ಬುಧವಾರ, ಏಪ್ರಿಲ್ 21, 2021
30 °C

ಯುವತಿ ಮಾನಭಂಗ ಪ್ರಕರಣ: ಒಡಿಶಾದಲ್ಲಿ ಪ್ರಮುಖ ಆರೋಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ (ಪಿಟಿಐ): ಯುವತಿಯ ಮಾನಭಂಗ ಪ್ರಕರಣದ ಪ್ರಮುಖ ಆರೋಪಿಯು ಒಡಿಶಾದ ಭುವನೇಶ್ವರದಲ್ಲಿದ್ದು, ಇನ್ನೂ ಆತನನ್ನು ಬಂಧಿಸಿಲ್ಲ ಎಂದು ಮುಖ್ಯಮಂತ್ರಿ ತರುಣ್ ಗೊಗೊಯ್ ತಿಳಿಸಿದ್ದಾರೆ.ಪ್ರಕರಣದ ಮೊದಲ ಮತ್ತು ಪ್ರಮುಖ ಆರೋಪಿ ಅಮರಜ್ಯೋತಿ ಕಲಿತ್ತನ ಮೊಬೈಲ್ ಸಂಭಾಷಣೆಯನ್ನು ಆಲಿಸಿದ್ದು, ಆತ ಭುವನೇಶ್ವರದಲ್ಲಿರುವುದು ತಿಳಿದು ಬಂದಿದೆ. ಈತನನ್ನು ಬಂಧಿಸಲು, ರಾಜ್ಯದ ಪೊಲೀಸರು ಒಡಿಶಾ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ಮೊದಲ ಆರೋಪಿ ಮತ್ತು ಇತರ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.

 

ಮಾಧ್ಯಮಗಳ ವರ್ತನೆಗೆ ಖಂಡನೆ:   ಪ್ರಕರಣದಲ್ಲಿ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳು ಅನುಸರಿಸಿದ ಧೋರಣೆಯನ್ನು ಮುಖ್ಯಮಂತ್ರಿ ತರುಣ್ ಗೊಗೊಯ್ ಖಂಡಿಸಿದ್ದು, `ಇದು  ನೀತಿಗೆಟ್ಟ ನಡವಳಿಕೆ~ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.