ಶನಿವಾರ, ಜನವರಿ 18, 2020
19 °C

ರಾಕ್ ಸಂಗೀತದ ಸಂಭ್ರಮದಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಕ್ರಾಂತಿ ಸಂಭ್ರಮಕ್ಕೆ ನಗರದಲ್ಲಿ ಏರ್ಪಡಿಸಿದ್ದ ಬೆಂಗಳೂರು ಹಬ್ಬದಲ್ಲಿ ನಡೆದ ರಾಕ್ ಸಂಗೀತ ರಸದೌತಣವನ್ನೇ ಉಣಬಡಿಸಿತು. ಕಿಂಗ್‌ಫಿಶರ್ ರಾಕ್ ಫೆಸ್ಟಿವಲ್‌ನಲ್ಲಿ ಪ್ರತಿಷ್ಠಿತ ತಂಡಗಳಾದ `ಥರ್ಮಲ್ ಅಂಡ್ ಎ ಕ್ವಾರ್ಟರ್~, `ಭೂಮಿ~, `ಸೀಸರ್ಸ್‌ ಪ್ಯಾಲೇಸ್~ ತಂಡಗಳು ಹಬ್ಬದಲ್ಲಿ ಪಾಲ್ಗೊಂಡಿದ್ದವು.ಈ ಮೂರು ತಂಡಗಳ ಸಂಗೀತ ಸುಧೆ ಆಸ್ವಾದಿಸಲು ಹಲವೆಡೆಯಿಂದ ಬಂದಿದ್ದ ನೂರಾರು ಪ್ರೇಕ್ಷಕರು ಯುಬಿ ಸಿಟಿಯ ಆಂಪಿಥಿಯೇಟರ್‌ನಲ್ಲಿ ಜಮೆಯಾಗಿದ್ದರು. `ಸೀಸರ್ಸ್‌ ಪ್ಯಾಲೆಸ್~ ಹಾಗೂ `ಭೂಮಿ~ ತಂಡಗಳು ನೆರೆದಿದ್ದ ಕೇಳುಗರ ಲಹರಿಯನ್ನು ಅರ್ಥೈಸಿಕೊಂಡು ಸಂಗೀತದ ಹೊಳೆ ಹರಿಸುತ್ತಿದ್ದರೆ ಕುಳಿತಿದ್ದ ಅಭಿಮಾನಿಗಳು ತಲೆದೂಗುತ್ತಾ ಹೆಜ್ಜೆ ಹಾಕಿದರು. ಬೆಂಗಳೂರು ಮೂಲದ `ಥರ್ಮಲ್ ಅಂಡ್ ಎ ಕ್ವಾರ್ಟರ್~ ತಂಡ ವೇದಿಕೆ ಅಲಂಕರಿಸುತ್ತಿದ್ದಂತೆ ತಂಪಾಗಿದ್ದ ಗಾಳಿಯೂ ಬಿಸಿಯಾದ ಅನುಭವ.ಕಳೆದ 14ರಿಂದ 16ರವರೆಗೆ ನಡೆದ ಕಿಂಗ್‌ಫಿಶರ್ ರಾಕ್ ಉತ್ಸವದಲ್ಲಿ ಹಲವಾರು ಕಲಾವಿದರು ಪಾಲ್ಗೊಂಡು ಅನೇಕ ಯುವಮನಸ್ಸುಗಳಿಗೆ ಸುಂದರ ಸಂಜೆಯನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿದರು.ಬೆಂಗಳೂರು ಹಬ್ಬದ ಭಾಗವಾಗಿ  ಕಿಂಗ್‌ಫಿಶರ್ ರಾಕ್ ಹಬ್ಬ ಯುಬಿ ಸಿಟಿಯಲ್ಲಿ ನಡೆಯಿತು. 

 

ಪ್ರತಿಕ್ರಿಯಿಸಿ (+)