`ಫೂಲೋಂಕಾ ತಾರೋಂ ಕಾ ಸಬ್ ಕಾ ಕೆಹೆನಾ ಹೈ ಏಕ್ ಹಜಾರೋಂ ಮೆ ಮೇರಿ ಬೆಹನಾ ಹೈ, ಸಾರಿ ಉಮರ್ ಹಮೆ ಸಂಗ್ ರೆಹೆನಾ ಹೈ...~

ಅಣ್ಣ-ತಂಗಿ ನಡುವಿನ ಬಾಂಧವ್ಯದ ಈ ಹಾಡನ್ನು ದೂರದಲ್ಲೆಲ್ಲೋ ಇದ್ದ ರೇಡಿಯೊ ಗುನುಗುತ್ತಿದ್ದರೆ ಖುಷಿಯಲ್ಲಿ ಮೈ ರೋಮ ಒಮ್ಮೆ ಸೆಟೆದು ನಿಲ್ಲುತ್ತದೆ. ಸಹೋದರತ್ವದ ಭಾವನೆಯೇ ಹಾಗೆ. ಒಬ್ಬಂಟಿಯಾಗಿ ಇರುವುದಕ್ಕಿಂತ ಅಕ್ಕ, ತಂಗಿ, ಅಣ್ಣತಮ್ಮಂದಿರ ಜೊತೆ ಕಲೆತು ನಲಿಯುವುದೂ ಒಂದು ಮಹದಾನಂದ. ಸಹೋದರತ್ವದ ಭಾವನೆಗೆ ಪ್ರತ್ಯೇಕ ದಿನವೊಂದು ಬೇಕಿಲ್ಲವಾದರೂ ಭಾರತೀಯ ಸಂಸ್ಕೃತಿಯನ್ನು ಸಾಂಕೇತಿಕವಾಗಿ ಪ್ರತಿನಿಧಿಸಲು ಇಂಥದ್ದೊಂದು ದಿನ ಬೇಕೆ ಬೇಕು ಎಂಬುದು ಸಹೋದರತ್ವ ಬಯಸುವ ಎಲ್ಲರ ಅಭಿಲಾಷೆ.

ಅಂದಹಾಗೆ ಇಂದು (ಆಗಸ್ಟ್ ಎರಡು) ರಕ್ಷಾ ಬಂಧನ ದಿನ. ನಗರದ ಹೆಚ್ಚಿನ ಎಲ್ಲಾ ಮಳಿಗೆಗಳಲ್ಲೂ ರಾಖಿಯದ್ದೇ ಕಾರುಬಾರು. ಅದರಲ್ಲೂ ಕೋಲ್ಕತ್ತಾ ರಾಖಿಗಳು ಎಲ್ಲಾ ಮಳಿಗೆಗಳನ್ನು ಸಿಂಗರಿಸಿವೆ. ಹುಡುಗಿಯರೆಲ್ಲಾ ಗುಂಪುಗುಂಪಾಗಿ ಅಂಗಡಿಗಳಿಗೆ ಮುಗಿಬಿದ್ದು ರಾಖಿ ಕೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ. ಇನ್ನೂ ಹಲವರು ಚಿನ್ನ, ವಜ್ರದ ರಾಖಿಗಳನ್ನು ತಯಾರಿಸಿ ಆಧುನೀಕರಣಕ್ಕೆ ಒಗ್ಗಿಕೊಂಡಿದ್ದೇವೆ ಎಂದು ಸಾಬೀತು ಮಾಡುತ್ತಿದ್ದಾರೆ.

