ಸಂಜೀವ್ ರೈ
ಸಂಜೀವ್ ರೈ ಎಂದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಅಮೆರಿಕದ ಚಂದ್ರಯಾನ ಯೋಜನೆಯಲ್ಲಿ ಕೆಲಸ ಮಾಡಿದ ಹೆಗ್ಗಳಿಕೆ ರೈ ಅವರದ್ದು. ಹಾಗಾಗಿಯೇ ಸಂಜೀವ್ ರೈ ಅವರನ್ನು ವಿಶ್ವದ ಯುವ ತಂತ್ರಜ್ಞಾನಿ ಎಂದೇ ಗುರುತಿಸಲಾಗುತ್ತಿದೆ.

35ರ ಹರೆಯದ ರೈ ಅಮೆರಿಕದ ನಾಸಾದಲ್ಲಿ ವೃತ್ತಿ ಜೀವನ ಆರಂಭಿಸಿದರು. ಹಗಲು ರಾತ್ರಿ ಎನ್ನದೇ ಅಮೆರಿಕದ ಚಂದ್ರಯಾನ ಯೋಜನೆಯಲ್ಲಿ ದುಡಿದರು. ನಿರೀಕ್ಷೆಯಂತೆ ಈ ಯೋಜನೆ ಯಶಸ್ವಿಯಾದ್ದರಿಂದ ರೈಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಸಹ ಬಂತು. ಅದ್ಯಾಕೋ ರೈಗೆ ನಾಸಾದಲ್ಲಿ ಮುಂದುವರೆಯುವ ಮನಸ್ಸಾಗಲಿಲ್ಲ. ತಮ್ಮ 28ನೇ ವಯಸ್ಸಿಗೆ ನಾಸಾದಿಂದ ಸ್ವಯಂ ನಿವೃತ್ತಿ ಪಡೆದರು.

ನಂತರ ಭಾರತಕ್ಕೆ ಮರಳಿ ಎಆರ್ಇ ಟೆಕ್ನಾಲಜೀಸ್ ಎಂಬ ಸಂಸ್ಥೆಯನ್ನು ತೆರೆದರು. ಇಂದು ಈ ಸಂಸ್ಥೆ ಭಾರತದ ರಕ್ಷಣಾ ಪಡೆಗೆ ವಿವಿಧ ರೀತಿಯ ತಂತ್ರಜ್ಞಾನ ಸೇವೆಯನ್ನು ಒದಗಿಸುತ್ತಿದೆ. ಅಮೆರಿಕ ಸೇರಿದಂತೆ ಯುರೋಪ್ ದೇಶಗಳಿಗೆ ರಾಕೆಟ್ ಹಾಗೂ ಕೃತಕ ಉಪಗ್ರಹಗಳ ಬಿಡಿ ಭಾಗಗಳನ್ನು ರಫ್ತು ಮಾಡುತ್ತಿದೆ.

ಡಿಆರ್ಡಿಒ ಮತ್ತು ಇಸ್ರೊ ಸಂಸ್ಥೆಗಳು ಕೂಡ ವಿವಿಧ ಯೋಜನೆಗಳಿಗೆ ರೈ ಅವರ ತಂತ್ರಜ್ಞಾನವನ್ನು ಬಳಸಿಕೊಂಡಿವೆ. ಉಪಗ್ರಹ ತಯಾರಿಕಾ ಯೋಜನೆಗಳು ಮತ್ತು ಮಹತ್ವಕಾಂಕ್ಷೆಯ ಚಂದ್ರಯಾನ-14ರ ಯೋಜನೆಯಲ್ಲೂ ರೈ ಇಸ್ರೊಗೆ ನೆರವು ನೀಡುತ್ತಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಯುವ ತಂತ್ರಜ್ಞರ ಕೌಶಲ್ಯ ಮಾಪನ ಮಾಡುವ ಸಂಸ್ಥೆ ಎಂದೇ ಖ್ಯಾತಿಯಾಗಿರುವ ನ್ಯಾಸ್ಕೊಂ ಸಂಸ್ಥೆ ಏಷ್ಯಾದ ಪ್ರಮುಖ ಹತ್ತು ಯುವ ತಂತ್ರಜ್ಞರಲ್ಲಿ ಸಂಜೀವ್ ರೈ ಕೂಡ ಒಬ್ಬರು ಎಂದು ಪ್ರಕಟಿಸಿದೆ.

