ರಸ್ತೆ ಅಪಘಾತ: ದಂಪತಿ ಸಾವು
ವಿಜಾಪುರ: ದೇವರ ದರ್ಶನಕ್ಕೆ ಬೈಕ್ ಮೇಲೆ ಹೊರಟಿದ್ದ ದಂಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ವಿಜಾಪುರ ಹಾಗೂ ಹೊರ್ತಿ ಮಾರ್ಗ ಮಧ್ಯ ಶುಕ್ರವಾರ ಸಂಭವಿಸಿದೆ.
ವಿಜಾಪುರ ವಿಭಾಗದ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ನಿರ್ವಾಹಕ ವಿರೂಪಾಕ್ಷಿ(ಸುಭಾಷ) ಗುರುಪಾದಪ್ಪ ಕೊಳ್ಳುರಗಿ (55) ಹಾಗೂ ಅವರ ಪತ್ನಿ ಶಿಕ್ಷಕಿ ಕವಿತಾ ವಿರೂಪಾಕ್ಷಪ್ಪ ಕೊಳ್ಳುರಗಿ (47) ಮೃತಪಟ್ಟಿದ್ದಾರೆ. ಹೊರ್ತಿ ರೇವಣಸಿದ್ಧೇಶ್ವರ ದೇವರ ದರ್ಶನಕ್ಕೆ ವಿಜಾಪುರದಿಂದ ಹೊರ್ತಿಗೆ ಹೊರಟಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಹೋರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.