ಆದರೆ ಇಲ್ಲೊಬ್ಬ ಯುವತಿಗೆ ರಾಖಿ ಮುಖ್ಯವಾಗಿಲ್ಲ. ಅಣ್ಣ ನೀಡುವ ಉಡುಗೊರೆಯ ಬಯಕೆಯಿಲ್ಲ. ಅಣ್ಣನ ಸುಂದರ ಭವಿಷ್ಯ ನೋಡಿ ತಾನೇ ದುಪ್ಪಟ್ಟು ಹಿಗ್ಗುತ್ತಾಳೆ. ಊಟಕ್ಕೂ ಪರದಾಡುತ್ತಿದ್ದ ಸಂಸಾರಕ್ಕೆ ಆಸರೆಯಾದೆನಲ್ಲ ಎಂದು ಖುಷಿಪಡುತ್ತಾಳೆ.

ಹೌದು, ಇವಳ ಖುಷಿಗೂ ಸಾಕಷ್ಟು ಕಾರಣವಿದೆ. ಈಕೆಯ ಹೆಸರು ಶ್ರೀಲತಾ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗಿರಿ ಊರಿನವಳು. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಅಪ್ಪ ಅಮ್ಮನಿಗೆ ಇರುವ ಮೂವರು ಮಕ್ಕಳಲ್ಲಿ ಇವಳು ಎರಡನೆಯವಳು. ಕಿತ್ತುತಿನ್ನುವ ಬಡತನವಿದ್ದರೂ ಸಾಧನೆಯ ಬಯಕೆಯನ್ನು ಕಂಗಳಲ್ಲಿ ತುಂಬಿಕೊಂಡಿದ್ದ ಅಣ್ಣನಿಗೆ ಆಸರೆಯಾಗಬೇಕು ಎಂದು ಚಿಕ್ಕ ವಯಸ್ಸಿನಲ್ಲೇ ಈಕೆ ನಿರ್ಧರಿಸಿಬಿಟ್ಟಿದ್ದಳು.

ಆಗ ಅವಳು 10ನೇ ತರಗತಿ ಮುಗಿಸಿದ್ದಳಷ್ಟೇ. ಐಎಎಸ್ ಓದೋಕೆ ಹಣ ಬೇಕು. ತರಬೇತಿ ಪಡೆಯದೆ ಇಂಥ ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗೋದು ಸಾಧ್ಯವೇ ಇಲ್ಲ ಎಂಬುದು ಈಕೆಗೂ ಗೊತ್ತಿತ್ತು. ಆದರೆ ತಂದೆಯ ಅಸಹಾಯಕತೆ, ಅಣ್ಣನ ಅದಮ್ಯ ಆಸೆ ಎರಡನ್ನೂ ಕಂಡು ತಾನೇ ಒಂದು ನಿರ್ಧಾರಕ್ಕೆ ಬಂದಳು. ಶಾಲೆ ಬಿಟ್ಟು ಒಂದೇ ತಿಂಗಳಲ್ಲಿ ಹೊಲಿಗೆ ಕಲಿತಳು. ತಾನೇ ಸ್ವತಂತ್ರಳಾಗಿ ಬಟ್ಟೆ ಹೊಲಿಯಲು ಪ್ರಾರಂಭಿಸಿದಳು. ಭರ್ಜರಿ ಹಣ ಬರದಿದ್ದರೂ ಮನೆ ಸಾಗಿಸೋಕೆ ಸಾಕಾಗುತ್ತಿತ್ತು. ಬುಟ್ಟಿ ನೇಯೋದು ಮುಂತಾದ ಸಣ್ಣಪುಟ್ಟ ಕೆಲಸ ಮಾಡಲೂ ಈಕೆ ಹಿಂಜರಿಯಲಿಲ್ಲ.