ಸಂಜೀವ್ ಅವರ ತಂತ್ರಜ್ಞಾನ ಸೇವೆಯನ್ನು ಗುರುತಿಸಿ ವಿವಿಧ ಅಂತರರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.

ಆದರ್ಶ ಕುಮಾರ್

`ಹಳ್ಳಿಗಳ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ' ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಈ ಮಾತು ರಾಜಸ್ತಾನ ಮೂಲದ ಯುವಕ ಆದರ್ಶ ಕುಮಾರ್ಗೂ ಆದರ್ಶವಾಗಿದೆ.

ಅಮೆರಿಕದ ಜಾರ್ಜ್ಟೌನ್ ವಿಶ್ವವಿದ್ಯಾಲಯದಲ್ಲಿ `ಅಭಿವೃದ್ಧಿ ಅರ್ಥಶಾಸ್ತ್ರ' ವಿಷಯದಲ್ಲಿ ಆದರ್ಶ ಕುಮಾರ್ ಪದವಿ ಪಡೆದಿದ್ದಾರೆ. ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮತ್ತು ಬೋಧನೆ ಮಾಡುವುದಕ್ಕಿಂತ ಭಾರತದ ಹಳ್ಳಿಗಳಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದು ಭಾರತಕ್ಕೆ ಮರಳಿದರು.

ಲೈವ್ಲೀ ಹುಡ್ ಇಕ್ವಿಟಿ ಕನೆಕ್ಟ್ (ಎಲ್ಇಸಿ) ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ ಆದರ್ಶ ಕುಮಾರ್ ಆ ಮೂಲಕ ಗ್ರಾಮೀಣ ಜನರ ಆದಾಯ ಮಟ್ಟವನ್ನು ಹೆಚ್ಚಿಸಲು ಮುಂದಾದರು.

ತಮ್ಮ ಈ ಪ್ರಯೋಗಕ್ಕೆ ರಾಜಸ್ತಾನದ 13 ಗ್ರಾಮಗಳನ್ನು ಆಯ್ದುಕೊಂಡರು. ಅಲ್ಲಿನ ಸಂಪನ್ಮೂಲ, ಜನಜೀವನ, ಆದಾಯ ಮೂಲಗಳು, ಕೌಶಲ್ಯದ ಬಗ್ಗೆ ಅಧ್ಯಯನ ಮಾಡಿದರು. ನಂತರ ಈ ಹಳ್ಳಿಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಗಳನ್ನು ರೂಪಿಸಿದರು.

ಸರ್ಕಾರದ ನೆರವಿಲ್ಲದೆ ಜನರ ಬಳಿ ಇದ್ದ ವಿವಿಧ ಕೌಶಲಗಳ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟರು. ಇಂದು ಆ 13 ಹಳ್ಳಿಗಳು ಸಮಗ್ರವಾಗಿ ಅಭಿವೃದ್ಧಿ ಹೊಂದಿವೆ. ಅಲ್ಲಿನ ಜನರ ಆದಾಯ ಉತ್ತಮಗೊಳ್ಳುವ ಮೂಲಕ ಅವರ ಜೀವನ ಮಟ್ಟವು ಸುಧಾರಣೆಗೊಂಡಿದೆ.

ತಮ್ಮ ಬಳಿ ಇರುವ ಕೌಶಲವನ್ನು ಸದ್ಬಳಕೆ ಮಾಡಿಕೊಂಡು ಆದಾಯವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬ ಕುರಿತು ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಇಸಿ ಸಂಸ್ಥೆಯ ಮುಖಾಂತರ ವಿಚಾರ ಸಂಕಿರಣ, ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಜನರ ಕೌಶಲ್ಯ ವೃದ್ಧಿಸುವಲ್ಲಿ ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಅವರು ದೇಶದೆಲ್ಲೆಡೆ ಸಂಚರಿಸುತ್ತಿದ್ದಾರೆ.

