ಯೂಕೊ ಬ್ಯಾಂಕ್: ಎಸ್‌ಎಂಇ ಕೇಂದ್ರ ಉದ್ಘಾಟನೆ

7

ಯೂಕೊ ಬ್ಯಾಂಕ್: ಎಸ್‌ಎಂಇ ಕೇಂದ್ರ ಉದ್ಘಾಟನೆ

Published:
Updated:
ಯೂಕೊ ಬ್ಯಾಂಕ್: ಎಸ್‌ಎಂಇ ಕೇಂದ್ರ ಉದ್ಘಾಟನೆ

ಬೆಂಗಳೂರು: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಸ್‌ಎಂಇ) ಅಗತ್ಯವಾದ ಹಣಕಾಸು ಸೌಲಭ್ಯ ಕಲ್ಪಿಸಲು ಯೂಕೊ ಬ್ಯಾಂಕ್ ಪ್ರತ್ಯೇಕವಾದ `ಎಸ್‌ಎಂಇ ಘಟಕ~ಗಳನ್ನು ಆರಂಭಿಸಿದೆ.ಸಣ್ಣ ಕೈಗಾರಿಕಾ ಘಟಕಗಳಿಗೆ ್ಙ 25 ಲಕ್ಷದಿಂದ ್ಙ 25 ಕೋಟಿಗಳವರೆಗೆ  ಸಾಲ ಸೌಲಭ್ಯ ಒದಗಿಸಲು ಈ `ಎಸ್‌ಎಂಇ ಘಟಕ~ಗಳು ನೆರವಾಗಲಿವೆ ಎಂದು ಬ್ಯಾಂಕ್‌ನ ಅಧ್ಯಕ್ಷ ಅರುಣ್ ಕೌಲ್ ನುಡಿದರು.ಕೃಷಿ ನಂತರ ಅತ್ಯಧಿಕ ಸಂಖ್ಯೆಯಲ್ಲಿ ಉದ್ಯೋಗ ಅವಕಾಶ ಒದಗಿಸುವ `ಎಸ್‌ಎಂಇ~ ವಲಯಕ್ಕೆ ಅಗತ್ಯವಾದ ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್ ಹೆಚ್ಚು ಮಹತ್ವ ನೀಡುತ್ತಿದೆ. ದೇಶದಾದ್ಯಂತ ಸದ್ಯಕ್ಕೆ ಇಂತಹ 5 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಕ್ರಮೇಣ ಅವುಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದರು.ಶನಿವಾರ ಇಲ್ಲಿ ನಡೆದ ಸಮಾರಂಭದಲ್ಲಿ ಈ ಸೌಲಭ್ಯಕ್ಕೆ ಚಾಲನೆ ನೀಡಲಾಯಿತು. ರಾಜ್ಯ ಸಣ್ಣ ಕೈಗಾರಿಕಾ ಸಚಿವ ವಿಜಯ್ ಶಂಕರ್ ಅವರು `ಎಸ್‌ಎಂಇ~ ಘಟಕಗಳನ್ನು ಉದ್ಘಾಟಿಸಿದರು. ಹಲವು ಸಣ್ಣ ಕೈಗಾರಿಕಾ ಉದ್ಯಮಿಗಳಿಗೆ ಸಚಿವರು ಸಾಲ ವಿತರಣೆಯ ಪತ್ರಗಳನ್ನು  ವಿತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry