ಬೆಂಗಳೂರು: `ಯುನಿಗ್ಲಾಸ್ ಕಂಪೆನಿಯ ಆಡಳತ ವರ್ಗ ಕಾರ್ಮಿಕರನ್ನು ಬೀದಿ ಪಾಲು ಮಾಡಿ ವೇತನ ನೀಡದಿರುವ ಬಗ್ಗೆ ಜುಲೈ 21ರಂದು ನಗರದ ಪುರಭವನ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ~ ಎಂದು ಯುನಿಗ್ಲಾಸ್ ವರ್ಕರ್ಸ್ ಯುನಿಯನ್ ಅಧ್ಯಕ್ಷ ಜೆ.ಆರ್.ಶಿವಶಂಕರ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕಾರ್ಖಾನೆಯಲ್ಲಿ ಸುಮಾರು 140 ಜನ ನೌಕರರು ಇದ್ದು, ವಾರ್ಷಿಕ 12 ಕೋಟಿ ವ್ಯವಹಾರ ನಡೆಸುತ್ತಿದೆ. ಏಪ್ರಿಲ್ ತಿಂಗಳಲ್ಲಿ ಕಾರ್ಮಿಕರಿಗೆ ಶೇ 24.41ರಷ್ಟು ವೇತನವನ್ನು ಕಡಿತಗೊಳಿಸಿದ್ದು, ಇತ್ತೀಚೆಗೆ ಕಾರಣವಿಲ್ಲದೇ 10 ಜನ ಕಾರ್ಮಿಕ ಮುಖಂಡರನ್ನು ಅಮಾನತ್ತುಗೊಳಿಸಿದ್ದಾರೆ~ ಎಂದು ಆರೋಪಿಸಿದರು.

`ಆಡಳಿತ ವರ್ಗ ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು. ಏಪ್ರಿಲ್ನಿಂದ ಜೂನ್ ತಿಂಗಳಿನ ವೇತನ ಹಾಗೂ ಕಾರ್ಮಿಕರ ಮೇಲೆ ಹಾಗೂ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಿ ಪರಿಸರ ಮಾಲಿನ್ಯಕ್ಕೆ ಧಕ್ಕೆಮಾಡುತ್ತಿರುವ ಕಾರ್ಖಾನೆಯ ವಿರುದ್ಧ ಸರ್ಕಾರ ಸೂಕ್ತ ಕ್ರಮನ್ನು ಕೈಗೊಳ್ಳಬೇಕು~ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಯುನಿಗ್ಲಾಸ್ ವರ್ಕರ್ಸ್ ಯುನಿಯನ್ನ ಉಪಾಧ್ಯಕ್ಷ ಜೆ.ಶಶಿಧರ್ ರೈ, ಪ್ರಧಾನ ಕಾರ್ಯದರ್ಶಿ ಆರ್.ಪಿ.ನರೇಂದ್ರಬಾಬು, ಕಾರ್ಯದರ್ಶಿ ಗೋಪಾಲಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.