ಹಾವೇರಿ: `ಧೀರತನ, ಧೈರ್ಯ, ಸಾಹಸ ದೊಂದಿಗೆ ದೇಶದ ರಕ್ಷಣೆಗಾಗಿ ಪ್ರಾಣ ತೆತ್ತ ಮಹಾಯೋಧರ ಸ್ಮರಿಸುವುದರ ಜತೆಗೆ ಅವರ ಆದರ್ಶಗಳನ್ನು ಮೈಗೂ ಡಿಸಿಕೊಳ್ಳಲು ಯುವ ಸಮುದಾಯ ಮುಂದೆ ಬರಬೇಕು' ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ನಿವೃತ್ತನಾದ ಜಿಲ್ಲೆಯ ಏಕೈಕ ಯೋಧ ಮಹಮ್ಮದ್ ಜಹಾಂಗೀರ್ ಖವಾಸ್ ಹೇಳಿದರು.

ಶುಕ್ರವಾರ ನಗರದ ಹೊಸಮಠದ ಪಿಯುಸಿ ಕಾಲೇಜಿನಲ್ಲಿ ಸಹಯೋಗದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆಯೋಜಿಸಿದ 14ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾವು 19 ವರ್ಷಗಳ ಕಾಲ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನ ನಿವೃತ್ತಿಗೆ ಕೇವಲ ಒಂದು ವರ್ಷ ಇದ್ದಾಗ ಪಾಕಿಸ್ತಾನ ಜತೆ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ದಲ್ಲಿ ಭಾಗವಹಿಸುವ ಅವಕಾಶ ದೊರಕಿತು. ಸುಮಾರು ಮೂರು ತಿಂಗಳ ಕಾಲ ನಡೆದ ಯುದ್ಧದಲ್ಲಿ ಶತ್ರು ಸೈನ್ಯ ವನ್ನು ಹಿಮ್ಮೆಟ್ಟಿಸಿ ವಿಜಯ ಸಾಧಿಸುವಲ್ಲಿ ನಾವು ಯಶಸ್ವಿಯಾದೆವು. ಅದು ಇಂದಿಗೂ ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಜಮ್ಮು ಕಾಶ್ಮೀರದ ಶ್ರೀನಗರದಿಂದ ಪ್ರಾರಂಭವಾದ ಕಾರ್ಗಿಲ್ ಯುದ್ಧವು ಕಾರ್ಗಿಲ್ ಪ್ರದೇಶವನ್ನು ಉಳಿಸುವುದ ರಲ್ಲಿ ಮಹತ್ವದ ಪಾತ್ರ ವಹಿಸಿದ್ದೇವೆ. ಈ ಯುದ್ಧದಲ್ಲಿ ನಮ್ಮ ಅನೇಕ ಸ್ನೇಹಿತರು ಪ್ರಾಣ ಕೊಟ್ಟು ದೇಶವನ್ನು ಉಳಿ ಸಿದ್ದಾರೆ. ಅಂತಹ ದೇಶ ಭಕ್ತರ ಜೀವನ, ಸಾಧನೆ, ಸಾಹಸ, ಧೈರ್ಯ ಪ್ರತಿಯೊಬ್ಬ ರಿಗೂ ಮಾರ್ಗದರ್ಶನ ವಾಗಬೇಕು ಎಂದು ಹೇಳಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ ಮಾತನಾಡಿ, ಅಖಿಲ ಭಾರತೀಯ ವಿಧ್ಯಾರ್ಥಿ ಪರಿ ಷತ್ ಪ್ರತಿ ವರ್ಷ ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವ ಆಚರಿ ಸುತ್ತಾ ಬಂದಿದೆ. ಪ್ರಾಣ ಕೊಟ್ಟು ಕಾರ್ಗಿಲ್ ಉಳಿಸಿರುವುದರಲ್ಲಿ ಮಹತ್ವದ ಪಾತ್ರ ವಹಿಸಿರುವ ವೀರ ಯೋಧರ ಆತ್ಮಕ್ಕೆ ಶಾಂತಿ ಕೋರುವು ದರ ಜತೆಗೆ ಅವರ ಮಹತ್ವನ್ನು ಇಂದಿನ ಯುವಕರಿಗೆ ತಿಳಿಸಿ ಕೊಡುವುದೇ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಚಾರ್ಯ ಎಂ. ಆರ್. ಚವ್ಹಾಣ ಮಾತನಾಡಿ, ದೇಶ ಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿರುವ ವೀರ ಯೋಧರ ಜೀವನ ಸಾಧನೆಗಳು ಯುವಕರಲ್ಲಿ ದೇಶ ಭಕ್ತಿ ಮೂಡಿ ಸುವಲ್ಲಿ ಸಹಕಾರಿಯಾಗಲಿವೆ. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಹಾವೇರಿ ಯೋಧ ಖವಾಸ್ ಅವರು ಕಾರ್ಗಿಲ್ ಯುದ್ಧದ ಘಟನಾವಳಿ ಗಳನ್ನು ತಿಳಿಸುವ ಮೂಲಕ ಯುವ ಜನರಲ್ಲಿ ಸ್ಪೂರ್ತಿ ತುಂಬಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್. ಹಾನಗಲ್, ಗಣೇಶ ಹೆಂಬಲಿ, ಯಶ ವಂತ್ ಗಿತ್ತೆ ಹಾಗೂ ಕಾಲೇಜಿನ ನೂರಾರು ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು. ಪುಟ್ಟರಾಜ ಮುಗಳಿ ಸ್ವಾಗತಿಸಿದರು. ನಾಗರಾಜ ಹುರಳಿಕುಪ್ಪ ನಿರೂಪಿಸಿ ದರು. ದೀಪಕ ಹೆಬ್ಬಾರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.