ಅಣ್ಣನ ಭವಿಷ್ಯಕ್ಕಾಗಿ ತಾನೇ ದುಡಿತಕ್ಕೆ ಮುಂದಾದ ಶ್ರೀಲತಾ, ಅಣ್ಣನಿಗೆ ದೆಹಲಿಯಲ್ಲಿ ತರಬೇತಿ ಪಡೆಯಲು ಅವಕಾಶ ಸಿಕ್ಕಾಗ ಹಿರಿಹಿರಿ ಹಿಗ್ಗಿದ್ದಳು. ಕೊನೆಗೆ 2009ನೇ ಬ್ಯಾಚ್ನಲ್ಲಿ ಅಣ್ಣ ಜಿ. ಶ್ರೀಕಾಂತ್ 97ನೇ ರ್ಯಾಂಕ್ ಎಂದಾಗ ಅವಳ ಖುಷಿಗೆ ಪಾರವೇ ಇರಲಿಲ್ಲ. `ನನ್ನ ಅಣ್ಣ ಐಎಎಸ್ ಅಧಿಕಾರಿ. ಮಹಾರಾಷ್ಟ್ರದಲ್ಲಿ ನಗರಪಾಲಿಕೆ ಆಯುಕ್ತರು~ ಎಂದು ಹೇಳಿಕೊಳ್ಳುವಾಗ ಆಕೆಯ ಕಣ್ಣುಗಳಲ್ಲಿ ಸಂಭ್ರಮದ ಹೊಳಪು ಎದ್ದು ಕಾಣುತ್ತಿತ್ತು.

ಆಯುಕ್ತನಾದ ಅಣ್ಣ ತಂಗಿಯ ಕಾಳಜಿ ಮರೆಯಲಿಲ್ಲ. ಐದು ವರ್ಷದ ಬಳಿಕ ಪಿಯುಸಿ ಕಲಿತ ಶ್ರೀಲತಾಗೆ ಶೇ 70 ಅಂಕ ಬಂತು. ತನಗಾಗಿ ಕಲಿಕೆ ಬಿಟ್ಟ ತಂಗಿಯ ಆಸಕ್ತಿ ಕಂಡು ಖುಷಿ ಪಟ್ಟ ಅಣ್ಣ ಆಕೆಯನ್ನು ಬೆಂಗಳೂರಿನ ಮಹಾರಾಣಿ ಕಾಲೇಜಿಗೆ ಸೇರಿಸಿದರು. ಇತಿಹಾಸ, ಕನ್ನಡ, ಅರ್ಥಶಾಸ್ತ್ರದಲ್ಲಿ ಬಿ.ಎ. ಮುಗಿಸಿದ ಶ್ರೀಲತಾಗೆ ಶೇ 79.86 ಅಂಕ ಬಂದಿದೆ. ಈಗ ಅವಳಿಗೆ ಅರ್ಥಶಾಸ್ತ್ರದಲ್ಲಿ ಎಂ.ಎ. ಮಾಡುವ ಕಾತರ. ಮುಂದೆ ಪ್ರೊಫೆಸರ್ ಆಗಿ ಸಾವಿರಾರು ಮಕ್ಕಳ ಬದುಕು ರೂಪಿಸುವ ತವಕ.

