ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿರುವ ರಸ್ತೆಗಳಲ್ಲಿ ಈಗ ಸಂಚರಿಸಲು ಸವಾರರು ಭಯಪಡುವಂತಾಗಿದೆ. ರಸ್ತೆಯಲ್ಲಿ ಸೃಷ್ಟಿಯಾಗಿರುವ ಉಗ್ಗು–ತಗ್ಗು, ಆಳವಾದ ಗುಂಡಿಗಳಿಂದ ವಾಹನ ಸವಾರರ ಜೀವಕ್ಕೆ ಸಂಚಕಾರ ಎದುರಾಗಿದೆ.

ಪ್ರಮುಖವಾಗಿ ಹೌಸಿಂಗ್್ ಬೋರ್ಡ್್ ಕಾಲೊನಿ ರಸ್ತೆ, ಜೋಡಿ ರಸ್ತೆ, ನ್ಯಾಯಾಲಯದ ರಸ್ತೆ, ಗುಂಡ್ಲುಪೇಟೆ ವೃತ್ತದ ಬಳಿಯ ರಸ್ತೆಗಳು ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು. ರಸ್ತೆ ಮಧ್ಯದಲ್ಲಿ ಒಳಚರಂಡಿಯ ಪೈಪ್ಲೈನ್್ ಅಳವಡಿಸುವ ಕೆಲಸ ನಡೆದಿದೆ. ಆ ವೇಳೆ ಮ್ಯಾನ್್ ಹೋಲ್ ಅಕ್ಕಪಕ್ಕದಲ್ಲಿ ಹಾಗೂ ಪೈಪ್್ ಮಾರ್ಗದ ಸ್ಥಳದಲ್ಲಿ ಗುಂಡಿ ಸೃಷ್ಟಿಯಾಗುವುದು ಸಾಮಾನ್ಯ. ಇಂತಹ ರಸ್ತೆಯಲ್ಲಿ ಸೃಷ್ಟಿಯಾಗಿರುವ ಸಣ್ಣಪುಟ್ಟ ಗುಂಡಿಗಳನ್ನು ಮುಚ್ಚದಿರುವ ಪರಿಣಾಮ ದ್ವಿಚಕ್ರವಾಹನ ಸವಾರರು, ಬೈಸಿಕಲ್ ಅವಲಂಬಿಸಿರುವ ವಿದ್ಯಾರ್ಥಿಗಳು ಹರಸಾಹಸ ಪಡುವಂತಾಗಿದೆ.

ಬಸ್ ಸಂಚರಿಸಲ್ಲ
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಜೆಎಸ್ಎಸ್ ಮಹಿಳಾ ಕಾಲೇಜಿನ ಪಕ್ಕದ ರಸ್ತೆ ಮೂಲಕ ಹೌಸಿಂಗ್ ಬೋರ್ಡ್ ಕಾಲೊನಿ ಮಾರ್ಗವಾಗಿ ಕರಿನಂಜನಪುರಕ್ಕೆ ಒಂದು ನಗರ ಸಾರಿಗೆ ಬಸ್ ಸಂಚರಿಸಲಿದೆ. ಆದರೆ, ಈ ಮಾರ್ಗದಲ್ಲಿ ಸೃಷ್ಟಿಯಾಗಿರುವ ಉಗ್ಗು–ತಗ್ಗು, ಗುಂಡಿಗಳ ಪರಿಣಾಮ ನಗರ ಸಾರಿಗೆ ಬಸ್ ಮಾರ್ಗ ಬದಲಿಸಿ ಸಂಚರಿಸುವಂತಾಗಿದೆ.

ನ್ಯಾಯಾಲಯದ ರಸ್ತೆ ಮಾರ್ಗವಾಗಿ ಕರಿನಂಜನಪುರಕ್ಕೆ ತೆರಳುತ್ತಿದೆ. ಇದರಿಂದ ಹೌಸಿಂಗ್ ಬೋರ್ಡ್ ಕಾಲೊನಿ, ಬುದ್ಧನಗರ, ಕರಿನಂಜನಪುರ ಹೊಸಬಡಾವಣೆಯ ಅಕ್ಕಪಕ್ಕದ ನಿವಾಸಿಗಳು ನಿತ್ಯವೂ ತೊಂದರೆ ಅನುಭವಿಸು ವಂತಾಗಿದೆ. ದುಬಾರಿ ಆಟೊ ದರಕ್ಕೆ ಜನರು ತತ್ತರಿಸಿದ್ದಾರೆ.

ಜೆಎಸ್ಎಸ್ ಕಾಲೇಜಿನ ಪಕ್ಕದಲ್ಲಿರುವ ರಸ್ತೆ ಹದಗೆಟ್ಟಿರುವ ಪರಿಣಾಮ ಬಸ್ ಸಂಚರಿಸಲು ಕಷ್ಟಕರವಾಗುತ್ತಿದೆ. ಈ ರಸ್ತೆಯನ್ನು ನಗರಸಭೆ ಯಿಂದ ಸರಿಪಡಿಸಿದರೆ ನಗರ ಸಾರಿಗೆ ಬಸ್ ಈ ಮಾರ್ಗವಾಗಿ ಸಂಚರಿಸಲಿದ್ದು, ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಜನರ ಆಗ್ರಹ.

‘ಒಳಚರಂಡಿ ಕಾಮಗಾರಿಗೂ ಮೊದಲೇ ರಸ್ತೆಗಳಿಗೆ ಡಾಂಬರು ಹಾಕಲಾಗಿತ್ತು. ಕೆಲವೇ ದಿನದಲ್ಲಿ ರಸ್ತೆ ಅಗೆಯಲಾಯಿತು. ಇದರಿಂದ ರಸ್ತೆಗಳು ಹೆದಗೆಟ್ಟವು. ಈಗ ಸಂಚರಿಸುವುದು ಕಷ್ಟಕರವಾಗಿದೆ. ಶಾಲಾ– ಕಾಲೇಜಿನ ವಿದ್ಯಾರ್ಥಿಗಳು ಬಹುತೇಕ ಬೈಸಿಕಲ್ನಲ್ಲಿ ಸಂಚರಿಸುತ್ತಾರೆ. ಗುಂಡಿಗಳಲ್ಲಿ ಚಕ್ರ ಸಿಲುಕಿ ಅಪಾಯಕ್ಕೆ ತುತ್ತಾಗುವ ಸಾಧ್ಯತೆಯಿದೆ. ಕೂಡಲೇ, ಬಸ್ ಮಾರ್ಗದ ರಸ್ತೆಯಲ್ಲಿ ಸೃಷ್ಟಿಯಾಗಿರುವ ಗುಂಡಿಗಳನ್ನು ಮುಚ್ಚಿಸಲು ನಗರಸಭೆ ಆಡಳಿತ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ವಾಹನ ಸವಾರ ಫಾಲಾಕ್ಷ.

ಜತೆಗೆ, ಜಿಲ್ಲಾ ಕೇಂದ್ರದಲ್ಲಿರುವ ಎಲ್ಲ ರಸ್ತೆಗಳ ಅಭಿವೃದ್ಧಿಗೆ ನಗರಸಭೆ ಆಡಳಿತ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಲಿದೆ ಎನ್ನುವುದು ಅವರ ಆತಂಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.