ಶನಿವಾರ, ಏಪ್ರಿಲ್ 17, 2021
30 °C

ರಣಜಿ ಕ್ರಿಕೆಟ್ ಋತುವಿಗೆ ನವೆಂಬರ್ 2 ರಂದು ಚಾಲನೆ: ಬಿ ಗುಂಪಿನಲ್ಲಿ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕರ್ನಾಟಕ ತಂಡ ಈ ಬಾರಿಯ ರಣಜಿ ಟ್ರೋಫಿ  ಕ್ರಿಕೆಟ್ ಟೂರ್ನಿಯಲ್ಲಿ `ಬಿ~ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ನಾಕೌಟ್ ಹಂತ ಪ್ರವೇಶಿಸಲು ಸಾಕಷ್ಟು ಪರಿಶ್ರಮ ನಡೆಸುವುದು ಅಗತ್ಯ. 2012-13ರ ರಣಜಿ ಋತುವಿಗೆ ನವೆಂಬರ್ 2 ರಂದು ಚಾಲನೆ ಲಭಿಸಲಿದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

`ಗ್ರೂಫ್ ಆಫ್ ಡೆತ್~ ಎಂದೇ ಹಣೆಪಟ್ಟಿ ಹೊಂದಿರುವ `ಬಿ~ ಗುಂಪಿನಲ್ಲಿ ಕರ್ನಾಟಕ ಅಲ್ಲದೆ, ಬಲಿಷ್ಠ ತಂಡಗಳಾದ ತಮಿಳುನಾಡು, ದೆಹಲಿ ಮತ್ತು ಉತ್ತರ ಪ್ರದೇಶ ಇವೆ. ಒಂದು ಗುಂಪಿನಿಂದ ಮೂರು ತಂಡಗಳು ನಾಕೌಟ್ ಹಂತ ಪ್ರವೇಶಿಸಲಿವೆ. ಇದರಿಂದ ಈ ನಾಲ್ಕು ತಂಡಗಳಲ್ಲಿ ಒಂದು ತಂಡ ಲೀಗ್ ಹಂತದಲ್ಲೇ ಹೊರಬೀಳಲಿದೆ.

ಬರೋಡಾ ಮತ್ತು ಈ ಹಿಂದಿನ ಋತುವಿನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಹರಿಯಾಣ ಕೂಡಾ ಇದೇ ಗುಂಪಿನಲ್ಲಿವೆ. ಹಾಲಿ ಚಾಂಪಿಯನ್ ರಾಜಸ್ತಾನ ಮತ್ತು 39 ಬಾರಿಯ ಚಾಂಪಿಯನ್ ಮುಂಬೈ ತಂಡ `ಎ~ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಸುಲಭವಾಗಿ ನಾಕೌಟ್ ಹಂತ ಪ್ರವೇಶಿಸುವ ಸಾಧ್ಯತೆಯಿದೆ.

ಈ ವರ್ಷದಿಂದ ರಣಜಿ ಟ್ರೋಫಿ ಟೂರ್ನಿಯ ಮಾದರಿಯಲ್ಲಿ ಬದಲಾವಣೆ ತರಲು ಬಿಸಿಸಿಐ ನಿರ್ಧರಿಸಿತ್ತು. ಅದರಂತೆ ತಲಾ ಒಂಬತ್ತು ತಂಡಗಳ ಮೂರು ಗುಂಪುಗಳನ್ನು ಮಾಡಲಾಗಿದೆ. ಹೊಸ ನಿಯಮದಂತೆ `ಎ~ ಮತ್ತು `ಬಿ~ ಗುಂಪಿನಿಂದ ತಲಾ ಮೂರು ತಂಡಗಳು ಹಾಗೂ `ಸಿ~ ಗುಂಪಿನಿಂದ ಎರಡು ತಂಡಗಳು ನಾಕೌಟ್ ಹಂತ ಪ್ರವೇಶಿಸಲಿವೆ.

ಗುಂಪುಗಳು: `ಎ~ ಗುಂಪು: ರಾಜಸ್ತಾನ, ಮುಂಬೈ, ಹೈದರಾಬಾದ್, ಮಧ್ಯಪ್ರದೇಶ, ಸೌರಾಷ್ಟ್ರ, ರೈಲ್ವೇಸ್, ಬಂಗಾಳ, ಪಂಜಾಬ್ ಮತ್ತು ಗುಜರಾತ್

`ಬಿ~ ಗುಂಪು: ತಮಿಳುನಾಡು, ಹರಿಯಾಣ, ಮಹಾರಾಷ್ಟ್ರ, ಕರ್ನಾಟಕ, ಉತ್ತರಪ್ರದೇಶ, ಬರೋಡಾ, ದೆಹಲಿ, ವಿದರ್ಭ ಮತ್ತು ಒಡಿಶಾ

`ಸಿ~ ಗುಂಪು: ಹಿಮಾಚಲ ಪ್ರದೇಶ, ಕೇರಳ, ಆಂಧ್ರ ಪ್ರದೇಶ, ಸರ್ವಿಸಸ್, ತ್ರಿಪುರಾ, ಗೋವಾ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ ಹಾಗೂ  ಅಸ್ಸಾಂ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.