ಗುರುವಾರ , ಜನವರಿ 23, 2020
20 °C

ರಜನಿಮಂಡಲದಲ್ಲಿ ಕತ್ರೀನಾ (ಬೊಂಬಾಟ್ ಬಾಲಿವುಡ್)

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಸೂಪರ್ ಸ್ಟಾರ್ ರಜನಿಕಾಂತ್‌ಗೆ ನಾಯಕಿಯಾಗಿ ಕತ್ರೀನಾ ಕೈಫ್ ಆಯ್ಕೆಯಾಗಿದ್ದಾಳೆ. ರಜನಿ ಪುತ್ರಿ ಸೌಂದರ್ಯ ನಿರ್ದೇಶಿಸುತ್ತಿರುವ `ಕೊಚಾಡಿಯನ್~ ಸಿನಿಮಾದಲ್ಲಿ ರಜನಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವನ ಆರಾಧಕನಾಗಿ ಉದ್ದ ಕೂದಲಿನ ಮಹಾರಾಜನಾಗಿ ಚಿತ್ರದಲ್ಲಿ ಮೆರೆಯಲಿರುವ ಅವರಿಗೆ ಕತ್ರೀನಾ ಜೋಡಿ.

 

ಈಗಾಗಲೇ ಎ.ಆರ್.ರೆಹಮಾನ್ ಸಂಗೀತದಲ್ಲಿ ಹಾಡುಗಳು ತಯಾರಾಗುತ್ತಿವೆ. ಚಿತ್ರವನ್ನು ಸಂಪೂರ್ಣವಾಗಿ ಥ್ರೀಡಿ ವರ್ಷನ್‌ನಲ್ಲಿ ತಯಾರಿಸುವ ಯೋಜನೆ ಸೌಂದರ್ಯ ಅವರದು.ಅದಕ್ಕಾಗಿ ಅವರು ಹಾಲಿವುಡ್‌ನ `ಅವತಾರ್~ ಸಿನಿಮಾದಲ್ಲಿ ಬಳಸಿದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಿದ್ದಾರೆ. ಅದರ ಬಗ್ಗೆ ತಿಳಿದುಕೊಳ್ಳಲು `ಅವತಾರ್~ ಚಿತ್ರದ ನಿರ್ದೇಶಕ ಜೇಮ್ಸ ಕ್ಯಾಮರೂನ್ ಅವರನ್ನು ಭೇಟಿ ಮಾಡಿ, ಸಾಕಷ್ಟು ಮಾಹಿತಿಯನ್ನೂ ಕಲೆ ಹಾಕಿದ್ದಾರೆ.ಕತ್ರೀನಾಗೆ ದಕ್ಷಿಣ ಭಾರತದ ಸಿನಿಮಾಗಳು ಹೊಸತೇನಲ್ಲ. ಈ ಮೊದಲು ತೆಲುಗಿನ `ಮ್ಲ್ಲಲೇಶ್ವರಿ~ ಮತ್ತು `ಅಲ್ಲರಿ ಪಿಡುಗು~ ಹಾಗೂ ಮಲಯಾಳಂನ `ಬಲರಾಮ್ ವರ್ಸಸ್ ತಾರಾದಾಸ್~ ಸಿನಿಮಾಗಳಲ್ಲಿ ಆಕೆ ನಟಿಸಿದ್ದಳು. ಆದರೆ ತಮಿಳು ಚಿತ್ರದಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿದ್ದಾಳೆ.`ರಜನಿಕಾಂತ್ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿರುವ ಬಗ್ಗೆ ಸದ್ಯಕ್ಕೆ ಮಾತನಾಡಲು ಆಗುತ್ತಿಲ್ಲ~ ಎಂದು ಅಚ್ಚರಿ ವ್ಯಕ್ತಪಡಿಸಿರುವ ಅವಳು, ಚಿತ್ರಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಾದ ಅಗತ್ಯ ಇರುವುದನ್ನು ಹೇಳಲು ಮರೆಯಲಿಲ್ಲ.

 

ವಿಭಿನ್ನ ಪಾತ್ರದಲ್ಲಿ ಅಮೀಶಾ

ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದ ಅಮೀಶಾ ಇದೀಗ ತನ್ನದೇ ಸಂಸ್ಥೆಯಿಂದ ಹೊಸ ಸಿನಿಮಾ ಆರಂಭಿಸಿದ್ದಾಳೆ. ಅದರಲ್ಲಿ ಅವಳದು ತುಂಬಾ ವಿಭಿನ್ನ ಪಾತ್ರವಂತೆ. ಸದ್ಯಕ್ಕೆ ನೀಲ್ ನಿತಿನ್ ಮುಕೇಶ್ ಅವರೊಂದಿಗೆ `ಶಾರ್ಟ್‌ಕಟ್~ ಮತ್ತು ಸನ್ನಿ ಡಿಯೋಲ್ ಜೊತೆಗೆ `ಬಯ್ಯಾಜಿ~ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿರುವ ಅಮೀಶಾ ತನ್ನ ಸಂಸ್ಥೆಯ ಸಿನಿಮಾವನ್ನು ಸದ್ಯದಲ್ಲೇ ಆರಂಭಿಸುವುದಾಗಿ ಹೇಳಿಕೊಂಡಿದ್ದಾಳೆ.`ಚಿತ್ರದ ಹೆಸರು `ಪ್ರೇಗ್~. ಚಿತ್ರವನ್ನು ಡೇವಿಡ್ ಧವನ್ ನಿರ್ದೇಶಿಸಲಿದ್ದಾರೆ. ಅದರಲ್ಲಿ ಪ್ಯಾರಿಸ್‌ನಲ್ಲಿ ನೆಲೆಸಿರುವ ವೇಶ್ಯೆ ಪಾತ್ರದಲ್ಲಿ ನಾನು ನಟಿಸುತ್ತಿರುವೆ. ಅದಕ್ಕಾಗಿ ಪರ್ಶಿಯನ್ನರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಅಗತ್ಯ ಇದೆ~ ಎಂದಿದ್ದಾಳೆ.

ಪ್ರತಿಕ್ರಿಯಿಸಿ (+)