹುದ್ದೆಯಲ್ಲಿ ಯಾರು ಮುಂದುವರೆಯಬೇಕು? ಎಂಬ ಸ್ಪಷ್ಟವಾದ ನಿರ್ದೇಶನವಿಲ್ಲದ ಕಾರಣ ಸೋಮವಾರ ಇಬ್ಬರು ಕಚೇರಿಗೆ ಬಂದಿಲ್ಲ. ಆದರೆ, ಮುಖ್ಯ ಎಂಜಿನಿಯರ್ ಕೊಠಡಿಯ ಬಾಗಿಲು ತೆರೆದಿತ್ತು. ಕುರ್ಚಿಯಲ್ಲಿ ಮಾತ್ರ ಕುಳಿತುಕೊಳ್ಳುವ ಸಾಹಸಕ್ಕೆ ಕೈ ಹಾಕಿಲ್ಲ.

ಭೀಮರಾಯನಗುಡಿ ಆಡಳಿತ ಕಚೇರಿಯ ಮುಂದೆ ಮತ್ತಷ್ಟು ಪೊಲೀಸ್ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಇಬ್ಬರು ಎಂಜಿನಿಯರ್ ಸ್ವಜಾತಿಯ ಮುಖಂಡರು ಪರ ವಿರೋಧದ ಹೋರಾಟ ನಡೆಸುವ ಚಿಂತನೆ ಶುರುವಾಗಿದೆ. ಇಬ್ಬರು ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘಟನೆಯ ಮುಖಂಡರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.