ಎಲ್ಇಸಿ ಸಂಸ್ಥೆಯ ಕೌಶಲ್ಯ ಸಂಬಂಧಿ ಸಿದ್ಧಾಂತಗಳನ್ನು ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳು ಪ್ರಯೋಗಕ್ಕೆ ಒಳಪಡಿಸಿರುವುದು ಆದರ್ಶ ಕುಮಾರ್ ಅವರ ಅಗ್ಗಳಿಕೆ. ಇವರ ಸೇವೆಗೆ ಹಲವಾರು ಅಂತರರಾಷ್ಟ್ರೀಯ ಪುರಸ್ಕಾರಗಳು ಸಂದಿವೆ.

ಅಶ್ವಿನ್ ನಾಯಕ್

ಗ್ರಾಮೀಣ ಪ್ರದೇಶಗಳ ಜನರ ಆರೋಗ್ಯ ಸುಧಾರಣೆಯಾಗಬೇಕು ಮತ್ತು ಎರಡನೇ ದರ್ಜೆಯ ಪಟ್ಟಣ ಪ್ರದೇಶಗಳಲ್ಲೂ ಜನರಿಗೆ ಉತ್ತಮ ಆರೋಗ್ಯ ಸೇವೆ ಲಭ್ಯವಾಗಬೇಕು ಎನ್ನುವುದು ಯುವ ವೈದ್ಯ ಅಶ್ವಿನ್ ನಾಯಕ್ ಕನಸು.

ಅವರ ಕನಸಿನ ಫಲವೇ ಇಂದು ಕರ್ನಾಟಕದಲ್ಲಿ ಎಂಟು ಮತ್ತು ನೆರೆಯ ಆಂಧ್ರ ಪ್ರದೇಶದಲ್ಲಿ ಮೂರು ವಾತ್ಸಲ್ಯ ಹೆಲ್ತ್ ಕೇರ್ ಆಸ್ಪತ್ರೆಗಳು ತಲೆ ಎತ್ತಿವೆ. ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಹಾಗೂ ಅಮೆರಿಕದ ಹ್ಯೂಸ್ಟನ್ ವಿಶ್ವವಿದ್ಯಾಲಯದಲ್ಲಿ ಅಶ್ವಿನ್ ಎಂಡಿ ಪದವಿ ಪಡೆದಿದ್ದಾರೆ.

ವಿದೇಶ ಸೇರಿದಂತೆ ದೇಶದ ಹಲವು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಅಶ್ವಿನ್ಗೆ ವಿಫುಲ ಅವಕಾಶಗಳಿದ್ದರೂ ಅವುಗಳನ್ನೆಲ್ಲಾ ತಿರಸ್ಕರಿಸಿ ಗ್ರಾಮೀಣ ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುವ ಸಲುವಾಗಿ ವಾತ್ಸಲ್ಯ ಹೆಲ್ತ್ ಕೇರ್ ಆಸ್ಪತ್ರೆಗಳನ್ನು ತೆರೆದರು. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ಸಣ್ಣ ಸಣ್ಣ ಪಟ್ಟಣಗಳಲ್ಲಿಯೇ ಉತ್ತಮ ವೈದ್ಯಕೀಯ ಸೇವೆ ದೊರಕಬೇಕು ಎಂಬುದೇ ವಾತ್ಸಲ್ಯ ಹೆಲ್ತ್ ಕೇರ್ನ ಮುಖ್ಯ ಉದ್ದೇಶ.

ಮುಂದಿನ ನಾಲ್ಕು ವರ್ಷಗಳಲ್ಲಿ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ 50 ವಾತ್ಸಲ್ಯ ಹೆಲ್ತ್ಕೇರ್ಗಳನ್ನು ಸ್ಥಾಪಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇವರ ಯೋಜನೆಗೆ ಸರ್ಕಾರ ಕೂಡ ಸಹಕಾರ ನೀಡುತ್ತಿರುವುದು ವಿಶೇಷ. ಇಲ್ಲಿ ಹೃದಯ ಸಂಬಂಧಿ ರೋಗಗಳು, ಕಣ್ಣು, ಕ್ಯಾನ್ಸರ್ ಸೇರಿದಂತೆ ಎಲ್ಲಾ ತರಹದ ಖಾಯಿಲೆಗಳಿಗೆ ಚಿಕಿತ್ಸೆ ಲಭ್ಯವಾಗಲಿದೆ ಎನ್ನುತ್ತಾರೆ ಅಶ್ವಿನ್.

