ಕೊಪ್ಪಳ: ಶಾಲೆಯಿಂದ ಹೊರಗುಳಿದ ಮಕ್ಕಳ ಕಾರ್ಯತಂತ್ರಗಳ ಅನುಷ್ಠಾನಗೊಳಿಸುವ ಸಂಬಂಧ ಸ್ವಯಂ ಸೇವಾ ಸಂಸ್ಥೆಗಳ (ಎನ್ಜಿಒ) ಆಯ್ಕೆಗಾಗಿ ಜೂ. 4ರಂದು ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಪ್ರೊಕ್ಯೂರಮೆಂಟ್ ಹಾಗೂ ಸ್ಕ್ರೀನಿಂಗ್ ಸಮಿತಿ ಸಭೆ ನಡೆಯಲಿದ್ದು, ಕುತೂಹಲ ಹೆಚ್ಚಿಸಿದೆ.

ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ಈ ಸಭೆ ನಡೆಯಲಿದ್ದು, ಯಾರ `ಕಾರ್ಯತಂತ್ರ'ಕ್ಕೆ ಜಯ ಸಿಗಲಿದೆ ಎಂಬ ಅಂಶವೇ ಕುತೂಹಲಕ್ಕೆ ಕಾರಣವಾಗಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಅವರಿಗೆ ತರಬೇತಿ ನೀಡಿ ಶೈಕ್ಷಣಿಕ ಮುಖ್ಯವಾಹಿನಿಗೆ ತರುವ ಸಂಬಂಧ ಸರ್ವ ಶಿಕ್ಷಣ ಅಭಿಯಾನದಡಿ ಹಲವಾರು ಕಾರ್ಯತಂತ್ರಗಳನ್ನು ರೂಪಿಸಲಾಗಿದೆ.

ವಸತಿಯುತ ಮತ್ತು ವಸತಿ ರಹಿತ ಚಿಣ್ಣರ ಅಂಗಳ, ನಗರ ವಂಚಿತ ಶಿಕ್ಷಣ ಮಕ್ಕಳು ಹಾಗೂ ಋತುಮಾನ ವಸತಿಯುತ ವಿಶೇಷ ತರಬೇತಿ ನಡೆಸುವುದು ಈ ಕಾರ್ಯತಂತ್ರಗಳಲ್ಲಿ ಸೇರಿವೆ.

ಈ ಕಾರ್ಯತಂತ್ರಗಳ ಅನುಷ್ಠಾನಕ್ಕಾಗಿ ಪ್ರತಿ ವರ್ಷ ಜಿಲ್ಲೆಯಲ್ಲಿ 20ಕ್ಕೂ ಅಧಿಕ ಎನ್ಜಿಒಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಇಂತಹ `ಕಾರ್ಯತಂತ್ರ'ಗಳ ಅನುಷ್ಠಾನದ ಜವಾಬ್ದಾರಿಯನ್ನು ಎನ್ಜಿಒಗಳಿಗೆ ನೀಡುವ ಬದಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ನೀಡಲು ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ.ರವಿ ತೀರ್ಮಾನಿಸಿದ್ದಾರೆ ಎಂಬುದೇ ಸಭೆ ಬಗ್ಗೆ ಕುತೂಹಲ ಮೂಡಿಸಿದೆ.

ಬೆರಳೆಣಿಕೆಯಷ್ಟು ಎನ್ಜಿಒಗಳು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಈ ಕಾರ್ಯತಂತ್ರಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡುತ್ತಿದ್ದವು. ಉಳಿದಂತೆ, ಬಹುತೇಕ ಎನ್ಜಿಒಗಳು ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತಂತೆ ಸುಳ್ಳು ಪಟ್ಟಿಯನ್ನು ಸಿದ್ಧಪಡಿಸಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದವು ಎಂಬ ದೂರುಗಳೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಈ ಕಾರ್ಯತಂತ್ರಗಳ ಅನುಷ್ಠಾನದ ಜವಾಬ್ದಾರಿಯನ್ನು ಎನ್ಜಿಒಗಳಿಗೆ ವಹಿಸಬಹುದು ಇಲ್ಲವೇ ಇಲಾಖೆ ವತಿಯಿಂದ ನಡೆಸಲು ಇಚ್ಛಿಸಿದಲ್ಲಿ ಕಾರ್ಯತಂತ್ರಗಳನ್ನು ನಿಗದಿಪಡಿಸಿದ ಸಮಯದಲ್ಲಿ ಪ್ರಾರಂಭಿಸಬಹುದು ಎಂಬುದಾಗಿ ಸರ್ವ ಶಿಕ್ಷಣ ಅಭಿಯಾದನ ರಾಜ್ಯ ಯೋಜನಾ ನಿರ್ದೇಶಕರು ಮೇ 21ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಸೂಚಿಸಿರುವುದು ಈಗ ಎನ್ಜಿಒಗಳಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಿಮಿಸಿದೆ.

ಆದರೆ, ಎನ್ಜಿಒಗಳು ಹೇರುವ ಒತ್ತಡವನ್ನು ಪ್ರತಿರೋಧಿಸಿ ಅವುಗಳನ್ನು ಆಯ್ಕೆ ಮಾಡದೇ ಕಾರ್ಯತಂತ್ರಗಳನ್ನು ಶಿಕ್ಷಣ ಇಲಾಖೆ ಮೂಲಕವೇ ಅನುಷ್ಠಾನಗೊಳಿಸುವ ಕಠಿಣ ನಿರ್ಧಾರವನ್ನು ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೈಗೊಳ್ಳುವರೇ ಎಂಬ ಪ್ರಶ್ನೆ ಸ್ವತಃ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕಾಡುತ್ತಿದೆ.

ಸಮಿತಿಯ ಸದಸ್ಯರಾಗಿರುವ ಕೆಲವರು ಪ್ರಮುಖ ರಾಜಕೀಯ ಪಕ್ಷವೊಂದರ ಜೊತೆ ಗುರುತಿಸಿಕೊಂಡಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡುತ್ತದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಅಭಿಯಾನದ ಸಮರ್ಪಕ ಮತ್ತು ಪರಿಣಾಮಕಾರಿಯಾದ ಅನುಷ್ಠಾನಕಾಗಿ ಇಲಾಖೆಯಿಂದಲೇ ಕಾರ್ಯತಂತ್ರಗಳ ಅನುಷ್ಠಾನವಾಗಬೇಕು ಎಂಬ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರವಿ ಅವರ ನಿಲುವು ಸ್ವಾಗತಾರ್ಹ ಎಂದು ಎಸ್ಎಫ್ಐನ ರಾಜ್ಯ ಉಪಾಧ್ಯಕ್ಷ ಗುರುರಾಜ ದೇಸಾಯಿ ಹೇಳುತ್ತಾರೆ.

ಬೆಂಗಳೂರಿನಿಂದ ಫೋನ್ ಬಂದರೆ...
ಕೊಪ್ಪಳ:`ಎನ್ಜಿಒಗಳಿಗೇ ಕಾರ್ಯತಂತ್ರಗಳ ಅನುಷ್ಠಾನದ ಜವಾಬ್ದಾರಿ ನೀಡಬೇಕು ಎಂಬ ಸೂಚನೆ ಬೆಂಗಳೂರಿನಿಂದ ಬರುವುದು ಖಚಿತ. ಇಂತಹ ಸೂಚನೆಯನ್ನು ಸಮಿತಿ ಅಧ್ಯಕ್ಷರು ಧಿಕ್ಕರಿಸುವ ಸಾಧ್ಯತೆ ಇದೆಯೇ' ಎಂಬ ಪ್ರಶ್ನೆ ಸಹ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಮೊಗಸಾಲೆಯಲ್ಲಿ ಕೇಳಿ ಬರುತ್ತಿದೆ.

ವಿಜಾಪುರ ಜಿಲ್ಲೆ ಮೂಲದ ಎನ್ಜಿಒವೊಂದರ ಪರವಾಗಿ ಬೆಂಗಳೂರಿನಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಪ್ರತಿ ವರ್ಷ ದೂರವಾಣಿ ಮೂಲಕ ಸೂಚನೆ ನೀಡುತ್ತಾರೆ. ಇದರ ಫಲ ಎಲ್ಲ ಎನ್ಜಿಒಗಳಿಗೂ ದಕ್ಕಲಿದೆ. ಈ ವರ್ಷವೂ ಇಂತಹ ಸೂಚನೆ ಬಂದರೆ ಸಮಿತಿ ನಿರ್ಧಾರ ಏನಾಗಲಿದೆ ಎಂಬ ಕುತೂಹಲ ಸಹ ನಮ್ಮಲ್ಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.