ಮಂಗಳವಾರ, ಮೇ 17, 2022
27 °C

ಯುವರಾಜ್, ವಿರಾಟ್ ಕೊಹ್ಲಿಗೆ ಬಡ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಯುವರಾಜ್ ಸಿಂಗ್ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ `ಎ~ ಶ್ರೇಣಿಗೆ ಮರಳಿದ್ದಾರೆ. ಬಿಸಿಸಿಐ ತನ್ನ ಗುತ್ತಿಗೆ ವ್ಯಾಪ್ತಿಯಲ್ಲಿ ಬರುವ ಆಟಗಾರರ ಹೊಸ ಪಟ್ಟಿಯನ್ನು ಶನಿವಾರ ಪ್ರಕಟಿಸಿತು. ಇಶಾಂತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರೂ `ಎ~ ಶ್ರೇಣಿಗೆ ಬಡ್ತಿ ಪಡೆದಿದ್ದಾರೆ.ಮಹೇಂದ್ರ ಸಿಂಗ್ ದೋನಿ, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಸುರೇಶ್ ರೈನಾ. ಹರಭಜನ್ ಸಿಂಗ್ ಮತ್ತು ಜಹೀರ್ ಖಾನ್ `ಎ~ ಶ್ರೇಣಿಯಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. `ಎ~ ಶ್ರೇಣಿಯಲ್ಲಿ ಕಾಣಿಸಿಕೊಂಡ 12 ಆಟಗಾರರು ವಾರ್ಷಿಕ ಒಂದು ಕೋಟಿ ರೂ. ಪಡೆಯಲಿದ್ದಾರೆ. `ಬಿ~ ಮತ್ತು `ಸಿ~ ಶ್ರೇಣಿಯಲ್ಲಿರುವ ಆಟಗಾರರು ಕ್ರಮವಾಗಿ 50 ಹಾಗೂ 25 ಲಕ್ಷ ರೂ. ಪಡೆಯುವರು.ಬಿಸಿಸಿಐ ಈ ಬಾರಿ ತನ್ನ ಗುತ್ತಿಗೆ ವ್ಯಾಪ್ತಿಯೊಳಗಿನ ಆಟಗಾರರ ಸಂಖ್ಯೆಯನ್ನು 36ಕ್ಕೆ ಹೆಚ್ಚಿಸಿದೆ. ಕಳೆದ ವರ್ಷ ಪಟ್ಟಿಯಲ್ಲಿ ಒಟ್ಟು 24 ಆಟಗಾರರಿದ್ದರು. ಈ ಬಾರಿ `ಸಿ~ ಶ್ರೇಣಿಗೆ 11 ಹೊಸ ಆಟಗಾರರನ್ನು ಸೇರಿಸಲಾಗಿದೆ. ಕರ್ನಾಟಕದ ಬೌಲರ್‌ಗಳಾದ ವಿನಯ್ ಕುಮಾರ್ ಮತ್ತು ಅಭಿಮನ್ಯು ಮಿಥುನ್ `ಸಿ~ ಶ್ರೇಣಿಯಲ್ಲಿ ಕಾಣಿಸಿಕೊಂಡಿದ್ದಾರೆ.ಯುವರಾಜ್ ಸಿಂಗ್ ಕಳೆದ ವರ್ಷ `ಬಿ~ ಗ್ರೇಡ್‌ಗೆ ಹಿಂಬಡ್ತಿ ಪಡೆದಿದ್ದರು. ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇಶಾಂತ್ ಹಾಗೂ ಇತ್ತೀಚೆಗೆ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ಮಿಂಚಿದ ವಿರಾಟ್ ಕೊಹ್ಲಿ `ಎ~ ಶ್ರೇಣಿಯಲ್ಲಿ ಸ್ಥಾನ ಗಳಿಸಿದ್ದಾರೆ. `ಬಿ~ ಶ್ರೇಣಿಯಲ್ಲಿ ಐದು ಆಟಗಾರರು ಇದ್ದು, ಪ್ರವೀಣ್ ಕುಮಾರ್ ಮತ್ತು ಪ್ರಗ್ಯಾನ್ ಓಜಾ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.`ಎ~ ಶ್ರೇಣಿ (ವಾರ್ಷಿಕ ಒಂದು ಕೋಟಿ ರೂ.): ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ದೋನಿ, ವಿವಿಎಸ್ ಲಕ್ಷ್ಮಣ್, ಸುರೇಶ್ ರೈನಾ, ಹರಭಜನ್ ಸಿಂಗ್, ಜಹೀರ್ ಖಾನ್, ಯುವರಾಜ್ ಸಿಂಗ್, ಇಶಾಂತ್ ಶರ್ಮ, ವಿರಾಟ್ ಕೊಹ್ಲಿ.`ಬಿ~ ಶ್ರೇಣಿ (ರೂ. 50 ಲಕ್ಷ): ಪ್ರವೀಣ್ ಕುಮಾರ್, ಪ್ರಗ್ಯಾನ್ ಓಜಾ, ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮ, ರವೀಂದ್ರ ಜಡೇಜ.`ಸಿ~ ಶ್ರೇಣಿ (ರೂ. 25 ಲಕ್ಷ): ಎಸ್. ಶ್ರೀಶಾಂತ್, ಅಮಿತ್ ಮಿಶ್ರಾ, ಚೇತೇಶ್ವರ ಪೂಜಾರ, ಅಭಿಮನ್ಯು ಮಿಥುನ್, ವಿನಯ್ ಕುಮಾರ್, ಅಜಿಂಕ್ಯ ರಹಾನೆ, ಮುನಾಫ್ ಪಟೇಲ್, ಮುರಳಿ ವಿಜಯ್, ಶಿಖರ್ ಧವನ್, ವೃದ್ಧಿಮನ್ ಸಹಾ, ಪಾರ್ಥಿವ್ ಪಟೇಲ್, ಎಸ್. ಬದರೀನಾಥ್, ಮನೋಜ್ ತಿವಾರಿ, ಪಿಯೂಷ್ ಚಾವ್ಲಾ, ದಿನೇಶ್ ಕಾರ್ತಿಕ್, ಜೈದೇವ್ ಉನದ್ಕತ್, ಉಮೇಶ್ ಯಾದವ್, ರಾಹುಲ್ ಶರ್ಮಾ, ವರುಣ್ ಆ್ಯರನ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.