ರಾಯಚೂರು: ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯು ಗುರುವಾರ ಇಲ್ಲಿನ ತಹಸೀಲ್ದಾರ ಕಚೇರಿ ಹತ್ತಿರ `ಯುವ ಕಾಂಗ್ರೆಸ್ ಸಹಾಯ ಹಸ್ತ ಸಪ್ತಾಹ- ಜನರ ಸೇವೆಯೇ ದೇವರ ಸೇವೆ' ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಟೆಂಟ್, ಟೇಬಲ್ ಹಾಕಿಕೊಂಡು ಕುಳಿತ ಯುವ ಕಾಂಗ್ರೆಸ್ ಪ್ರತಿನಿಧಿ, ಪದಾಧಿಕಾರಿಗಳು ತಹಸೀಲದಾರ ಕಚೇರಿಗೆ ಧಾವಿಸುತ್ತಿದ್ದ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಕೇಳಿದರು. ವೃದ್ಧಾಪ್ಯವೇತನ, ಅಂಗವಿಕಲ ವೇತನ, ಮ್ಯೂಟೇಶನ್, ಪಹಣಿ ದೊರಕದೇ ಇರುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಜನ ವಿವರಿಸಿದರು.

ಈ ಸಮಸ್ಯೆಗಳೊಂದಿಗೆ ತಹಸೀಲದಾರ ಕಚೇರಿ ಅಧಿಕಾರಿಗಳು, ಪ್ರಭಾರಿ ತಹಸೀಲದಾರ ಜತೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಯುವ ಕಾಂಗ್ರೆಸ್ ಮುಖಂಡರು ಮನವಿ ಮಾಡಿದರು. ಸುಮಾರು 40 ಜನರು ಸಮಸ್ಯೆಗೆ ಪರಿಹಾರ ಸಿಕ್ಕಿತು ಎಂದು ಯುವ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷ ಸಯ್ಯದ್ ಉಮರ್ ಫಾರೂಕ್ ಹೇಳಿದರು.

ಯುವ ಕಾಂಗ್ರೆಸ್ ರಾಯಚೂರು ಲೋಕಸಭಾ ಕ್ಷೇತ್ರ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ರಾಯಚೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಚ್ ರಾಜೇಶ ಮಡಿವಾಳ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಂಜನೇಯ ಯಾದವ, ರಾಯಚೂರು ಗ್ರಾಮಾಂತರ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಶರಣ, ಶಾಂತಪ್ಪ, ಅಮರೇಶ್ವರರೆಡ್ಡಿ, ಎಂ.ಡಿ ಇಮ್ರಾನ್, ಅಹಮ್ಮದ್ ಬಢಗ್, ಜಿಕ್ರುಖಾನ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.