`ಮೂರು ಜನರನ್ನು ಓದಿಸುವುದು ಅಪ್ಪನಿಗೆ ತುಂಬಾ ಕಷ್ಟವಾಗಿತ್ತು. ಅಣ್ಣ 10ನೇ ತರಗತಿ ನಂತರ ಬಿಸಿಆರ್ಸಿ ಪರೀಕ್ಷೆ ಬರೆದ. ಮೊದಲ ಸಲವೇ ಪಾಸಾಗಿ ಕೆಲಸವನ್ನೂ ಗಿಟ್ಟಿಸಿದ. ಆದರೆ ಅವನಲ್ಲಿ ಐಎಎಸ್ ಮಾಡುವ ಆಸೆ ಮಾಸಿರಲಿಲ್ಲ. ಹಾಗಾಗಿ ನಾನು ಕೆಲಸ ಮಾಡೋಕೆ ಶುರು ಮಾಡಿದೆ. ಮನೆಗೆ ಆಸರೆಯಾದ ಹಾಗೂ ಅಣ್ಣನ ಭವಿಷ್ಯ ಉಜ್ವಲವಾದ ಖುಷಿ ಸದಾ ನನಗಿದೆ. ನಾನಾಗ ಅಣ್ಣನ ಓದಿಗೆ ಸಹಕರಿಸಿದೆ. ಈಗ ನನ್ನನ್ನು ಆತ ಓದಿಸುತ್ತಿದ್ದಾನೆ. ನಿನಗೆ ಎಷ್ಟು ಕಲೀಬೇಕೊ ಅಷ್ಟು ಓದು ಎಂದೂ ಹೇಳಿದ್ದಾನೆ. ಈಗಲೇ ಮದುವೆ ಬೇಡ ಓದಬೇಕು ಎಂಬ ನನ್ನ ಆಸೆಯನ್ನೂ ಅಪ್ಪ ಅಮ್ಮನಿಗೆ ಆತನೇ ಮನವರಿಕೆ ಮಾಡಿಕೊಟ್ಟಿದ್ದಾನೆ. ಇಂಥ ಅಣ್ಣ ಸಿಗೋದು ಅದೃಷ್ಟವೇ ಸರಿ~ ಎನ್ನುತ್ತಾ ಹೆಮ್ಮೆ ಪಡುತ್ತಾರೆ ಶ್ರೀಲತಾ.

ಇಷ್ಟೆಲ್ಲಾ ಮಾಡಿಯೂ ಗರ್ವದ ಎಲ್ಲೆ ದಾಟದ ಶ್ರೀಲತಾ `ನಾವು ಅಣ್ಣನಿಗೆ ಕೇವಲ ಹಣದ ಸಹಾಯ ಮಾಡಿದೆವಷ್ಟೇ. ಆದರೆ ಆತ ಓದಿ ಅವನ ಕನಸನ್ನು ನನಸು ಮಾಡಿಕೊಂಡ. ಐಎಎಸ್ ಎಂದರೆ ಸುಲಭವಲ್ಲ. ಅಷ್ಟು ಕಷ್ಟದ ಪರೀಕ್ಷೆಗೆ ಹಗಲು ಇರುಳೆನ್ನದೆ ಓದಿ ಪಾಸಾದ. ಅವನೇ ಗ್ರೇಟ್~ ಎನ್ನುತ್ತಾರೆ.

ಹೆಚ್ಚೂ ಕಡಿಮೆ 20 ವರ್ಷ ಕಷ್ಟದಲ್ಲೇ ಬದುಕಿದ ಶ್ರೀಲತಾ ಕುಟುಂಬಕ್ಕೆ ಈಗ ಅಣ್ಣ ಶ್ರೀಕಾಂತ್ ಬೆಂಬಲವಾಗಿದ್ದಾರೆ. ಕಷ್ಟಪಟ್ಟು ಸಾಕಿದ ಅಮ್ಮ ಅಪ್ಪನನ್ನು ಮಹಾರಾಷ್ಟ್ರಕ್ಕೆ ಕರೆಸಿಕೊಂಡು ತಮ್ಮ ಜೊತೆಯಲ್ಲೇ ಉಳಿಸಿಕೊಂಡಿದ್ದಾರೆ. ಶ್ರೀಲತಾ ಕುಟುಂಬಕ್ಕೆ ಈಗ ಸಂತಸದ ದಿನಗಳು.

