ಭಾನುವಾರ, ಜೂನ್ 13, 2021
24 °C

ರಂಗೇರಿದ ಹೋಳಿ ಶಾಂತಿಯುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗೇರಿದ ಹೋಳಿ ಶಾಂತಿಯುತ

ರಾಯಚೂರು: ಇಡೀ ನಗರವೆಲ್ಲ ಬಣ್ಣಮಯ ಆಗುವ ಮೂಲಕ ಗುರುವಾರ ನಗರದಲ್ಲಿ ಹೋಳಿ ಹಬ್ಬಕ್ಕೆ ಹೆಚ್ಚು ರಂಗೇರಿತ್ತು. ಪ್ರೀತಿ, ವಿಶ್ವಾಸದ ಸಂಕೇತವಾದ ಹೋಳಿ ಹಬ್ಬವನ್ನು ಪರಸ್ಪರ ಬಣ್ಣ ಹಚ್ಚಿ ಖುಷಿ ಪಟ್ಟರು. ಹೋಳಿ ಹಬ್ಬ ಸಂಪೂರ್ಣ ಶಾಂತಯುತವಾಗಿ ನಡೆಯಲು ಕಾರಣರಾದವರು.ಚಿಕ್ಕಮಕ್ಕಳಿಂದ ಹಿಡಿದು ಹಿರಿಯರು, ಮಹಿಳೆಯರು, ಯುವಕ-ಯುವತಿಯರು ಸೇರಿದಂತೆ ಎಲ್ಲ ವಯೋಮಾನದ ಜನತೆ ಪರಸ್ಪರ ಹಲವು ಬಗೆಯ ಬಣ್ಣ ಹಚ್ಚಿ  ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ವಿಶೇಷವಾಗಿ ಚಿಕ್ಕಮಕ್ಕಳು ಬೆಳಗಿನ ಜಾವದಿಂದಲೇ ಬಣ್ಣ ಎರಚಲು ಆರಂಭಿಸಿ ಮಧ್ಯಾಹ್ನದವರೆಗೂ ಮುಂದುವರಿಸಿದರು.ಎಸ್‌ಎಸ್‌ಎಲ್ಸಿ, ಪಿಯುಸಿ ಪರೀಕ್ಷಾ ಸಮಯ ಆಗಿರುವುದರಿಂದ ಈ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹೋಳಿ ಹಬ್ಬದ ಆಚರಣೆಯಲ್ಲಿ ಅಷ್ಟಾಗಿ ಕಂಡು ಬರಲಿಲ್ಲ. ಯುವಕರ ಗುಂಪು ದ್ವಿಚಕ್ರವಾಹದ ಮೇಲೆ ಗುಂಪು ಗುಂಪಾಗಿ ತೆರಳಿ ಸ್ನೇಹಿತರಿಗೆ ಬಂಧು ಬಳಗದವರಿಗೆ, ಆಪ್ತರಿಗೆ ಬಣ್ಣ ಹಚ್ಚಿ ಹೋಳಿ ಹಬ್ಬದ ಖುಷಿ ಹಂಚಿಕೊಂಡರು.ಪುಡಿ ಬಣ್ಣ(ಗುಲಾಲ್) ಹಚ್ಚುವುದಕ್ಕಿಂತ ನೀರಿನಲ್ಲಿ ಬಣ್ಣವನ್ನು ಹಾಕಿ ಸುರಿಯುವುದು ಎಲ್ಲೆಡೆ ಕಂಡು ಬರುತ್ತಿತ್ತು. ಅನೇಕ ಕಡೆ ಬಣ್ಣಕ್ಕಿಂತ ನೀರೇ ಹೆಚ್ಚಾಗಿದ್ದರಿಂದ ನೀರು ಸುರಿವಿಕೊಂಡ ಅನುಭವ ಹೋಳಿ ಆಡುವವರಿಗೆ ಆಗಿದ್ದು ಉಂಟು.ಚುರು ಚುರು ಬಿಸಿಲು ಇದ್ದುದರಿಂದ ಥಂಡಾ ಥಂಡಾ ಕೂಲ್ ಕೂಲ್ ಎಂದು ಹಾಡಿಕೊಂಡು ಕೇ ಕೇ ಹಾಕುತ್ತ ಹೋಳಿ ಸಂಭ್ರಮದಲ್ಲಿ ಮುಳುಗಿದ್ದು ಕಂಡು ಬಂದಿತು.ಪ್ರಮುಖ ರಸ್ತೆಗಳ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಮಾರುಕಟ್ಟೆ ಪ್ರದೇಶದ ವ್ಯಾಪಾರ ವಹಿವಾಟು  ಸ್ಥಗಿತಗೊಂಡಿದ್ದರಿಂದ ಅಘೋಷಿತ ಬಂದ್‌ನಂತೆ ಗೋಚರಿಸಿತ್ತು. ಬುಧವಾರ ಸಂಜೆಯಿಂದಲೇ ನಗರದ ಕೆಲ ಬಡಾವಣೆಯಲ್ಲಿ ಹೋಳಿ ಹಬ್ಬ ಆರಂಭಗೊಂಡಿತ್ತು. ಗುರುವಾರ ಸಂಜೆಯವರೆಗೂ ಅದು ಮುಂದುವರಿಯಿತು.ಪ್ರಮುಖ ರಸ್ತೆ, ಮಾರುಕಟ್ಟೆ ಪ್ರದೇಶ, ಪ್ರಮುಖ ವೃತ್ತ, ಹೋಳಿ ಆಚರಣೆಗೆ ಹೆಚ್ಚು ಜನ ಸೇರುವ ಪ್ರದೇಶದಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಬಿಗಿ ಬಂದೋಬಸ್ತ್ ಕೈಗೊಂಡಿತ್ತು.ಹೋಳಿ ಹಬ್ಬದ ವಿಶೇಷ ಆಕರ್ಷಣೆ `ಮಡಕೆ~ ಒಡೆಯುವ ಸ್ಪರ್ಧೆ. ಪ್ರತಿ ವರ್ಷದಂತೆ ಈ ವರ್ಷವೂ ನಗರದ ವಿವಿಧ ಬಡಾವಣೆ, ಪ್ರಮುಖ ವೃತ್ತದಲ್ಲಿ ಯುವಕರ ವಿವಿಧ ಗುಂಪುಗಳು, ಸ್ನೇಹಿತರ ಬಳಗ, ಸಂಘ ಸಂಸ್ಥೆಗಳು ಭಾರಿ ಎತ್ತರ ಮಟ್ಟದಲ್ಲಿ `ಮಡಕೆ~ ಕಟ್ಟಿ ಅದನ್ನು ಒಡೆಯುವ ಪೈಪೋಟಿ, ಸ್ಪರ್ಧೆಯನ್ನು ಆಯೋಜಿಸಿದ್ದವು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.