ಗ್ರಾಮೀಣ ಪ್ರದೇಶದ ಜನರು ಹೆಚ್ಚಿನ ಚಿಕಿತ್ಸೆಗಾಗಿ ಮಹಾನಗರಗಳ ಕಡೆ ಮುಖ ಮಾಡುವುದು ನಿಲ್ಲಬೇಕು. ಬಡ ಜನರಿಗೆ ಕಡಿಮೆ ದರದಲ್ಲಿ ಸ್ಥಳೀಯ ಮಟ್ಟದಲ್ಲೇ ಚಿಕಿತ್ಸಾ ಸೌಲಭ್ಯಗಳು ಲಭ್ಯವಾಗಬೇಕು ಎಂಬ ಉದ್ದೇಶದೊಂದಿಗೆ ವಾತ್ಸಲ್ಯ ಹೆಲ್ತ್ ಕೇರ್ಗಳನ್ನು ತೆರೆಯಲಾಗುತ್ತಿದೆ ಎಂದು ಅಶ್ವಿನ್ ಹೇಳುತ್ತಾರೆ.

ಬಿಂಜಾಯ್ ಜಾಬ್

ಸಮೂಹ ಮಾಧ್ಯಮಗಳ ಮೂಲಕ ಉತ್ತಮ ಸಮಾಜ ನಿರ್ಮಾಣ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಜನರಿಗೆ ತಲುಪಿಸುವುದು ಹೇಗೆ ಎಂದು ತೋರಿಸಿಕೊಟ್ಟವರು ಬಿಂಜಾಯ್ ಜಾಬ್.

35ರ ಹರೆಯದ ಜಾಬ್ ಪ್ರಸ್ತುತ ಪ್ರಧಾನ ಮಂತ್ರಿಗಳ ಮಾಧ್ಯಮ ಮತ್ತು ಸಂವಹನ ಸಂಸ್ಥೆಯ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ದೆಹಲಿ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮ ಪದವಿ ಹಾಗೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಜಾಗತೀಕರಣ ಮತ್ತು ನಾಯಕತ್ವ ಎಂಬ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಗ್ರಾಮೀಣ ಜನರಲ್ಲಿ ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಸಮೂಹ ಮಾಧ್ಯಮಗಳು ಯಾವ ರೀತಿ ಕೆಲಸ ನಿರ್ವಹಿಸುತ್ತಿವೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ಜಾಬ್ ನೀಡಿದ್ದಾರೆ. ಪ್ರಸ್ತುತ ಜಾಬ್ ನೀಡಿರುವ ಸಲಹೆ ಸೂಚನೆಗಳ ಮೇರೆಗೆ ಕೇಂದ್ರದ ಹಲವು ಯೋಜನೆಗಳ ಪ್ರಚಾರ ನಡೆಯುತ್ತಿದೆ ಎಂಬುದು ವಿಶೇಷ.

ಇದಕ್ಕಾಗಿ ಅವರು `ಟುಮಾರೋ ಲೀಡರ್ಸ್' ಎಂಬ ವೆಬ್ ಪೋರ್ಟಲ್ ತೆರೆದಿದ್ದಾರೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಯೋಜನೆಗಳ ಮಾಹಿತಿ ಬಿತ್ತರಿಸಿದ್ದಾರೆ. ಸಮೂಹ ಮಾಧ್ಯಮಗಳು ವ್ಯಾವಹಾರಿಕವಾಗಿರದೆ ಸಮಾಜ ಮುಖಿಯಾಗಿರಬೇಕು ಮತ್ತು ಸರ್ಕಾರಿ ಯೋಜನೆಗಳನ್ನು ಉಚಿತವಾಗಿ ಬಿತ್ತರಿಸಬೇಕು ಎನ್ನುತ್ತಾರೆ ಜಾಬ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.