ಬೆಂಗಳೂರು: ‘ರಾಜ್ಯದಲ್ಲಿ ರಸ್ತೆಗಳ ಸಮಗ್ರ ಅಭಿವೃದ್ಧಿಗಾಗಿ ಮತ್ತು ಸಂಪನ್ಮೂಲ ಕ್ರೋಡೀಕರಣಕ್ಕೆ ವಿಶೇಷ ಸಂಸ್ಥೆಯನ್ನು ರಚಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.

ರಾಜ್ಯದ ಹತ್ತು ಹಲವು ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಏಷ್ಯಾ ಅಭಿವೃದ್ಧಿ ಬ್ಯಾಂಕ್, ವಿಶ್ವ ಬ್ಯಾಂಕ್ ಸೇರಿದಂತೆ ಸರ್ಕಾರಿ-ಖಾಸಗಿ ಸಹಭಾಗಿತ್ವದ ಅಡಿ ಯೋಜನೆಗಳನ್ನು ಸರ್ಕಾರವು 2011-12ನೇ ಸಾಲಿನಲ್ಲಿ ಹಮ್ಮಿಕೊಂಡಿದೆ.

ಏಷ್ಯಾ ಅಭಿವೃದ್ಧಿ ಬ್ಯಾಂಕ್ನ ನೆರವಿನೊಂದಿಗೆ ರಾಜ್ಯ ಹೆದ್ದಾರಿಗಳನ್ನು (ಒಟ್ಟು 600 ಕಿ.ಮೀ.) ಅಭಿವೃದ್ಧಿ ಪಡಿಸಲು ರೂಪುಗೊಳ್ಳಲಿರುವ ಒಟ್ಟು ರೂ 1,330 ಕೋಟಿ ವೆಚ್ಚದ ಕಾಮಗಾರಿ ವಿವರ: ಮಾಗಡಿ-ಕೊರಟಗೆರೆ, ಪಾವಗಡ-ಆಂಧ್ರಪ್ರದೇಶದ ಗಡಿ, ಗುಬ್ಬಿ-ಮಂಡ್ಯ, ಜಗಳೂರು ರಾಷ್ಟ್ರೀಯ ಹೆದ್ದಾರಿ 13-ರಾಜ್ಯ ಹೆದ್ದಾರಿ 19, ಪಡುಬಿದ್ರೆ-ಕಾರ್ಕಳ, ದಾವಣಗೆರೆ-ಬೀರೂರು, ಶೇಲ್ವಾಡಿ-ಮುಂಡರಗಿ, ಮುದ್ಗಲ್-ಗಂಗಾವತಿ, ಸವದತ್ತಿ-ಕಮತಗಿ.

ವಿಶ್ವಬ್ಯಾಂಕಿನಿಂದ ರೂ 657 ಕೋಟಿ ನೆರವಿನ ಕಾಮಗಾರಿಗಳ (ಒಟ್ಟು ರೂ 269 ಕಿ.ಮೀ) ವಿವರ- ಹೊಸಕೋಟೆ-ಚಿಂತಾಮಣಿ ಬೈಪಾಸ್, ಹಾವೇರಿ-ತಡಸ, ಧಾರವಾಡ-ಸವದತ್ತಿ, ತಿಂತಣಿ-ಕಲ್ಮಲ ಹಾಗೂ ಚೌಡಾಪುರ-ಗುಲ್ಬರ್ಗ. ಸರ್ಕಾರಿ-ಖಾಸಗಿ ಸಹಭಾಗಿತ್ವದಡಿ ರೂ 1,523 ಕೋಟಿ ವೆಚ್ಚದ ಕಾಮಗಾರಿಗಳ ವಿವರ- ಮಳವಳ್ಳಿ- ಪಾವಗಡ, ಮುಧೋಳ-ನಿಪ್ಪಾಣಿ, ಶಿವಮೊಗ್ಗ-ಹಾನಗಲ್ ಹಾಗೂ ಮನಗುಳಿ-ದೇವಪುರ.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಮೂಲಕ ರೂ 1,692 ಕೋಟಿ ವೆಚ್ಚದಲ್ಲಿ 702 ಕಿ.ಮೀ ಉದ್ದದ 17 ಹೊಸ ರಸ್ತೆ ಕಾಮಗಾರಿಗಳು ಹಾಗೂ 20 ಹೊಸ ಸೇತುವೆಗಳ ನಿರ್ಮಾಣ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.