ಗುರುವಾರ , ಜನವರಿ 23, 2020
29 °C
ತಗ್ಗಿದ ಚಿನ್ನದ ಆಮದು; ವಿತ್ತೀಯ ಕೊರತೆ ಇಳಿಕೆ

ರಫ್ತು 5 ತಿಂಗಳ ಹಿಂದಿನ ಮಟ್ಟಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪೆಟ್ರೋಲಿಯಂ ಉತ್ಪನ್ನಗಳು,  ಔಷಧ ಮತ್ತು ಚಿನ್ನಾಭ­ರಣಗಳ ರಫ್ತು ಕ್ಷೀಣಿಸಿದ ಹಿನ್ನೆಲೆಯಲ್ಲಿ ದೇಶದ ಒಟ್ಟಾರೆ ರಫ್ತು ವಹಿವಾಟು ನವೆಂಬರ್‌ ತಿಂಗಳಲ್ಲಿ 5 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ. ಕೇವಲ ಶೇ 5.86ರಷ್ಟು ಪ್ರಗತಿ ದಾಖಲಾಗಿದೆ.ಪ್ರಸಕ್ತ ಅವಧಿಯಲ್ಲಿ ರೂ.15,252 ಕೋಟಿ ಮೊತ್ತದ ರಫ್ತು ವಹಿವಾಟು ನಡೆದಿದೆ. ಕಳೆದ ವರ್ಷದ ಇದೇ ಅವಧಿ­ಯಲ್ಲಿ ರೂ.14,384 ಕೋಟಿ ಮೊತ್ತದ ರಫ್ತು ದಾಖಲಾಗಿತ್ತು ಎಂದು ವಾಣಿಜ್ಯ ಕಾರ್ಯ­ದರ್ಶಿ ಎಸ್‌.ಆರ್‌. ರಾವ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಆಮದು ಇಳಿಕೆ

ಚಿನ್ನ ಮತ್ತು ಬೆಳ್ಳಿ ಆಮದು ಗಣನೀ­ಯವಾಗಿ ತಗ್ಗಿರುವು­ದರಿಂದ ಒಟ್ಟಾರೆ ಆಮದು ನವೆಂಬರ್‌ನಲ್ಲಿ ಶೇ 16.3ರಷ್ಟು ತಗ್ಗಿದೆ. ಒಟ್ಟು ರೂ.20,956 ಕೋಟಿ ಮೊತ್ತದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಮಾರ್ಚ್‌ 2011ರ ನಂತರ ದಾಖಲಾ­ಗಿರುವ ಕನಿಚ್ಠ ಮಟ್ಟ ಇದು. ಇದರಿಂದ ವಿತ್ತೀಯ ಕೊರತೆ ಅಂತರ ರೂ.5,704 ­ಕೋಟಿಗೆ ಇಳಿಕೆ ಕಂಡಿದೆ. ಸೆಪ್ಟೆಂಬರ್‌ ನಂತರ ದಾಖಲಾ­ಗಿರುವ ಕನಿಷ್ಠ ಮಟ್ಟ ಇದು.ತಗ್ಗಿದ ಚಿನ್ನ, ಕಚ್ಚಾತೈಲ

ಚಿನ್ನ ಮತ್ತು ಬೆಳ್ಳಿ ಆಮದು ನವೆಂಬರ್‌ನಲ್ಲಿ ಶೇ 80.49ರಷ್ಟು ತಗ್ಗಿದೆ. ರೂ.620 ಕೋಟಿ ಮೊತ್ತದ ಚಿನ್ನ ಆಮದು ಮಾಡಿಕೊಳ್ಳಲಾಗಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ರೂ.3,348 ಕೋಟಿಯಷ್ಟಿತ್ತು. ಕಚ್ಚಾ ತೈಲ ಆಮದು ಸಹ ಶೇ 1.1ರಷ್ಟು ಕುಸಿದಿದೆ.

ಪ್ರತಿಕ್ರಿಯಿಸಿ (+)