`ಅಣ್ಣ ತಂಗಿ ಸಂಬಂಧಕ್ಕೆ ಒಂದು ದಿನ ಅಂತ ಅಂದುಕೊಳ್ಳೋಕೆ ಸಾಧ್ಯವೇ ಇಲ್ಲ. ಆದರೆ ರಕ್ಷಾ ಬಂಧನದಂಥ ದಿನಗಳು ನಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿ ಮಾಡಲು ಇರುವ ನೆಪಗಳಷ್ಟೇ. ನಾನು ಅತಿಯಾಗಿ ಪ್ರೀತಿಸುವ ಅಣ್ಣ ಇರುವುದು ದೂರದ ಮಹಾರಾಷ್ಟ್ರದಲ್ಲಿ. ಒಂದು ವರ್ಷವೂ ರಾಖಿ ಹಬ್ಬವನ್ನು ತಪ್ಪಿಸಿಕೊಂಡಿಲ್ಲ. ಈಗಲೂ ಮಹಾರಾಷ್ಟ್ರಕ್ಕೆ ಹೊರಟಿದ್ದೇನೆ. ರಕ್ಷಾ ಬಂಧನ ಆಚರಣೆ ಈ ಬಾರಿ ಅಲ್ಲೇ...~ ಎನ್ನುತ್ತಾ ರಾಖಿ ಹಬ್ಬ ನೆನಪಿಸಿಕೊಂಡು ಸಂತಸಪಟ್ಟರು ಶ್ರೀಲತಾ.

ನಾನೇ ರಾಖಿ ಕಟ್ಟಬೇಕು

`ಅಣ್ಣ ತಂಗಿ ಸಂಬಂಧ ಭಾವನೆಗಳ ಮೇಲೆ ನಿಂತಿದೆ. ಅಣ್ಣನು ತಂಗಿಗೆ ಬೆಂಬಲವಾಗಿರಬೇಕು. ಆದರೆ ನನ್ನ ವಿಷಯದಲ್ಲಿ ತಂಗಿ ಬದುಕು ರೂಪಿಸಿಕೊಳ್ಳಲು ಸಹಾಯ ಮಾಡಿದಳು. ಅವಳು ನನಗೆ ರಾಖಿ ಕಟ್ಟುವ ಬದಲು ನಾನೇ ಅವಳಿಗೆ ರಾಖಿ ಕಟ್ಟಬೇಕು. ಅವಳ ಸಹಾಯವನ್ನು ಯಾವತ್ತೂ ಮರೆಯೋಕಾಗಲ್ಲ. ಈಗ ನನ್ನ ಸರದಿ. ಅವಳಿಗೆ ಏನಾಗಬೇಕು ಎಂದು ಆಸೆ ಇದೆಯೋ ಅದನ್ನೇ ಓದಿಸುತ್ತೇನೆ. ಅವಳೂ ಐಎಎಸ್ ಅಧಿಕಾರಿ ಆಗಬೇಕು ಎಂಬುದು ನನ್ನ ಆಸೆ. ಆದರೆ ಅವಳಿಗೆ ಪ್ರೊಫೆಸರ್ ಆಗಬೇಕು ಎಂಬ ಆಸೆ. ಅದನ್ನೂ ನಾನು ಬೆಂಬಲಿಸುತ್ತೇನೆ. ಐಎಎಸ್ ಅಧಿಕಾರಿಯಾದವರು ಪ್ರೊಫೆಸರ್ ಆಗಬಹುದು. ಆದರೆ ಪ್ರೊಫೆಸರ್ ಆದವರು ಐಎಎಸ್ ಅಧಿಕಾರಿ ಆಗೋಕಾಗಲ್ಲ. ಅದಕ್ಕೇ ದೊಡ್ಡ ಕನಸು ಕಾಣು ಎಂದಿದ್ದೇನೆ ಅಥವಾ ಸಾವಿರಾರು ವಿದ್ಯಾರ್ಥಿಗಳನ್ನು ಐಎಎಸ್ ಅಧಿಕಾರಿಗಳನ್ನಾಗಿಸು ಎಂದಿದ್ದೇನೆ~ ಎಂದು ಮುದ್ದು ತಂಗಿಯ ಬಗ್ಗೆ ಅಭಿಮಾನದಿಂದ ನುಡಿಯುತ್ತಾರೆ ಜಿ. ಶ್ರೀಕಾಂತ್.

