ಶನಿವಾರ, ಮೇ 8, 2021
18 °C

ರಸ್ತೆ ಹಲವು; ಸಮಸ್ಯೆ ಮಾತ್ರ ಒಂದೇ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರಿನಲ್ಲಿ ಸ್ವಲ್ಪ ಮಳೆ ಬಿದ್ದರೆ ಏನೇನು ಅನಾಹುತ ಆಗಲಿದೆ ಎಂಬುದಕ್ಕೆ ಈ ಹದಗೆಟ್ಟ ರಸ್ತೆಗಳೇ ಸಾಕ್ಷಿ. ಒಂದೆಡೆ ಕೊಳಚೆ ಪ್ರದೇಶಗಳಿಗೆ ನುಗ್ಗಿ ಅಲ್ಲಿನ ಬಡವರ ಬದುಕನ್ನು ನಾಶಗೊಳಿಸುವ ಮಳೆರಾಯ, ವರ್ಷಕ್ಕೊಮ್ಮೆ ರಿಪೇರಿ ಮತ್ತು ಗುಂಡಿಮುಚ್ಚುವ ಶಾಸ್ತ್ರ ಮಾಡುವ ಬಿಬಿಎಂಪಿಯ ಈ ರಸ್ತೆಗಳನ್ನೂ ಹದಗೆಡಿಸಿಬಿಡುತ್ತಾನೆ.ಕಡತಗಳು ಹಲವಾರು ಹಂತಗಳನ್ನು ದಾಟಿ ರಿಪೇರಿಗೆ ಆದೇಶ ಬರುವಷ್ಟರಲ್ಲಿ ನಗರದಲ್ಲಿ ಸುರಿಯುವ ಧಾರಾಕಾರ ಮಳೆ ಆ ರಸ್ತೆಗಳನ್ನು ಮತ್ತೆ ಹಾಳುಗೆಡವುತ್ತದೆ. ಬೆಂಗಳೂರು ನಗರಿಯ ರಸ್ತೆಗಳ ಅವ್ಯವಸ್ಥೆ ಮತ್ತು ವಾಹನ ಸವಾರರಿಗೆ ಅನುಭವಿಸಬೇಕಾದ ಸಂಕಷ್ಟಗಳನ್ನು ಛಾಯಾಚಿತ್ರಗಳೇ ವಿವರಿಸುತ್ತವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.