ಶಿಡ್ಲಘಟ್ಟ: ತಾಲ್ಲೂಕಿನಾದ್ಯಂತ ರಸ್ತೆಗಳ ಅಭಿವೃದ್ಧಿಗಾಗಿ 23 ಕೋಟಿ ರೂ.ಗಳು ಬಿಡುಗಡೆಯಾಗಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.ದೊಗರನಾಯಕಹಳ್ಳಿಯಿಂದ ಪಲಿಚೇರ್ಲು ನಡುವಿನ ರಸ್ತೆಯನ್ನು 50 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಗುರುವಾರ ನೆರವೇರಿಸಿ ಅವರು ಮಾತನಾಡಿದರು.

ಲೋಕೋಪಯೋಗಿ ಇಲಾಖೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಾಗೂ ಕೇಂದ್ರ ಮೀಸಲು ಅನುದಾನದಡಿ ತಾಲ್ಲೂಕಿನ ವಿವಿಧ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದ್ದು ಮಾರ್ಚ್ ಅಂತ್ಯದೊಳಗೆ ಎ್ಲ್ಲಲ ರಸ್ತೆಗಳ ಕಾಮಗಾರಿ ಆರಂಭವಾಗುವುದು ಎಂದು ವಿವರಿಸಿದರು.

ಚೊಕ್ಕನಹಳ್ಳಿ ರಸ್ತೆಯಿಂದ ಕುಂದಲ ಗುರ್ಕಿ ಮಾರ್ಗವಾಗಿ ವೈ.ಹುಣ ಸೇನಹಳ್ಳಿ, ಶೀಗೆಹಳ್ಳಿ, ಗಜ್ಜಿಗಾನಹಳ್ಳಿ ಮೂಲಕ ಕೈವಾರಕ್ಕೆ ರಸ್ತೆ ಸಂಪರ್ಕಿಸಲಾಗುತ್ತದೆ. ಇದಕ್ಕೆ ಕೇಂದ್ರ ಮೀಸಲು ನಿಧಿಯಿಂದ 4 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಪಟ್ಟಣದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಶೋಕ ರಸ್ತೆಯ ಎರಡೂ ಬದಿಗಳನ್ನು ಡಾಂಬರೀಕರಣ ಕೆಲಸ ಇದೀಗ ನಡೆಯುತ್ತಿದೆ ಎಂದು ಹೇಳಿದರು.

ಮತ್ತೆ ಪೂರ್ಣ ರಸ್ತೆಯನ್ನು ಡಾಂಬೀಕರಣಕ್ಕಾಗಿ 30 ಲಕ್ಷ ರೂಪಾಯಿ ಪ್ರಸ್ತಾವನೆ ಕಳುಹಿಸಲಾಗಿದೆ. ಹಣ ಬಿಡುಗಡೆ ಯಾದ ತಕ್ಷಣ ಕೆಲಸ ಆರಂಭಿಸ ಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎನ್.ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಸುಬ್ರ ಮಣಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ದೇವರಮಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಇದ್ಲೂಡುವೆಂಕಟಪ್ಪ, ಪುರಸಭೆ ಮಾಜಿ ಅಧ್ಯಕ್ಷ ಕೆ.ಎನ್.ಜಗನ್ನಾಥ್, ಮುಖಂಡ ರಾದ ಎಲ್.ಮಧು, ಬಳೆರಘು, ಬಾಲಕೃಷ್ಣ, ರಾಜ್ಕುಮಾರ್, ಲೋಕೋಪಯೋಗಿ ಇಲಾಖೆಯ ಅಭಿಯಂತರ ಅಶ್ವತ್ಥಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.