ಬುಧವಾರ, ಜನವರಿ 29, 2020
28 °C

ರಸ್ತೆಗೆ ಗೌಡರ ಹೆಸರಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬೆಂಗಳೂರಿನ ಜೋಡಿ ರಸ್ತೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹೆಸರಿಡಬೇಕು~ ಎಂದು ಮಾಜಿ ಶಾಸಕ ಎನ್. ರಾಜಣ್ಣ  ಪತ್ರಿಕಾ ಗೋಷ್ಠಿಯಲ್ಲಿ ಒತ್ತಾಯಿಸಿದರು.`ನಗರದಲ್ಲಿ ಜೋಡಿ ರಸ್ತೆ ನಿರ್ಮಾಣದಿಂದ ಹಲವು ಸಮಸ್ಯೆಗಳು ಬಗೆಹರಿ ದಿವೆ. ಮೊದಲಿದ್ದ ಸಂಚಾರ ಅವ್ಯವಸ್ಥೆ ಸರಿಯಾಗಿ ಜನರೆಲ್ಲ ಉಸಿರು ಬಿಡುವಂತಾಗಿದೆ. ಆಗುತ್ತಿದ್ದ ಅಪ ಘಾತಗಳು ತಪ್ಪಿದಂತಾಗಿದೆ. ಇವರು ಸಲ್ಲಿಸಿದ ಸೇವೆಯ ನೆನಪಿಗಾಗಿ ದೇವೇಗೌಡರ ಹೆಸರಿಡಬೇಕು~ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ನವಕರ್ನಾಟಕ ಯುವಶಕ್ತಿಯ ರಾಜ್ಯ ಘಟಕ ಅಧ್ಯಕ್ಷ ಕೆ.ಎನ್.ಲಿಂಗೇಗೌಡ, ಕುವೆಂಪು ನಗರ ಒಕ್ಕಲಿಗರ ಜಾಗೃತ ವೇದಿಕೆ ಅಧ್ಯಕ್ಷ ಕೆ.ಸಿ.ಗಂಗಾಧರ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)