ಶುಕ್ರವಾರ, ಏಪ್ರಿಲ್ 23, 2021
31 °C

ರಫ್ತು: ಶೇ 50ರಷ್ಟು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಫೆಬ್ರುವರಿ ತಿಂಗಳಲ್ಲಿ ದೇಶದ ರಫ್ತು ಪ್ರಮಾಣವು ಗಮನಾರ್ಹ ಎನ್ನಬಹುದಾದ ಶೇ 50ರಷ್ಟು ಹೆಚ್ಚಳಗೊಂಡಿದ್ದು, 11 ತಿಂಗಳಲ್ಲಿನ ಒಟ್ಟಾರೆ ರಫ್ತು ವಹಿವಾಟು 200 ಶತಕೋಟಿ ಡಾಲರ್‌ಗಳಷ್ಟು (ರೂ,9,00,000 ಕೋಟಿ) ಹೆಚ್ಚಳಗೊಂಡಿದೆ.ಅಮೆರಿಕ ಮತ್ತು ಇತರ ಮಾರುಕಟ್ಟೆಗಳಲ್ಲಿ ಸರಕುಗಳಿಗೆ ಹೆಚ್ಚಿದ ಬೇಡಿಕೆಯೇ ಇದಕ್ಕೆ ಮುಖ್ಯ ಕಾರಣ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಫೆಬ್ರುವರಿ ತಿಂಗಳಲ್ಲಿ ರಫ್ತು ವಹಿವಾಟಿನ ಪ್ರಮಾಣವು ಶೇ 23.5 ಶತಕೋಟಿ ಡಾಲರ್‌ಗಳಷ್ಟಾಗಿ (ರೂ,1,05,750 ಕೋಟಿ) ಶೇ 49.7ರಷ್ಟು ಹೆಚ್ಚಳ ದಾಖಲಿಸಿದೆ. ಏಪ್ರಿಲ್‌ನಿಂದ ಫೆಬ್ರುವರಿ ತಿಂಗಳ ಅವಧಿಯಲ್ಲಿನ ವಹಿವಾಟಿನ ಮೊತ್ತವು (208 ಶತಕೋಟಿ ಡಾಲರ್) ರೂ,9,36,000 ಕೋಟಿ ಗಳಷ್ಟಾಗಿದೆ.ಫೆಬ್ರುವರಿ ತಿಂಗಳಲ್ಲಿ ಆಮದು ಪ್ರಮಾಣವೂ ಶೇ 21ರಷ್ಟು ಹೆಚ್ಚಳಗೊಂಡಿದೆ. ಡಾಲರ್ ಲೆಕ್ಕದಲ್ಲಿ ಆಮದು ಪ್ರಮಾಣವು 32  ಶತಕೋಟಿ ಡಾಲರ್(ರೂ,1,44,000 ಕೋಟಿ)ಗಳಷ್ಟಾಗಿದೆ. ಇದರ ಪರಿಣಾಮವಾಗಿ ವ್ಯಾಪಾರ ಕೊರತೆಯು 8 ಶತಕೋಟಿ ಡಾಲರ್‌ಗಳಷ್ಟಾಗಿದೆ (ರೂ,36,000 ಕೋಟಿ) ಎಂದು ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.ಏಪ್ರಿಲ್- ಫೆಬ್ರುವರಿ ಅವಧಿಯಲ್ಲಿ ಆಮದು ಪ್ರಮಾಣವು ಶೇ 18ರಷ್ಟು ಹೆಚ್ಚಳಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು 305 ಶತಕೋಟಿ ಡಾಲರ್‌ಗಳಷ್ಟಿದೆ (`ರೂ,13,72,500 ಕೋಟಿ). ಈ ಅವಧಿಯಲ್ಲಿನ ವ್ಯಾಪಾರ ಅಸಮತೋಲನವು 97 ಶತಕೋಟಿ ಡಾಲರ್‌ಗಳಷ್ಟಿದೆ. (4,36,500 ಕೋಟಿ)ಕಳೆದ11 ತಿಂಗಳಲ್ಲಿ ರಫ್ತು ವಲಯದ ಸಾಧನೆ ಉತ್ತಮವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.