ಮಕ್ಕಳೇ ಬದುಕಿನ ಆಸ್ತಿ

`ಹತ್ತು ಎಕರೆ ಹೊಲ ಇತ್ತು. ಕೊನೆಗೆ ಬೆಳೆ ಬಾರದೆ ನಷ್ಟವಾಯಿತು. ಹೀಗಾಗಿ ಜಮೀನು ಮಾರಲೇಬೇಕಾಯಿತು. ಕಿರಾಣಿ ಅಂಗಡಿ ತೆರೆದೆವು. ಐಎಎಸ್ ಓದುವ ಆಸೆ ಮಗನಿಗಿದ್ದಿದ್ದರಿಂದ ಶ್ರೀಲತಾ ತಾನೂ ದುಡಿಯುತ್ತೇನೆ ಎಂದಳು. ಹೇಗೋ ಜೀವನ ಸಾಗಿತು. ಶ್ರೀಕಾಂತ್ ಐಎಎಸ್ ಅಧಿಕಾರಿ ಆದ. ಐದು ವರ್ಷದ ನಂತರ ಕಲಿತ ಮಗಳೂ ಉತ್ತಮ ಸಾಧನೆ ಮಾಡುತ್ತಿದ್ದಾಳೆ. ಬೆಂಗಳೂರಿನ ಮಹಾರಾಣಿ ಕಾಲೇಜಿನ್ಲ್ಲಲಿ ವಿದ್ಯಾರ್ಥಿ ಒಕ್ಕೂಟದ ನಾಯಕಿಯಾಗಿಯೂ ಮಿಂಚಿದ್ದಳು. ಅಣ್ಣ ತಂಗಿಯ ಕಲಿಯುವ ಉತ್ಸಾಹ ನೋಡಿ ನಾನೂ ಮೈಸೂರು ಮುಕ್ತ ವಿವಿಯಲ್ಲಿ ಕಳೆದ ವರ್ಷವಷ್ಟೇ ಬಿ.ಎ. ಮೊದಲನೇ ವರ್ಷ ಮುಗಿಸಿದ್ದೇನೆ~ ಎನ್ನುತ್ತಾರೆ ಶ್ರೀಲತಾ ತಂದೆ ನರಸಪ್ಪ ಸಜ್ಜನ್.

ರಕ್ಷಾ ಬಂಧನದ ಅರ್ಥವೇ ಮಾಸುತ್ತಿದೆಯೇನೋ ಎಂಬ ವಾತಾವರಣದ ನಡುವೆ ಕಾಣುವ ಇಂಥ ಅದೆಷ್ಟೋ ಕಥೆಗಳು ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ಅಣ್ಣನು ತಂಗಿಗಾಗಿ, ತಂಗಿಯು ಅಣ್ಣನ ಯಶಸ್ಸಿಗಾಗಿ ಹಂಬಲಿಸುವ ಈ ಕಥನ ಮತ್ತೆಷ್ಟೋ ಬದುಕಿಗೆ ಆದರ್ಶವಾಗುತ್ತದೆ. ಈ ಕಥನದ ಅಣ್ಣ-ತಂಗಿ ಮಾತು ಮುಗಿಸುವ ಹೊತ್ತಿಗೆ ರೇಡಿಯೋ ಇನ್ನೊಂದು ಹಾಡು ಹೇಳುತ್ತಿತ್ತು.. `ದೇಖ್ ಸಕ್ತಾ ಹೂಂ ಮೈ.. ಕುಛ್ ಭಿ ಹೋತೆ ಹುವೆ.. ನಹಿ ಮೈ ನಹಿ ದೇಖ್ ಸಕ್ತಾ ತುಝೆ ರೋತೆಹುಯೆ~ (ಏನೇ ಆದರೂ ನಾನದನ್ನು ನೋಡಬಲ್ಲೆ, ಆದರೆ ನೀನು ಅಳುವುದನ್ನು ಮಾತ್ರ ನೋಡಲಾರೆ)!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.