ಗುರುವಾರ , ಜೂನ್ 17, 2021
26 °C

ಯುವತಿ ಮೂಗಿಗೆ ಕತ್ತರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌ (ಐಎಎನ್‌ಎಸ್‌): ತನ್ನ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮಗಳು ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದಳು ಎಂಬ ಕಾರಣಕ್ಕೆ ಇಲ್ಲಿನ ಪ್ರಭಾವಿ ಭೂಮಾಲೀಕ ಕುಟುಂಬದವರು ಆಕೆಯ ಮೂಗನ್ನೇ ಕತ್ತರಿಸಿದ ಘಟನೆ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದಿದೆ.



ಫರೀದಾ ಬೀಬಿ (20) ಎಂಬ ಯುವತಿಯ ತಂದೆ ಪಂಜಾಬ್‌ ಪ್ರಾಂತ್ಯದ ಬಸ್ತಿ ಶೇರ್‌ವಾಲಿಯಲ್ಲಿ ಜಮ್‌ಶೆಡ್‌ ಮತ್ತು ನದೀಮ್‌ ಎಂಬುವವರ ಬಳಿ ಕೆಲಸ ಮಾಡುತ್ತಿದ್ದರು.



ಜಮ್‌ಶೆಡ್‌ ಅವರ ಪುತ್ರ ಫರೀದಾರನ್ನು ಪದೇ ಪದೇ ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದಕ್ಕೆ ಫರೀದಾ ಒಪ್ಪಿಗೆ ನೀಡಲಿಲ್ಲ. ಇದರಿಂದ ರೊಚ್ಚಿಗೆದ್ದ ಜಮ್‌ಶೆಡ್‌, ನದೀಮ್‌ ಮತ್ತು ಇತರೆ ಐವರು ಆಕೆಯ ಮನೆಯೊಳಗೆ ನುಗ್ಗಿ, ಚಿತ್ರ­ಹಿಂಸೆ ನೀಡಿ ಮೂಗನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆಯೂ ಆಕೆಯ ಅಪಹರಣಕ್ಕೆ ಆರೋಪಿಗಳು ಯತ್ನಿಸಿ ವಿಫಲರಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.